Voter+Aadhaar: ಆಗಸ್ಟ್ 1 ರಿಂದ ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಪ್ರಾರಂಭ!

Voter+Aadhaar: ಆಗಸ್ಟ್ 1 ರಿಂದ ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಪ್ರಾರಂಭ!
HIGHLIGHTS

ಚುನಾವಣಾ ಆಯೋಗದ ಒಪ್ಪಿಗೆ ನಂತರ ಅಧಿಸೂಚನೆ ಹೊರಡಿಸಲಾಗಿದೆ

ಮೊದಲ ಬಾರಿಗೆ ಮತದಾರರ ನೋಂದಣಿಗೆ ನಾಲ್ಕು ಅರ್ಹತಾ ದಿನಾಂಕಗಳು ಇರುತ್ತವೆ

ವೋಟರ್ (Voter) ಐಡಿಯೊಂದಿಗೆ ಆಧಾರ್ (Aadhaar) ಅನ್ನು ಲಿಂಕ್ ಮಾಡದಿದ್ದರೆ ಈ ಆಯ್ಕೆಗಳು ಲಭ್ಯವಿವೆ

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ನಿಯಮಗಳನ್ನು ಹೊರಡಿಸಿದೆ. ಮತದಾರರಿಗೆ ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಅವರ ಇಚ್ಛೆಯಂತೆ ಆದರೆ ಅದನ್ನು ಮಾಡದವರು ಸಾಕಷ್ಟು ಕಾರಣಗಳನ್ನು ನೀಡಬೇಕಾಗುತ್ತದೆ. ಚುನಾವಣಾ ಆಯೋಗದೊಂದಿಗೆ ಚರ್ಚಿಸಿದ ಬಳಿಕ ಕಾನೂನು ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಕಳೆದ ವರ್ಷ ಅಂಗೀಕರಿಸಿದ ಚುನಾವಣಾ ಸುಧಾರಣೆಗಳ ಅನುಷ್ಠಾನ ಪ್ರಾರಂಭವಾಯಿತು. ಹೊಸ ಬದಲಾವಣೆಗಳು 1 ಆಗಸ್ಟ್ 2022 ರಿಂದ ಜಾರಿಗೆ ಬರುತ್ತವೆ. 

ಹೊಸ ನಿಯಮಗಳ ಪ್ರಕಾರ 1ನೇ ಏಪ್ರಿಲ್ 2023 ರಂದು ಅಥವಾ ಅದಕ್ಕೂ ಮೊದಲು ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಕಾಣಿಸಿಕೊಂಡಿದೆಯೋ ಅವರು ತಮ್ಮ ಆಧಾರ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ನಮೂನೆ 6ಬಿ ಬಳಸಲಾಗುವುದು. ಮತದಾರರು ತಮ್ಮ ಆಧಾರ್ ಸಂಖ್ಯೆ ನೀಡಲು ಬಯಸದಿದ್ದರೆ ಅವರು ಆಧಾರ್ ಹೊಂದಿಲ್ಲ ಎಂದು ಲಿಖಿತವಾಗಿ ನೀಡಬೇಕು. ನಂತರ ಅವರು 11 ಐಚ್ಛಿಕ ದಾಖಲೆಗಳಿಗಾಗಿ ವೋಟರ್ ಐಡಿಯನ್ನು ಪರಿಶೀಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ನಮ್ಮ ಸಹೋದ್ಯೋಗಿ ಟೈಮ್ಸ್ ಆಫ್ ಇಂಡಿಯಾದ ಮೂಲವೊಂದು ಚುನಾವಣಾ ಆಯೋಗವು ಈ ನಿಟ್ಟಿನಲ್ಲಿ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಹೊರಡಿಸಲಿದೆ.

ಆಧಾರ ಕಾರ್ಡ್ಇಲ್ಲದಿದ್ದರೆ ಏನು?

ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಮತದಾರರ ID ಯ ಪರಿಶೀಲನೆಗಾಗಿ 11 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಒದಗಿಸಬಹುದು. ಇವುಗಳಲ್ಲಿ MGNREGS ಜಾಬ್ ಕಾರ್ಡ್, ಭಾವಚಿತ್ರವಿರುವ ಬ್ಯಾಂಕ್ ಪಾಸ್‌ಬುಕ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್, ಭಾರತೀಯ ಪಾಸ್‌ಪೋರ್ಟ್, ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಪಿಂಚಣಿ ದಾಖಲೆ, ಸರ್ಕಾರಿ ಸೇವಾ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಸಚಿವಾಲಯದಿಂದ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ನೀಡಿದ ಗುರುತಿನ ಚೀಟಿ ಸೇರಿವೆ. ನೀಡಲಾದ ವಿಶಿಷ್ಟ ಗುರುತಿನ ಐಡಿಯನ್ನು ಒಳಗೊಂಡಿದೆ.

1ನೇ ಆಗಸ್ಟ್ 2022 ಯಾವ ಬದಲಾವಣೆಗಳಿವೆ?

ಮೊದಲ ಬಾರಿಗೆ ಮತದಾರರ ನೋಂದಣಿಗೆ ನಾಲ್ಕು ಅರ್ಹತಾ ದಿನಾಂಕಗಳು ಇರುತ್ತವೆ. ಇದುವರೆಗೆ ಪುರುಷ ಸೇವಾ ಮತದಾರರ ಪತ್ನಿಗೆ ಮಾತ್ರ ಅದೇ ಪ್ರದೇಶದ ಮತದಾರರಾಗಿ ನೋಂದಾಯಿಸಲು ಅವಕಾಶವಿತ್ತು. ಬದಲಾದ ನಿಯಮಗಳ ಪ್ರಕಾರ ಇದು ಈಗ ಲಿಂಗ ತಟಸ್ಥವಾಗಿದೆ. ಅಂದರೆ ಪತ್ನಿ ಸೇವಾ ಮತದಾರರಾಗಿದ್ದರೆ ಪತಿ ತನ್ನ ಪ್ರದೇಶದ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು. ಮೂಲಗಳ ಪ್ರಕಾರ ಹೊಸ ಮತದಾರರ ನೋಂದಣಿಯ ಎಲೆಕ್ಟ್ರಾನಿಕ್ ನಮೂನೆಗಳಲ್ಲಿ ಆಧಾರ್ ಕಡ್ಡಾಯವಾಗಿರುವುದಿಲ್ಲ. ವಿಳಾಸ ಬದಲಾವಣೆ ಇತ್ಯಾದಿಗಳಿಗೆ ಆಧಾರ್ ಅನ್ನು ಕಡ್ಡಾಯಗೊಳಿಸುವುದಿಲ್ಲ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo