Aadhaar Loan: ನಿಮ್ಮ ಆಧಾರ್ ಕಾರ್ಡ್ ಮೂಲಕ ಈಗ ಸರಳವಾಗಿ ವೈಯಕ್ತಿಕ ಸಾಲ ಪಡೆಯಬವುದು!

Aadhaar Loan: ನಿಮ್ಮ ಆಧಾರ್ ಕಾರ್ಡ್ ಮೂಲಕ ಈಗ ಸರಳವಾಗಿ ವೈಯಕ್ತಿಕ ಸಾಲ ಪಡೆಯಬವುದು!
HIGHLIGHTS

ಆಧಾರ್ ಮೇರೆಗೆ ವೈಯಕ್ತಿಕ (Personal Loan) ಸಾಲವನ್ನು ನೀಡಲು ದೇಶದದಲ್ಲಿ ಕೆಲವು ಬಂಕ್ ಮುಂದಾಗಿವೆ.

SBI, HDFC ಮತ್ತು Kotak Mahindra ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಆಧಾರ್ ಕಾರ್ಡ್ ಮೇಲೆ ಸಹ ಸಾಲವನ್ನು ನೀಡುತ್ತಿವೆ.

ಎಲ್ಲಾ ಬ್ಯಾಂಕುಗಳು KYC ಅಂದ್ರೆ (Know Your Customer) ಪ್ರಕ್ರಿಯೆ ಸಕಾರಾತ್ಮಕವಾದ ನಂತರವಷ್ಟೇ ಸಾಲವನ್ನು ನೀಡುತ್ತವೆ.

ಆಧಾರ್ ಲೋನ್ (Aadhaar Loan): ಇಂದಿನ ದಿನಗಳಲ್ಲಿ ಸಾಮಾನ್ಯರು ಅಥವಾ ಮಾಧ್ಯಮ ವರ್ಗದವರು ಸೇರಿ ಶ್ರೀಮಂತರು ಸಹ ಸಲ ಪಡೆಯುವುದು ಅನಿವಾರ್ಯವಾಗಿದೆ. ಒಂದು ರೀತಿ ಹೇಳುವುದಾದರೆ ಸಾಲವಿಲ್ಲದೆ ಮನುಷ್ಯ ಬದುಕಲು ಅಸಾಧ್ಯ ಎಂಬ ಮಟ್ಟಿಗೆ ಜಗತ್ತು ಈಗ ಬೆಳೆದು ನಿಂತಿದೆ. ಹೀಗಾಗಿ ಸಾಲದ ಮೊರೆ ಹೋಗುವವರೇ ಹೆಚ್ಚು. ಆದ್ರೆ ಸಾಲವೇನೋ ಪಡೆಯಬವುದು. ಆದ್ರೆ ಸಾಲ ಕೊಡುವವರು ಯಾರು ಎಂಬುದಷ್ಟೇ ದೊಡ್ಡ ಪ್ರಶ್ನೆಯಾಗಿದೆ. 

ಜನರು ತಮಗೆ ತುರ್ತಾಗಿ ಏನಾದ್ರು ಹಣದ ಅವಶ್ಯಕತೆ ಇದ್ದರೆ ತಕ್ಷಣಕ್ಕೆ ಅಂತ ಅವರ ಸ್ನೇಹಿತರ ಮತ್ತು ಸಂಭಧಿಕರ ಬಳಿ ಸಾಲ ತೆಗೆದುಕೊಳ್ಳುತ್ತಾರೆ. ಅಥವಾ ಮನೆಯಲ್ಲಿರುವ ಆಭರಣಗಳನ್ನು ಈ ಆರ್ಥಿಕ ದಿಕ್ಕಟ್ಟಿನಿಂದ ಹೊರಬರಲು ಅಡವಿಟ್ಟು ಸಾಲ ಪಡೆಯುತ್ತಾರೆ. ಆದರೆ ನಿಮಗೊತ್ತಾ ಬ್ಯಾಂಕ್ ನಿಮ್ಮ ಸಂಬಳದ ಮೇಲೆ ನಿಮಗೆ ಆರ್ಥಿಕ ಸಹಾಯ ಮಾಡಲು ಸಾಲ ನೀಡುತ್ತವೆ. ಇದರೊಂದಿಗೆ ನಿಮಗೆ ಈ ಒಂದು ವಿಶೇಷ ಮಾಹಿತಿ ನೀಡಲು ಬಯಸುತ್ತವೆ ಏನೆಂದರೆ ಈಗ ಬ್ಯಾಂಗ್ ನಿಮ್ಮ ಆಧಾರ್ ಕಾರ್ಡ್ ಮೇರೆಗೆ ನಿಮಗೆ ಸಾಲ ನೀಡಲು ಮುಂದಾಗಿವೆ. ಈ ಮಾಹಿತಿ ಉಪಯುಕ್ತವಾಗಿದ್ದರೆ ತಿಳಿಯದವರೊಂದಿಗೆ ಶೇರ್ ಮಾಡಿ.

ಇದನ್ನೂ ಓದಿ: Voter+Aadhaar: ಆಗಸ್ಟ್ 1 ರಿಂದ ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಪ್ರಾರಂಭ!

ಆಧಾರ್ ಮೇರೆಗೆ ವೈಯಕ್ತಿಕ (Personal Loan) ಸಾಲ ಪಡೆಯುವುದು ಹೇಗೆ?

1. ಮೊದಲಿಗೆ ನೀವು ಸಾಲ ಪಡೆಯಬೇಕಾಗಿರುವ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಅಥವಾ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಭೇಟಿ ನೀಡಬೇಕಾಗುತ್ತದೆ.

2. ನಂತರ ಬ್ಯಾಂಕಿನ ಅಪ್ಲಿಕೇಶನ್ನಲ್ಲಿ ವೈಯಕ್ತಿಕ ಸಾಲ (Personal Loan) ಸರ್ಚ್ ಮಾಡಿ ಕ್ಲಿಕ್ ಮಾಡಿ.

3. ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಸ್ವೀಕರಿಸಿದ OTP ಅನ್ನು ನಮೂದಿಸಿ

4. ನಂತರ ನಿಮ್ಮ ಜನ್ಮ ದಿನಾಂಕ ಮತ್ತು ವಿಳಾಸದೊಂದಿಗೆ ಕೇಳುವ ಎಲ್ಲಾ ಮಾಹಿತಿಯನ್ನು ತುಂಬಿರಿ.

5. ಇದರ ನಂತರ ಮಾಹಿತಿ ನೀಡಲಾದ PAN ಮತ್ತು ಆಧಾರ್ ಕಾರ್ಡ್ ಕಾಪಿ ಅನ್ನು ಅಪ್ಲೋಡ್ ಅಥವಾ ಮಾಹಿತಿ ನಮೂದಿಸಿ.

6. ಮಾಹಿತಿ ನೀಡಿದ ಬಳಿಕ ನಿಮ್ಮ ಬೇಡಿಕೆಗೆ ಟ್ರಾಕಿಂಗ್ ನಂಬರ್ ಸ್ಕ್ರಿನ್ ಮೇಲೆ ಕಂಡು ಬರುತ್ತದೆ. ಇದನ್ನು ಎಲ್ಲಾದರೂ ಬರೆದಿಟ್ಟುಕೊಳ್ಳಿ. 

7. ಇದರ ಬಳಿಕ ಬ್ಯಾಂಕ್ ನಿಮ್ಮ ಎಲ್ಲಾ ಮಾಹಿತಿಯನ್ನು ಒಮ್ಮೆ ಪರಿಶೀಲಿಸಲು 48 ಘಂಟೆಗಳ ಸಮಯ ಪಡೆಯಬವುದು.

8. ಕೊನೆಯದಾಗಿ ಬ್ಯಾಂಕ್ KYC ಅಂದ್ರೆ (Know Your Customer) ಪ್ರಕ್ರಿಯೆ ಸಕಾರಾತ್ಮಕವಾದ ನಂತರವಷ್ಟೇ ಸಾಲವನ್ನು ನೀಡುತ್ತವೆ.

ಇದನ್ನೂ ಓದಿ: ನಿಮಗೊತ್ತಾ ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್​ನಲ್ಲಿ ಏನೇನು ಸರ್ಚ್ ಮಾಡ್ತಾರೆ?

ಈ ರೀತಿಯ ಸಾಲವನ್ನು ನೀಡಲು ದೇಶದದಲ್ಲಿ ಕೆಲವು ಬಂಕ್ ಮುಂದಾಗಿವೆ. ಅವೆಂದರೆ SBI, HDFC ಮತ್ತು Kotak Mahindra ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಆಧಾರ್ ಕಾರ್ಡ್ ಮೇಲೆ ಸಹ ಸಾಲವನ್ನು ನೀಡುತ್ತಿವೆ. 750ಕ್ಕಿಂತ  ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿರುವ ಯಾವುದೇ ಗ್ರಾಹಕರು ಈ ಅವಕಾಶವನ್ನು ಪಡೆಯಬವುದು. ಅಷ್ಟೇಯಲ್ಲದೆ ಈ ಸಾಲವನ್ನು ಬ್ಯಾಂಕ್ ಅತಿ ಕಡಿಮೆ ಬಡ್ಡಿದರದಲ್ಲಿ ನೀಡುತ್ತವೆ. ಈ ಎಲ್ಲಾ ಬ್ಯಾಂಕುಗಳು KYC ಅಂದ್ರೆ (Know Your Customer) ಪ್ರಕ್ರಿಯೆ ಸಕಾರಾತ್ಮಕವಾದ ನಂತರವಷ್ಟೇ ಸಾಲವನ್ನು ನೀಡುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo