ಭಾರತೀಯ ಜೈಲುಗಳಲ್ಲಿ 24×7 ಗಂಟೆ ಖೈದಿಗಳ ಮೇಲೆ ಕಣ್ಣಿಡಲು ವಿಶೇಷ AI ಕ್ಯಾಮೆರಾ ಸಿಸ್ಟಮ್ ಅಳವಡಿಕೆಗೆ ಸರ್ಕಾರ ಸಜ್ಜು!

HIGHLIGHTS

ಪ್ರಸ್ತುತ 24x7 ಗಂಟೆ ಖೈದಿಗಳ ಮೇಲೆ ಕಣ್ಣಿಡಲು ವಿಶೇಷ AI ಕ್ಯಾಮೆರಾ ಸಿಸ್ಟಮ್ ಅಳವಡಿಕೆಗೆ ಸರ್ಕಾರ ಸಜ್ಜಾಗಿದೆ.

ಈ ಕ್ಯಾಮೆರಾ ತಾವಾಗಿ ಜೈಲಿನಲ್ಲಿ ನಡೆಯುವ ತಪ್ಪು ಕೆಲಸಗಳನ್ನು ಗುರುತಿಸಿ ಅಧಿಕಾರಿಗಳಿಗೆ ಕೂಡಲೇ ಅಲರ್ಟ್ ನೀಡುತ್ತವೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು (AI Surveillance System) ಅಳವಡಿಸಲು ಪ್ಲಾನ್ ಮಾಡುತ್ತಿದ್ದಾರೆ.

ಭಾರತೀಯ ಜೈಲುಗಳಲ್ಲಿ 24×7 ಗಂಟೆ ಖೈದಿಗಳ ಮೇಲೆ ಕಣ್ಣಿಡಲು ವಿಶೇಷ AI ಕ್ಯಾಮೆರಾ ಸಿಸ್ಟಮ್ ಅಳವಡಿಕೆಗೆ ಸರ್ಕಾರ ಸಜ್ಜು!

ಇಂದಿನ ದಿನಗಳಲ್ಲಿ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಕೆ ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ತುಂಬಾ ವೇಗವಾಗಿ ಬೆಳೆಯುತ್ತಿದೆ. ಈಗ ಇದನ್ನು ಬಳಸಿಕೊಂಡು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಕರ್ನಾಟಕದ ಜೈಲುಗಳ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಇತ್ತೀಚೆಗೆ ಜೈಲುಗಳ ಸುರಕ್ಷತೆಯನ್ನು ಇನ್ನಷ್ಟು ಗಟ್ಟಿ ಮಾಡಲು ಒಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಜೈಲುಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು (AI Surveillance System) ಅಳವಡಿಸಲು ಪ್ಲಾನ್ ಮಾಡುತ್ತಿದ್ದಾರೆ. ಈ ಸಿಸ್ಟಮ್‌ನ ಟೆಸ್ಟಿಂಗ್ ಈಗಾಗಲೇ ಶುರುವಾಗಿದ್ದು ಇದು ಕ್ಯಾಮೆರಾಗಳನ್ನು ಎಷ್ಟು ಚುರುಕುಗೊಳಿಸುತ್ತದೆ ಎಂದರೆ ಅವುಗಳೇ ತಾವಾಗಿ ಜೈಲಿನಲ್ಲಿ ನಡೆಯುವ ತಪ್ಪು ಕೆಲಸಗಳನ್ನು ಗುರುತಿಸಿ ಅಧಿಕಾರಿಗಳಿಗೆ ಕೂಡಲೇ ಅಲರ್ಟ್ ನೀಡುತ್ತವೆ. ಇದರಿಂದ ಜೈಲಿನಲ್ಲಿ ನಡೆಯುವ ಕಳ್ಳಾಟ ಅಥವಾ ಕಾನೂನುಬಾಹಿರ ಕೆಲಸಗಳನ್ನು ತಕ್ಷಣವೇ ತಡೆಯಬಹುದು.

Digit.in Survey
✅ Thank you for completing the survey!

Also Read: OnePlus 15s ಅತಿ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ! ದೊಡ್ಡ ಬ್ಯಾಟರಿ ಪವರ್ಫುಲ್ ಚಿಪ್‌ಸೆಟ್ ನಿರೀಕ್ಷೆ!

ಮಾಮೂಲಿ CCTV ಗಿಂತ ಈ AI ಸಿಸ್ಟಮ್ ಹೇಗೆ ಬೇರೆ?

ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಸ್ಟಮ್ ಅನ್ನು ಯಾವತ್ತೂ ಸುಸ್ತಾಗದ ಒಬ್ಬ ಸೆಕ್ಯೂರಿಟಿ ಗಾರ್ಡ್‌ನಂತೆ ನೋಡಲಾಗುತ್ತಿದೆ. ಸಾಮಾನ್ಯ ಸಿಸಿಟಿವಿ ಕ್ಯಾಮೆರಾಗಳು ಬರಿ ವಿಡಿಯೋ ರೆಕಾರ್ಡಿಂಗ್ ಮಾತ್ರ ಮಾಡುತ್ತವೆ. ಅದನ್ನು ನೋಡಲು ಒಬ್ಬ ಮನುಷ್ಯ ಗಂಟೆಗಟ್ಟಲೆ ಸ್ಕ್ರೀನ್ ಮುಂದೆ ಕುಳಿತುಕೊಳ್ಳಬೇಕು. ಬಹಳಷ್ಟು ಕೈದಿಗಳ ಮೇಲೆ ಒಟ್ಟಿಗೆ ಕಣ್ಣಿಡುವುದು ಕಷ್ಟದ ಕೆಲಸ. ಮನುಷ್ಯನಿಗೆ ಸುಸ್ತಾಗಬಹುದು ಅಥವಾ ಗಮನ ಅತ್ತ ಇತ್ತ ಹೋಗಬಹುದು ಆಗ ಏನಾದರೂ ಮುಖ್ಯವಾದ ವಿಷಯ ಮಿಸ್ ಆಗುವ ಚಾನ್ಸ್ ಇರುತ್ತದೆ.

AI-powered camera systems for prisons -

ಆದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಿಸ್ಟಮ್ ಆ ರೀತಿ ಅಲ್ಲ ಇದು ಕ್ಯಾಮೆರಾಗಳ ಮೂಲಕ ವಿಡಿಯೋಗಳನ್ನು ಸತತವಾಗಿ ನೋಡುತ್ತಾ ಇರುತ್ತದೆ. ಯಾರಾದರೂ ಕೈದಿಗಳು ತಪ್ಪು ಜಾಗಕ್ಕೆ ಹೋದರೆ ಅಥವಾ ಏನಾದರೂ ವಿಚಿತ್ರವಾಗಿ ಕಂಡರೆ ಅದು ತಾನಾಗಿಯೇ ಅಲಾರಾಂ ಬಾರಿಸುತ್ತದೆ. ಇದರಿಂದ ಜೈಲು ಸಿಬ್ಬಂದಿ ಪ್ರತಿ ನಿಮಿಷ ಸ್ಕ್ರೀನ್ ನೋಡುತ್ತಾ ಕೂರುವ ಅಗತ್ಯವಿರುವುದಿಲ್ಲ.

ಜಗತ್ತಿನಾದ್ಯಂತ ಜೈಲುಗಳಲ್ಲಿ AI ಬಳಕೆ

ಈ ತಂತ್ರಜ್ಞಾನ ಜಗತ್ತಿಗೆ ಹೊಸದೇನಲ್ಲ ಯಾಕೆಂದರೆ ಈಗಾಗಲೇ ಅಮೆರಿಕಾದ ಅನೇಕ ರಾಜ್ಯಗಳ ಜೈಲುಗಳಲ್ಲಿ ಕೈದಿಗಳ ಮೇಲೆ ಕಣ್ಣಿಡಲು ಮತ್ತು ಅವರ ಬಳಿ ಆಯುಧಗಳಿವೆಯೇ ಎಂದು ಪತ್ತೆಹಚ್ಚಲು AI ಬಳಸುತ್ತಾರೆ. ಬ್ರಿಟನ್‌ನಲ್ಲಿಯೂ ಇಂತಹದ್ದೇ ವ್ಯವಸ್ಥೆ ಇದೆ. ಸಿಂಗಾಪುರದಲ್ಲಿ AI ಕ್ಯಾಮೆರಾಗಳು ಜನಜಂಗುಳಿಯನ್ನು ನೋಡಿ ಗಲಾಟೆ ಅಥವಾ ದಂಗೆ ಆಗುವ ಮುನ್ಸೂಚನೆಯನ್ನು ಮೊದಲೇ ತಿಳಿಸುತ್ತವೆ. ಚೀನಾದಲ್ಲಿ ಮುಖ ಗುರುತಿಸುವ (Face Recognition) ಮತ್ತು ಜನರ ನಡವಳಿಕೆಯನ್ನು ಗಮನಿಸುವ ಸಿಸ್ಟಮ್‌ಗಳನ್ನು ದೊಡ್ಡ ಮಟ್ಟದಲ್ಲಿ ಬಳಸುತ್ತಿದ್ದಾರೆ. ಭಾರತದಲ್ಲೂ ಕೂಡ ದೆಹಲಿಯ ತಿಹಾರ್ ಜೈಲಿನಲ್ಲಿ ಇಂತಹದ್ದೇ ಪ್ಲಾನ್ ನಡೆಯುತ್ತಿದೆ.

Also Read: ZEBRONICS ಅಮೆಜಾನ್‌ನಲ್ಲಿ ಇಂದು Dolby Audio Soundbar ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಮಾರಾಟವಾಗುತ್ತಿದೆ

ಜೈಲುಗಳಲ್ಲಿ ಈ ತಂತ್ರಜ್ಞಾನದಿಂದ ಏನು ಲಾಭ?

ಈ ಸಿಸ್ಟಮ್‌ನಿಂದ ಜೈಲುಗಳಿಗೆ ಹತ್ತು ಹಲವು ಲಾಭಗಳಿವೆ. ಯಾರಾದರೂ ಕೈದಿಗಳು ಜೈಲಿನಿಂದ ಓಡಿಹೋಗಲು ನೋಡಿದರೆ ಕೂಡಲೇ ಸಿಕ್ಕಿಬೀಳುತ್ತಾರೆ. ಕೈದಿಗಳ ನಡುವೆ ಜಗಳ ಅಥವಾ ಹೊಡೆದಾಟ ಶುರುವಾಗುವ ಮೊದಲೇ ಅದನ್ನು ತಡೆಯಬಹುದು. ಮೊಬೈಲ್ ಫೋನ್, ಆಯುಧಗಳು ಅಥವಾ ಡ್ರಗ್ಸ್ ಅಂತಹ ವಸ್ತುಗಳು ಜೈಲಿನೊಳಗೆ ಬಂದರೆ ತಕ್ಷಣ ಗೊತ್ತಾಗುತ್ತದೆ. ಕೈದಿಗಳು ಗುಂಪು ಸೇರಿ ಏನಾದರೂ ಸಂಚು ಮಾಡುತ್ತಿದ್ದರೆ ಅದನ್ನೂ ಪತ್ತೆಹಚ್ಚಬಹುದು. ಜೈಲುಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದಾಗ ಈ ಸಿಸ್ಟಮ್ ಹೆಚ್ಚಿನ ರಕ್ಷಣೆ ನೀಡುತ್ತದೆ.

ಆದರೆ ಭಾರತದಲ್ಲಿ ಇದನ್ನು ಜಾರಿಗೆ ತರುವುದು ಅಷ್ಟು ಸುಲಭವಲ್ಲ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸರಿಯಾಗಿ ಕೆಲಸ ಕಲಿಸಲು ಬಹಳಷ್ಟು ಮಾಹಿತಿ (Data) ಬೇಕು. ನಮ್ಮ ಜೈಲುಗಳಲ್ಲಿ ಪೂಜೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇವುಗಳನ್ನು ಈ ಸಿಸ್ಟಮ್ ‘ಗಲಾಟೆ’ ಎಂದು ತಪ್ಪು ತಿಳಿದುಕೊಳ್ಳಬಾರದು. ಅಲ್ಲದೆ ಇದಕ್ಕೆ ಖರ್ಚು ಕೂಡ ಜಾಸ್ತಿ ಮತ್ತು ಅದನ್ನು ನೋಡಿಕೊಳ್ಳಲು (Maintenance) ಹೆಚ್ಚು ಹಣ ಬೇಕಾಗುತ್ತದೆ. ಇದನ್ನೆಲ್ಲ ಮೀರಿ ಕೆಲವೊಮ್ಮೆ AI ಸಿಸ್ಟಮ್‌ನಲ್ಲಿ ತಪ್ಪುಗಳಾಗುವ ಅಥವಾ ಅದು ದುರ್ಬಳಕೆಯಾಗುವ ಭಯವೂ ಇರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo