ನೀವು ಐಆರ್‌ಸಿಟಿಸಿ (IRCTC) ಮೂಲಕ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವರರಲ್ಲಿ ಒಬ್ಬರಾಗಿದ್ದೀರಾ?
KYC ಪೂರ್ಣಗೊಳಿಸದ, Ai ಆಧಾರಿತದ ಅಥವಾ ನಕಲಿ ಐಡಿಗಳಿಂದ ತೆರೆಯಲಾದ IRCTC ಖಾತೆಯಾಗಳನ್ನು ಬಂದ್ ಮಾಡುತ್ತಿದೆ.
ನೀವು ಸಹ ಇದೇ ರೀತಿ ಮಾಡುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ ಎಂದು ಐಆರ್‌ಸಿಟಿಸಿ ವಾರ್ನಿಂಗ್ ನೀಡಿದೆ.
ನೀವು ಐಆರ್‌ಸಿಟಿಸಿ (IRCTC) ಮೂಲಕ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವರರಲ್ಲಿ ಒಬ್ಬರಾಗಿದ್ದಾರೆ ಈ ಸುದ್ದಿಯನ್ನು ತಿಳಿದುಕೊಳ್ಳುವುದು ನಿಮಗೆ ಬಹಳ ಮುಖ್ಯವಾಗಲಿದೆ. ವಾಸ್ತವವಾಗಿ ಭಾರತೀಯ ರೈಲ್ವೆ ನಕಲಿ ಬುಕಿಂಗ್ ಅನ್ನು ನಿಲ್ಲಿಸಲು ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Ai) ತಂತ್ರಜ್ಞಾನವನ್ನು ಬಳಸಿಕೊಂಡು ಕಳೆದ 6 ತಿಂಗಳಲ್ಲಿ ಸುಮಾರು 2.4 ಕೋಟಿ ಖಾತೆಗಳನ್ನು ಬ್ಯಾನ್ ಮಾಡಲು ಮಹತ್ವದ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಬಳಕೆದಾರರು ಮಾಡುತ್ತಿರುವ ಕೆಲವು ಅಕ್ರಮಗಳಿಂದಾಗಿ ಈ ಖಾತೆಗಳನ್ನು ಮುಚ್ಚಲಾಗಿದೆ. ಒಟ್ಟಾರೆಯಾಗಿ KYC ಪೂರ್ಣಗೊಳಿಸದ, Ai ಆಧಾರಿತದ ಅಥವಾ ನಕಲಿ ಐಡಿಗಳಿಂದ ತೆರೆಯಲಾದ IRCTC ಖಾತೆಯಾಗಳನ್ನು ಬಂದ್ ಮಾಡುತ್ತಿದೆ. ನೀವು ಸಹ ಇದೇ ರೀತಿ ಮಾಡುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ ಎಂದು ಐಆರ್‌ಸಿಟಿಸಿ ವಾರ್ನಿಂಗ್ ನೀಡಿದೆ.
SurveyIRCTC ಹೇಳ್ದೆ ಕೇಳ್ದೆ ಖಾತೆಗಳನ್ನು ಬಂದ್ ಮಾಡುತ್ತಿದೆ!
ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ಬುಕ್ ಮಾಡುವ ಇಂತಹ ಹಲವು ಸಾಧನಗಳು ಬಂದಿವೆ. ಈ ಕಾರಣದಿಂದಾಗಿ ರೈಲ್ವೆಗಳು ಈ ಬಾಟ್‌ಗಳು ಮತ್ತು ಸ್ವಯಂಚಾಲಿತ ಪರಿಕರಗಳನ್ನು ಬಳಸಿಕೊಂಡು ತತ್ಕಾಲ್ ಅಥವಾ ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದ ಸಾವಿರಾರು ಬಳಕೆದಾರರನ್ನು ಟ್ರ್ಯಾಕ್ ಮಾಡಿವೆ. ಇದರಿಂದಾಗಿ ಸಾಮಾನ್ಯ ಬಳಕೆದಾರರಿಗೆ ಟಿಕೆಟ್‌ಗಳನ್ನು ಪಡೆಯುವುದು ಕಷ್ಟಕರವಾಗುತ್ತಿದೆ.

ಇದರ ನಂತರ ಈ ನಕಲಿ ಖಾತೆಗಳನ್ನು ಗುರುತಿಸಲು AI ಮ್ಯಾನೇಜ್ಮೆಂಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಯಿತು ಇದು ಈಗ ಆಧಾರ್ ಪರಿಶೀಲನೆ ಇಲ್ಲದೆ ಖಾತೆಗಳನ್ನು ಸ್ಕ್ಯಾನ್ ಮಾಡುತ್ತಿದೆ. ಪ್ರಸ್ತುತ IRCTC ಪ್ರಸ್ತುತ 13 ಕೋಟಿ ಬಳಕೆದಾರರನ್ನು ಹೊಂದಿದ್ದು ಅದರಲ್ಲಿ ಕೇವಲ 1.2 ಕೋಟಿ ಖಾತೆಗಳನ್ನು ಮಾತ್ರ ಆಧಾರ್‌ನೊಂದಿಗೆ ಪರಿಶೀಲಿಸಲಾಗಿದೆ. ಅಂದರೆ ಉಳಿದ ಬಳಕೆದಾರರು ಇನ್ನೂ ಅಪಾಯದಲ್ಲಿದ್ದಾರೆ ಅವರ ಖಾತೆಗಳನ್ನು ಸಹ ನಿರ್ಬಂಧಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಖಾತೆಯನ್ನು ನಿರ್ಬಂಧಿಸಲು ನೀವು ಬಯಸದಿದ್ದರೆ ನೀವು ಸಾಧ್ಯವಾದಷ್ಟು ಬೇಗ ಆಧಾರ್‌ನೊಂದಿಗೆ ನಿಮ್ಮ IRCTC ಖಾತೆಯನ್ನು ಪರಿಶೀಲಿಸಬೇಕು.
ಇದನ್ನೂ ಓದಿ: ಇನ್ಮೇಲೆ ಫೀಚರ್ ಫೋನ್‌ನಿಂದಲೂ ಪೇಮೆಂಟ್ ಮಾಡಿ! PhonePe ಫೀಚರ್ ಫೋನ್‌ಗಳಿಗಾಗಿ ಹೊಸ ಅಪ್ಲಿಕೇಶನ್ ಪರಿಚಯಿಸಲಿದೆ!
ಟಿಕೆಟ್ ಬುಕಿಂಗ್ಗಾಗಿ ನೀವು ಈ ಕೆಲಸ ಮಾಡುತ್ತಿದ್ದರೆ ಎಚ್ಚರ!
ವಾಸ್ತವವಾಗಿ ರೈಲು ಟಿಕೆಟ್ ಬುಕಿಂಗ್ ಅನ್ನು ಸುರಕ್ಷಿತವಾಗಿಸಲು ರೈಲ್ವೆ ಈ ದೊಡ್ಡ ಹೆಜ್ಜೆ ಇಟ್ಟಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ಸಮಯದಲ್ಲಿ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಅಂದರೆ ಆಧಾರ್‌ಗೆ ಖಾತೆಯನ್ನು ಲಿಂಕ್ ಮಾಡಲಾದ ಬಳಕೆದಾರರಿಗೆ ಈಗ ಟಿಕೆಟ್ ಬುಕಿಂಗ್‌ಗೆ 10 ನಿಮಿಷಗಳ ಹೆಚ್ಚುವರಿ ಸಮಯ ಸಿಗುತ್ತದೆ. ಅಂದರೆ ಅಧಿಕೃತ ಏಜೆಂಟರು ಸಹ ಆ ಸಮಯದಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಸುರಕ್ಷಿತ ಬುಕಿಂಗ್ ಮಾಡಬಹುದು ಮತ್ತು ನಿಮ್ಮ ಸೀಟು ದೃಢೀಕರಿಸಲ್ಪಡುವ ಸಾಧ್ಯತೆಗಳು ಹೆಚ್ಚಾಗುತ್ತವೆ.
IRCTC ಖಾತೆಯನ್ನು Aadhaar ಜೊತೆ ಲಿಂಕ್ ಮಾಡುವುದು ಹೇಗೆ?
- ಇದಕ್ಕಾಗಿ ಮೊದಲು IRCTC ವೆಬ್‌ಸೈಟ್‌ಗೆ ಹೋಗಿ.
- ಇಲ್ಲಿಂದ ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ.
- ಈಗ ‘ನನ್ನ ಖಾತೆ’ ವಿಭಾಗಕ್ಕೆ ಹೋಗಿ.
- ಇಲ್ಲಿಂದ ‘ಲಿಂಕ್ ಯುವರ್ ಆಧಾರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.
- ಇದರ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ.
- ಕೊನೆಯಲ್ಲಿ ನೀವು ‘ಅಪ್‌ಡೇಟ್’ ಬಟನ್ ಕ್ಲಿಕ್ ಮಾಡಿದ ನಂತರ ಪರಿಶೀಲನೆ ಮಾಡಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile