Amazon ಸಂಸ್ಥೆಯ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

HIGHLIGHTS

ಅಮೆಜಾನ್‌ನ ಈ ನೂತನ ಕಚೇರಿ 12 ಅಂತಸ್ತುಗಳನ್ನು ಒಳಗೊಂಡಿದೆ

ಇದು 200ಕ್ಕೂ ಹೆಚ್ಚು ಜನರಿಗೆ ಅವಕಾಶ ನೀಡುವ ಈವೆಂಟ್ ಸ್ಪೇಸ್‌ ಒಳಗೊಂಡಿದೆ

ಇದು 7,000 ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುವ ಸ್ಥಳಾವಕಾಶ ಹೊಂದಿದೆ

Amazon ಸಂಸ್ಥೆಯ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

Amazon ಇಂದು (ಫೆಬ್ರವರಿ 23 ರಂದು) ಏಷ್ಯಾದಲ್ಲಿ ತನ್ನ ಎರಡನೇ ಅತಿ ದೊಡ್ಡ ಕಚೇರಿಯನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಈ ಕಟ್ಟಡವನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ. ಪಾಟೀಲ್ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಇದು 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣದ 12 ಅಂತಸ್ತುಗಳ ಈ ಕ್ಯಾಂಪಸ್ ಭಾರತದಲ್ಲಿ ಇ-ಕಾಮರ್ಸ್, ಕಾರ್ಯಾಚರಣೆ, ಪಾವತಿಗಳು, ತಂತ್ರಜ್ಞಾನ ಮತ್ತು ಮಾರಾಟಗಾರರ ಸೇವೆಗಳಲ್ಲಿ ತೊಡಗಿರುವ 7,000 ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುವ ಸ್ಥಳಾವಕಾಶ ಹೊಂದಿದೆ.

Digit.in Survey
✅ Thank you for completing the survey!

Also Read : ಶೀಘ್ರದಲ್ಲೇ ಕೈಗೆಟುವ ಬೆಲೆಯಲ್ಲಿ iPhone 17e ಲಾಂಚ್‌! ಫೀಚರ್ಸ್‌ ಮತ್ತು ಬೆಲೆ ಮಾಹಿತಿ ಇಲ್ಲಿದೆ

ಸಚಿವ ಡಾ. ಎಂ.ಬಿ. ಪಾಟೀಲ್ ಮಾತನಾಡಿ, ಬೆಂಗಳೂರಿನಲ್ಲಿ ಅಮೆಜಾನ್‌ ನಿರಂತರ ಹೂಡಿಕೆ ಮಾಡುತ್ತಿದ್ದು, ಈ ಹೂಡಿಕೆಗಳು ಜಾಗತಿಕ ತಂತ್ರಜ್ಞಾನ ಮತ್ತು ಆವಿಷ್ಕಾರ ಕೇಂದ್ರವಾಗಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ತೋರಿಸುತ್ತದೆ. ಅಮೆಜಾನ್‌ ನಂತಹ ಬೃಹತ್ ಕ್ಯಾಂಪಸ್‌ ಗಳು ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಬಲಪಡಿಸುತ್ತವೆ. ನಾವು ಉದ್ಯೋಗಾವಕಾಶ ಹೆಚ್ಚಿಸುವ ಮತ್ತು ದೀರ್ಘಕಾಲೀನ ಸಂಬಂಧ ಬೆಳೆಸುವ ಹೂಡಿಕೆಗಳಿಗೆ ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದರು.

amazon

Amazon ಗೆ ಭಾರತವು ಆದ್ಯತೆಯ ಕೇಂದ್ರ

ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ಮಾತನಾಡಿ, ಅಮೆಜಾನ್‌ ಗೆ ಭಾರತವು ಆದ್ಯತೆಯ ಕೇಂದ್ರವಾಗಿದ್ದು, ಬೆಂಗಳೂರು ನಮ್ಮ ಪ್ರಯಾಣದಲ್ಲಿ ಕೇಂದ್ರ ಪಾತ್ರ ವಹಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿ ನಮ್ಮ ಕೆಲವು ಹೊಸ ತಂತ್ರಜ್ಞಾನಗಳು ಮತ್ತು ಬಿಸಿನೆಸ್ ತಂಡಗಳು ಇಲ್ಲೇ ರೂಪುಗೊಂಡಿವೆ ಮತ್ತು ಇದು ಆವಿಷ್ಕಾರ ಮತ್ತು ಪ್ರತಿಭಾ ಸಂಪನ್ಮೂಲಗಳ ವಿಚಾರದಲ್ಲಿ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ನಾವು ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದುತ್ತಿರುವಂತೆ ಇಲ್ಲಿ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಪ್ರತಿಭೆಗಳಲ್ಲಿ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಕ್ಯಾಂಪಸ್‌ ವಿಶಿಷ್ಟವಾಗಿ ಮೂಡಿಬಂದಿದೆ. ಈ ಕ್ಯಾಂಪಸ್‌ ನಲ್ಲಿ ಅತ್ಯುತ್ತಮ ವರ್ಕ್ ಪ್ಲೇಸ್ ಗಳು ಹಾಗೂ ಸಹಯೋಗ ಕೊಠಡಿಗಳು ವಿನ್ಯಾಸಗೊಂಡಿವೆ. ಮೀಟಿಂಗ್ ರೂಮ್‌ಗಳು, ಹಡಲ್ ಸ್ಪೇಸ್‌ಗಳು ಮತ್ತು 200ಕ್ಕೂ ಹೆಚ್ಚು ಜನರಿಗೆ ಅವಕಾಶ ನೀಡುವ ಈವೆಂಟ್ ಸ್ಪೇಸ್‌ ಗಳಿವೆ. ಉದ್ಯೋಗಿಗಳಿಗಾಗಿ ಬಾಸ್ಕೆಟ್‌ ಬಾಲ್ ಮತ್ತು ಪಿಕಲ್‌ ಬಾಲ್ ಕೋರ್ಟ್‌ ಗಳು, ಆಂಫಿಥಿಯೇಟರ್ ಮತ್ತು ಹೊರಾಂಗಣ ಸಭಾ ಸ್ಥಳಗಳಿವೆ. ಅಮೆಜಾನ್ ನ ಈ ಹೊಸ ಕ್ಯಾಂಪಸ್ 2040 ರ ವೇಳೆಗೆ ನೆಟ್-ಝೀರೋ ಕಾರ್ಬನ್ ತಲುಪುವ ಅಮೆಜಾನ್ ಗುರಿಗೆ ಅನುಗುಣವಾಗಿ ಮರುಬಳಕೆಯ ವಸ್ತುಗಳು ಮತ್ತು ಪರಿಸರ ಸ್ನೇಹಿ ವ್ಯವಸ್ಥೆಗಳ ಮೂಲಕ ವಿನ್ಯಾಸಗೊಂಡಿದೆ. ಅತ್ಯುತ್ತಮ ಕಾರ್ಯಕ್ಷಮತೆಯ ವಸ್ತುಗಳನ್ನು ಬಳಸಿ ಈ ಕೇಂದ್ರ ರೂಪಿಸಲಾಗಿದೆ.

ಕರ್ನಾಟಕದಲ್ಲಿ ಅಮೆಜಾನ್

ಕರ್ನಾಟಕದಲ್ಲಿ ಅಮೆಜಾನ್ ಬಲವಾದ ಅಸ್ತಿತ್ವವನ್ನು ಹೊಂದಿದೆ. ರಾಜ್ಯದಲ್ಲಿ 10 ಕಾರ್ಪೊರೇಟ್ ಕಚೇರಿಗಳು, 7 ಫುಲ್‌ ಫಿಲ್‌ಮೆಂಟ್ ಸೆಂಟರ್‌ ಗಳು, 3 ಸಾರ್ಟ್ ಸೆಂಟರ್‌ ಗಳು ಮತ್ತು 130ಕ್ಕೂ ಹೆಚ್ಚು ಡೆಲಿವರಿ ಕೇಂದ್ರಗಳಿವೆ. ಅಲ್ಲದೆ, ಕರ್ನಾಟಕದ 80,000 ಕ್ಕೂ ಹೆಚ್ಚು ಮಾರಾಟಗಾರರು Amazon.in ಮೂಲಕ ತಮ್ಮ ವ್ಯಾಪಾರ ಮಾಡುತ್ತಿದ್ದಾರೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo