Aadhaar ಕಾರ್ಡ್‌ನ ಹಳೆ ಫೋಟೋದಿಂದ ಬೇಸರವಾಗಿದ್ರೆ New Photo ಅಪ್ಡೇಟ್ ಮಾಡಿಸೋದು ಹೇಗೆ?

Aadhaar ಕಾರ್ಡ್‌ನ ಹಳೆ ಫೋಟೋದಿಂದ ಬೇಸರವಾಗಿದ್ರೆ New Photo ಅಪ್ಡೇಟ್ ಮಾಡಿಸೋದು ಹೇಗೆ?
HIGHLIGHTS

UIDAI ಭಾರತೀಯರಿಗೆ ತಮ್ಮ ಹಳೆಯ ಫೋಟೋವನ್ನು ಬದಲಾಯಿಸಲು ಸರಳ ಮತ್ತು ಸುಲಭ ಮಾರ್ಗವನ್ನು ನೀಡಿದೆ.

ನಿಮ್ಮ ಆಧಾರ್ ಕಾರ್ಡ್ (Aadhaar Card) ಪಡೆದು ಹಲವಾರು ವರ್ಷಗಳಾಗಿದ್ದರೆ ಒಮ್ಮೆ ಅಪ್ಡೇಟ್ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ.

How to change old photo in aadhaar card online: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ UIDAI ಭಾರತೀಯರಿಗೆ ತಮ್ಮ ಹಳೆಯ ಫೋಟೋವನ್ನು ಬದಲಾಯಿಸಲು ಸರಳ ಮತ್ತು ಸುಲಭ ಮಾರ್ಗವನ್ನು ನೀಡಿದೆ. ಸಾಮಾನ್ಯವಾಗಿ ಮೊದಲ ಬಾರಿಗೆ ಆಧಾರ್ ಕಾರ್ಡ್‌ನ ಅರ್ಜಿ ಸಲ್ಲಿಸುವಾಗ ಆಧಾರ್ ಕೇಂದ್ರದಲ್ಲಿ ತೆಗೆಯುವ ಮೊದಲ ಫೋಟೋ ಅಷ್ಟಾಗಿ ಉತ್ತಮವಾಗಿರುವುದಿಲ್ಲ. ನಿಮ್ಮ ಆಧಾರ್ ಕಾರ್ಡ್ (Aadhaar Card) ಪಡೆದು ಹಲವಾರು ವರ್ಷಗಳಾಗಿದ್ದರೆ ಒಮ್ಮೆ ಅಪ್ಡೇಟ್ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ.

Airtel Recharge: ಏರ್‌ಟೆಲ್‌ನ ಅತ್ಯುತ್ತಮ ರಿಚಾರ್ಜ್ ಯೋಜನೆ Unlimited ಕರೆ ಮತ್ತು 1GB ಡೇಟಾ ನೀಡುತ್ತಿದೆ!

ಆಧಾರ್ ಕಾರ್ಡ್‌ನ Photo ಬದಲಾಯಿಸುವುದು ಯಾಕೆ ಮುಖ್ಯ?

ಭಾರತದಲ್ಲಿ ಹಲವಾರು ದಾಖಲೆಗಳಲ್ಲಿ ಈ ಆಧಾರ್ ಕಾರ್ಡ್ ಬಹು ಮುಖ್ಯವಾದ ದಾಖಲೆಯಾಗಿದೆ. ಏಕೆಂದರೆ ಇದರಲ್ಲಿ ಬಳಕೆದಾರರ ಬಯೋಮೆಟ್ರಿಕ್, ಐರಿಸ್, ಫೋಟೋ, ವಿಳಾಸ, ಇಮೇಲ್ ಐಡಿ, ಫೋನ್ ಸಂಖ್ಯೆಗಳ ಮಾಹಿತಿಯೊಂದಿಗೆ ಹೆಚ್ಚಿನ ವಿವರಗಳನ್ನು ಹೊಂದಿರುತ್ತದೆ. ಏಕೆಂದರೆ 10 ವರ್ಷಗಳಿಗೊಮ್ಮೆ ಬದಲಾಯಿಸಿಕೊಳ್ಳಲೇಬೇಕೆಂದು ಸರ್ಕಾರವೇ ಸಲಹೆ ನೀಡುತ್ತಿದೆ. ಇದು ವ್ಯಕ್ತಿಯನ್ನು ಗುರುತಿಸಬಹುದಾದ ನೈಜ ಮಾಹಿತಿಯನ್ನು ನಿರ್ವಹಿಸಲು UIDAI ಅನುಮತಿಸುತ್ತದೆ.

ಸರ್ಕಾರಿ ಯೋಜನೆಗಳು ಅಥವಾ ಕಾಲೇಜು ಅರ್ಜಿಗಳಿಗೆ ನೋಂದಣಿ ಸೇರಿದಂತೆ ವಿವಿಧ ಸೇವೆಗಳನ್ನು ಪ್ರವೇಶಿಸಲು ಈ ವಿವರಗಳನ್ನು ಬಳಸಬಹುದು. ಇದರೊಂದಿಗೆ ಸಮಯ ಕಳೆಯುತ್ತಿದ್ದಂತೆ ವಯಸ್ಸಿನ ಆಧಾರದ ಮೇರೆಗೆ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಲಹೆಯನ್ನು ನೀಡಲಾಗಿದೆ.

How to change old photo in aadhaar card online:

ಹಂತ 1: ಮೊದಲಿಗೆ ಅಧಿಕೃತ UIDAI ವೆಬ್‌ಸೈಟ್‌ಗೆ ( uidai.gov.in) ಭೇಟಿ ನೀಡಿ.

ಹಂತ 2: ವೆಬ್‌ಸೈಟ್‌ನಿಂದ ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ (ಇದನ್ನು ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರದಿಂದ ಕೂಡ ಸಂಗ್ರಹಿಸಬಹುದು.

ಹಂತ 3: ದಾಖಲಾತಿ ಫಾರ್ಮ್‌ನಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.

Aadhaar ಕಾರ್ಡ್‌ನ ಹಳೆ ಫೋಟೋದಿಂದ ಬೇಸರವಾಗಿದ್ರೆ New Photo ಅಪ್ಡೇಟ್ ಮಾಡಿಸೋದು ಹೇಗೆ?
Aadhaar ಕಾರ್ಡ್‌ನ ಹಳೆ ಫೋಟೋದಿಂದ ಬೇಸರವಾಗಿದ್ರೆ New Photo ಅಪ್ಡೇಟ್ ಮಾಡಿಸೋದು ಹೇಗೆ?

ಹಂತ 4: ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಸಲ್ಲಿಸಿ. ಹತ್ತಿರದ ಕೇಂದ್ರವನ್ನು ಪತ್ತೆಹಚ್ಚಲು ಈ ಲಿಂಕ್‌ಗೆ ಭೇಟಿ ನೀಡಿ -points.uidai.gov.in/.

ಹಂತ 5: ಕೇಂದ್ರದಲ್ಲಿರುವ ಆಧಾರ್ ಕಾರ್ಯನಿರ್ವಾಹಕರು ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಎಲ್ಲಾ ವಿವರಗಳನ್ನು ಖಚಿತಪಡಿಸುತ್ತಾರೆ.

ಹಂತ 6: ಕಾರ್ಯನಿರ್ವಾಹಕರು ನಂತರ ಆಧಾರ್ ಕಾರ್ಡ್‌ನಲ್ಲಿ ನವೀಕರಿಸಲು ಹೊಸ ಚಿತ್ರವನ್ನು ಕ್ಲಿಕ್ ಮಾಡುತ್ತಾರೆ.

ಹಂತ 7: ಆಧಾರ್ ಕಾರ್ಯನಿರ್ವಾಹಕರು ಈ ಸೇವೆಗೆ ಜಿಎಸ್‌ಟಿಯೊಂದಿಗೆ 100 ಶುಲ್ಕ ವಿಧಿಸಲಾಗುತ್ತದೆ.

ಹಂತ 8: UIDAI ವೆಬ್‌ಸೈಟ್‌ನಲ್ಲಿ ನವೀಕರಣಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ ನವೀಕರಣ ವಿನಂತಿ ಸಂಖ್ಯೆ (URN) ಜೊತೆಗೆ ನಿಮಗೆ ಸ್ವೀಕೃತಿ ಚೀಟಿಯನ್ನು ನೀಡಲಾಗುತ್ತದೆ.

ಗಮನಾರ್ಹವಾಗಿ ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯನ್ನು ನವೀಕರಿಸಲು 90 ದಿನಗಳವರೆಗೆ ತೆಗೆದುಕೊಳ್ಳಬಹುದು. ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಸ್ಟೇಟಸ್ ಪರಿಶೀಲಿಸಲು ನೀವು URN ಸಂಖ್ಯೆಯನ್ನು ಬಳಸಬಹುದು. ಒಮ್ಮೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿದ ನಂತರ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ನೀವು ಪ್ರತಿಯನ್ನು ಮುದ್ರಿಸಬಹುದು ಅಥವಾ UIDAI ನ ಅಧಿಕೃತ ವೆಬ್‌ಸೈಟ್‌ನಿಂದ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo