ನಿಮ್ಮಿಂದ ಕಳ್ಳತನವಾದ ಅಥವಾ ನೀವು ಕಳೆದುಕೊಂಡ ಆಂಡ್ರಾಯ್ಡ್ ಫೋನ್ ಅನ್ನು ಪಡೆಯುವುದು ಹೇಗೆ?

ನಿಮ್ಮಿಂದ ಕಳ್ಳತನವಾದ ಅಥವಾ ನೀವು ಕಳೆದುಕೊಂಡ ಆಂಡ್ರಾಯ್ಡ್ ಫೋನ್ ಅನ್ನು ಪಡೆಯುವುದು ಹೇಗೆ?
HIGHLIGHTS

ಗೂಗಲ್ Find My Device ಮೂಲಕ ನಿಮ್ಮಿಂದ ಕಳ್ಳತನವಾದ ಅಥವಾ ನೀವು ಕಳೆದುಕೊಂಡ ಫೋನ್ ಅನ್ನು ಪಡೆಯಬಹುದು

ಫೋನ್‌ ಕಳ್ಳತನ ಅಥವಾ ಕಳೆದುಹೋದ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ

ನಿಮ್ಮ ಟೆಲಿಕಾಂ ಆಪರೇಟರ್ ಕಸ್ಟಮರ್ ಕೇರ್ಗೆ ಕರೆ ಮಾಡಿ ನಂಬರ್ ಬಂದ್ ಮಾಡಿಸಿ (ಇದು ಗರಿಷ್ಠ 2hrs ತಗೊಳುತ್ತೆ ಅಷ್ಟೇ).

ನಿಮ್ಮ ಕಳೆದುಹೋದ ಅಥವಾ ಕದ್ದ ಆಂಡ್ರಾಯ್ಡ್ ಫೋನ್ ಅನ್ನು ನೀವು ಹುಡುಕುತ್ತಿದ್ದರೆ ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ನಿಮ್ಮ ಕಳೆದುಹೋದ ಆಂಡ್ರಾಯ್ಡ್ ಫೋನ್ ಅನ್ನು ನೀವು ಹೇಗೆ ಕಂಡುಹಿಡಿಯಬಹುದು. ಗೂಗಲ್ Find My Device ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ನಿಮ್ಮಿಂದ ಕಳ್ಳತನವಾದ ಅಥವಾ ನೀವು ಕಳೆದುಕೊಂಡ ಫೋನ್ ಅನ್ನು ನೀವು ಮತ್ತೆ ಮಾಡಿ ಲಾಕ್ ಮಾಡಬಹುದು. ಮೊದಲನೆಯದಾಗಿ ಮೊಬೈಲ್ ಫೋನ್‌ ಕಳ್ಳತನ ಅಥವಾ ಕಳೆದುಹೋದ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ FIR ಪ್ರತಿ ಪಡೆದುಕೊಳ್ಳಿ ಮತ್ತು ನೀವು ಬಯಸಿದರೆ ನೀವು ಎಲ್ಲಾ ಡೇಟಾ ದುರುಪಯೋಗವಾಗುವ ಮುನ್ನವೇ ಡಿಲೀಟ್ ಸಹ ಮಾಡಬವುದು.

ಆಂಡ್ರಾಯ್ಡ್ ಅಪ್ಲಿಕೇಶನ್‌ನ ಹೊರತಾಗಿ ವೆಬ್‌ಸೈಟ್‌ನಲ್ಲಿ ಗೂಗಲ್‌ನ ಫೈಂಡ್ ಮೈ ಡಿವೈಸ್ ಸೇವೆ ಲಭ್ಯವಿದೆ. ಇದನ್ನು ಬಳಸಲು ಮೊದಲು ಒಬ್ಬರು Google ಖಾತೆಗೆ ಸೈನ್ ಇನ್ ಮಾಡಬೇಕು. ಇದರ ನಂತರ ನೋಂದಾಯಿತ ಫೋನ್ ಸ್ವಯಂಚಾಲಿತವಾಗಿ ಸ್ಕ್ರಿನ್ ಮೇಲೆ ಗೋಚರಿಸುತ್ತವೆ. ಈಗ ನಿಮ್ಮ ಫೋನ್ ಕಂಡುಹಿಡಿಯಲು ನೀವು ಧ್ವನಿ ಪ್ಲೇ ಮಾಡಬಹುದು. ಇದಲ್ಲದೆ ಫೋನ್ ಲಾಕ್ ಮಾಡುವ ಮೂಲಕ ವೈಯಕ್ತಿಕ ಡೇಟಾವನ್ನು ಡಿಲೀಟ್ ಮಾಡುವ ಮೂಲಕ ಮತ್ತು ಸ್ಕ್ರೀನ್ ಮೇಲೆ ಮೆಸೇಜ್ ಪ್ರದರ್ಶಿಸುವ ಮೂಲಕ ನೀವು ಅದನ್ನು ಲಾಕ್ ಮಾಡಿ ಸುರಕ್ಷಿತಗೊಳಿಸಬಹುದು.

ಅಂದರೆ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ತುರ್ತು ಸಮಯದಲ್ಲಿ ಪತ್ತೆ ಮಾಡುವುದು ಲಾಕ್ ಮಾಡುವುದು ಮತ್ತು ಡಿಲೀಟ್ ಮಾಡುವುದು ಮುಂತಾದ ಕಾರ್ಯಗಳನ್ನು ವೆಬ್ ಪುಟಗಳು ಮಾಡಬಹುದು. ಇದೆಲ್ಲವನ್ನೂ ಮಾಡಲು ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ನಿಮ್ಮ ಗೂಗಲ್ ಖಾತೆಗೆ ಸಂಪರ್ಕಿಸಬೇಕು. ಇದಲ್ಲದೆ ಫೋನ್ ಅನ್ನು ಆನ್ ಮಾಡಿ ಮತ್ತು ಇಂಟರ್ನೆಟ್ಗೆ ಸಂಪರ್ಕಿಸಬೇಕು. ಒಂದೇ ಇಮೇಲ್ ವಿಳಾಸದೊಂದಿಗೆ ನೀವು ಅನೇಕ ಆಂಡ್ರಾಯ್ಡ್ ಫೋನ್ ನೋಂದಾಯಿಸಿದ್ದರೆ ನೀವು ಮೆನುಗೆ ಹೋಗಿ ಸರಿಯಾದ ಫೋನ್ ಆರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಇತ್ತೀಚೆಗೆ ನವೀಕರಣದೊಂದಿಗೆ ಗೂಗಲ್ ತನ್ನ ಹುಡುಕಾಟ ಫಲಿತಾಂಶಗಳ ಪುಟದಲ್ಲಿ ಕೆಲವು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಈಗ ಬಳಕೆದಾರರು ಯಾವುದೇ ನೋಂದಾಯಿತ ಫೋನ್ ತಮ್ಮ ಖಾತೆಯ ಮೂಲಕ ನೇರವಾಗಿ ಹುಡುಕಾಟ ಫಲಿತಾಂಶದಿಂದ ಕಂಡುಹಿಡಿಯಲು ಸಾಧ್ಯವಾಗುತ್ತದೆ. ನಂತರ Where is my phone? ನೀವು ಬಳಸಿದರೆ ನಿಮ್ಮ ಫೋನ್ ಸ್ಥಳವನ್ನು ನೀವು ಕಾಣಬಹುದು. ಸ್ಥಳ ಕಂಡುಬಂದ ನಂತರ ನೀವು ರಿಂಗ್ ಕಾರ್ಯವನ್ನು ಬಳಸಬಹುದು. ಈ ಕಾರ್ಯಕ್ಕಾಗಿ ನೀವು ರಿಂಗ್ ಆಯ್ಕೆಯನ್ನು ಆರಿಸಬೇಕು ಮತ್ತು ಅದನ್ನು ರಿಂಗ್ ಮಾಡಬೇಕು.

ನಿಮ್ಮ ಬಳಿ ಲ್ಯಾಪ್‌ಟಾಪ್ ಇಲ್ಲದಿದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ. ಫೋನ್ ಟ್ರ್ಯಾಕ್ ಮಾಡಲು ನೀವು ಬೇರೊಬ್ಬರ ಫೋನ್ ಬಳಸಬಹುದು. ನಿಮ್ಮ ಫೋನ್‌ನ ಬ್ರೌಸರ್ ಬಳಸುವ ಬದಲು ನೀವು Find My Device ಅಪ್ಲಿಕೇಶನ್ ಅನ್ನು ಬಳಸಬಹುದು. ಗೆಸ್ಟ್ ಮೋಡ್ ಅಲ್ಲಿ ಆ ಫೋನಲ್ಲಿರುವ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅಥವಾ ಬಳಕೆದಾರ ಹೆಸರು – ಪಾಸ್‌ವರ್ಡ್ ಬಳಸಿ ನೀವು ಸೈನ್ ಇನ್ ಮಾಡಬಹುದು. ಇದನ್ನು ಮಾಡುವುದರ ಮೂಲಕ ನಿಮ್ಮ ಕಳೆದುಹೋದ ಫೋನನ್ನು ಟ್ರ್ಯಾಕ್ ಮಾಡಬವುದು ಅಲ್ಲದೆ ನಿಮ್ಮ ಫೋನಿಗೆ ರಿಂಗಿಂಗ್ ಮಾಡುವುದು ಅಥವಾ ಅದರಲ್ಲಿರುವ ಡೇಟಾವನ್ನು ಡಿಲೀಟ್ ಮಾಡುವುದು ಮುಂತಾದ ಕೆಲಸಗಳನ್ನು ಮಾಡಬಹುದು.

ನೀವು ಫೋನ್ ಅನ್ನು ನೋಂದಾಯಿಸಿದ್ದರೆ Find My Device ವೆಬ್‌ಸೈಟ್‌ಗೆ ಹುಡುಕಿ ಮತ್ತು ಸೈನ್ ಇನ್ ಮಾಡಿ. ಅದರ ನಂತರ ಎಡ ಸೈಡ್‌ಬಾರ್ ಆಯ್ಕೆಮಾಡಿ ಮತ್ತು ನಿಮ್ಮ ಫೋನ್ ನಿಮ್ಮ ಖಾತೆಗೆ ಸಂಪರ್ಕಗೊಂಡಿದೆ ಎಂದು ಖಚಿತಪಡಿಸಿ. ಈಗ ನೀವು 'Locate my device' ಆಯ್ಕೆಯನ್ನು ಆರಿಸಬೇಕಾಗುತ್ತದೆ ಮತ್ತು ನಂತರ ಲೊಕೇಟ್ ಬಟನ್ ಟ್ಯಾಪ್ ಮಾಡಿ. ನಿಮ್ಮ ಫೋನ್ ಇಂಟರ್ನೆಟ್‌ಗೆ ಸಂಪರ್ಕಗೊಂಡಿದ್ದರೆ ಅದರ ಅತ್ಯಂತ ನಿಖರವಾದ ಸ್ಥಳವನ್ನು ನೀವು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಫೈಂಡ್ ಮೈ ಮೊಬೈಲ್ ಅಪ್ಲಿಕೇಶನ್ ಮೂಲಕ ಫೋನ್ ಅನ್ನು ಲಾಕ್ ಮಾಡಿ ಮತ್ತು ರಿಂಗ್ ಮಾಡುವಂತಹ ಕೆಲಸಗಳನ್ನು ಸಹ ನೀವು ಮಾಡಬಹುದು.

ಅಲ್ಲದೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಮತ್ತು ಆನ್‌ಲೈನ್ ವಂಚನೆಯಿಂದಾಗಿ ಮೊಬೈಲ್ ಫೋನ್ ಕಳೆದುಕೊಂಡರೆ ಯಾರನ್ನಾದರೂ ದೊಡ್ಡ ತೊಂದರೆಗೆ ಸಿಲುಕಿಸಬಹುದು. ಆದಾಗ್ಯೂ ಈಗ ಅದನ್ನು ಎದುರಿಸಲು ಭಾರತ ಸರ್ಕಾರ ಸಹ ಸಾರ್ವಜನಿಕ ವೆಬ್ ಪೋರ್ಟಲ್ ಆಗಿರುವ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT) ಅನ್ನು ಅಭಿವೃದ್ಧಿಪಡಿಸಿದೆ. ಇದು ಕದ್ದ ಅಥವಾ ಕಳೆದುಹೋದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo