ನಿಮಗೊತ್ತಾ ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್​ನಲ್ಲಿ ಏನೇನು ಸರ್ಚ್ ಮಾಡ್ತಾರೆ?

ನಿಮಗೊತ್ತಾ ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್​ನಲ್ಲಿ ಏನೇನು ಸರ್ಚ್ ಮಾಡ್ತಾರೆ?
HIGHLIGHTS

ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್​ನಲ್ಲಿ ಸರ್ಚ್ ಮಾಡುವಂತಹ ಪ್ರಮುಖ ವಿಷಯಗಳು ಏನು ಎಂಬುದನ್ನು ನೋಡೋಣ.

ವರದಿಯ ಪ್ರಕಾರ ಹುಡುಗಿಯರು ಬಾಲ್ಯದಿಂದಲೂ ಮಹತ್ವಾಕಾಂಕ್ಷೆಯವರಾಗಿದ್ದಾರೆ ಅವರು ತಮ್ಮ ವೃತ್ತಿಜೀವನಕ್ಕೆ ಗರಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಸಾಮನ್ಯವಾಗಿ ನಮಗೆ ಯಾವುದಾದರೂ ವಿಷಯದ ಬಗ್ಗೆ ಗೊಂದಲ ಅಥವಾ ಮಾಹಿತಿ ತಿಳಿದಿಲ್ಲ ಎಂದಾದರೆ ಕೂಡಲೇ ಗೂಗಲ್​ನಲ್ಲಿ (Google) ಹುಡುಕುತ್ತೇವೆ. ವಿಳಾಸ, ವೆಬ್​ಸೈಟ್ಸ್​​, ಮೂವೀಸ್ ಹೀಗೆ ಒಳ್ಳೆಯ ವಿಚಾರದಿಂದ ಹಿಡಿದು ಕೆಟ್ಟ ವಿಚಾರದ ಬಗ್ಗೆ ಎಲ್ಲ ಮಾಹಿತಿ ಗೂಗಲ್ ನಮಗೆ ಒದಗಿಸುತ್ತದೆ. ಹೀಗಾಗಿ ಇಂಟರ್​​ನೆಟ್​​​ನಲ್ಲಿ ಗೂಗಲ್ ಸರ್ಚ್ (Google Search)​ ನಮ್ಮ ಬೆಸ್ಟ್​ ಫ್ರೆಂಡ್ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ್ ಎಂಜಿನ್ ಗೂಗಲ್ ಇಂದು ಇಂಟರ್‌ನೆಟ್ (Internet) ಎಂಬ ಅಪಾರವಾದ ಮಾಹಿತಿ ರಾಶಿಕಣಜವನ್ನು ಹೊಂದಿದೆ. 

ಸಾಮಾನ್ಯರಿಗೆ ಭವಿಷ್ಯವನ್ನು ತೋರಿಸುವ ಈ ಬೃಹತ್ ಕಂಪನಿ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ವಿಶ್ವದ ಅಸಮಾನ್ಯ ಸಾಮ್ರಾಟ ಆಗಲಿದೆ ಎಂದು ಹೇಳಲಾಗಿದೆ. ಪ್ರತಿ ಪ್ರಶ್ನೆಗೂ ಗೂಗಲ್ ಬಳಿ ಉತ್ತರವಿದೆ ಎಂದು ಹೇಳಲಾಗುತ್ತದೆ. ಅಂತೆಯೆ ಪ್ರತಿ ವರ್ಷ ಗೂಗಲ್​ನಲ್ಲಿ ಜನರು ಏನೆಲ್ಲ ಹುಡುಕಾಟ ನಡೆಸಿದ್ದಾರೆ ಎಂಬ ಫಲಿತಾಂಶಗಳ ವರದಿಯನ್ನು ಕಂಪನಿ ಬಿಡುಗಡೆ ಮಾಡುತ್ತದೆ. ಹಾಗಿದ್ದರೆ ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್​ನಲ್ಲಿ ಸರ್ಚ್ ಮಾಡುವಂತಹ ಪ್ರಮುಖ ವಿಷಯಗಳು ಏನು ಎಂಬುದನ್ನು ನೋಡೋಣ.

ಹುಡುಗಿಯರು ಗೂಗಲ್​ನಲ್ಲಿ ಸರ್ಚ್ ಮಾಡುವ ವಿಷಯಗಳು:

ವರದಿಯ ಪ್ರಕಾರ ಹುಡುಗಿಯರು ಬಾಲ್ಯದಿಂದಲೂ ಮಹತ್ವಾಕಾಂಕ್ಷೆಯವರಾಗಿದ್ದಾರೆ ಅವರು ತಮ್ಮ ವೃತ್ತಿಜೀವನಕ್ಕೆ ಗರಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅಂತಹ ಹುಡುಗಿಯರು ಅಂತರ್ಜಾಲದಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಾರಂತೆ. ಅಂದರೆ ತಮ್ಮ ಕರಿಯರ್ ಕುರಿತಂತೆ ಸಾಕಷ್ಟು ಚಿಂತಿತರಾಗುತ್ತಾರೆ. ಹೀಗಾಗಿ ಗೂಗಲ್​ನಲ್ಲಿ ತಮ್ಮ ವಿದ್ಯಾರ್ಹತೆಗೆ ಎಂತಹ ಕೆಲಸಗಳನ್ನು ನಾವು ಟ್ರೈ ಮಾಡಬಹುದು ಎಂಬುದರ ಕುರಿತಂತೆ ಹುಡುಕುತ್ತಲೇ ಇರುತ್ತಾರೆ.

ಆಸಕ್ತಿ ಹಾಗೂ ವಿಶೇಷ ಕಾಳಜಿ

ಇದಲ್ಲದೇ ಹುಡುಗಿಯರು ಆನ್​ಲೈನ್ ಶಾಪಿಂಗ್ ಸೈಟ್​ಗಳಿಗೆ ಹೋಗುತ್ತಾರೆ ಮತ್ತು ಬಟ್ಟೆಗಳ ವಿನ್ಯಾಸಗಳು, ಹೊಸ ಸಂಗ್ರಹಗಳು, ಕೊಡುಗೆಗಳ ಬಗ್ಗೆ ಇಂಟರ್ನೆಟ್​ನಲ್ಲಿ ಹೆಚ್ಚು ಹುಡುಕಾಟಗಳನ್ನು ಮಾಡುತ್ತಾರೆ. ಈ ಹಿಂದೆಯೂ ಹಲವು ಸಂಶೋಧನೆಗಳಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಯಾವುದೇ ರೀತಿಯ ಹೊಸ ರೀತಿಯ ಫ್ಯಾಷನ್ ಹಾಗೂ ಟ್ರೆಂಡ್ ಡ್ರೆಸ್​ಗಳು ಬಂದಾಗ ಮೊದಲು ಬಿಡುಗಡೆಯಾಗುವುದೇ ಆನ್​ಲೈನ್​ನಲ್ಲಿ ಹೀಗಾಗಿ ಅವರುಗಳು ರಾತ್ರಿಯಲ್ಲಿ ಫೋನ್ ಯೂಸ್ ಮಾಡುವಾಗ ಖಂಡಿತವಾಗಿ ಈ ಕುರಿತಂತೆ ಮೊದಲಿಗೆ ಹುಡುಕುತ್ತಾರೆ.

ಹುಡುಗಿಯರು ತಮ್ಮ ಸೌಂದರ್ಯದ ಕುರಿತಂತೆ ಬೇರೆಯಲ್ಲ ವಿಚಾರಗಳಿಗಿಂತ ಹೆಚ್ಚಾಗಿ ಆಸಕ್ತಿ ಹಾಗೂ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ. ಇಂತಹ ವಿಚಾರದಲ್ಲಿ 17ರಿಂದ 34ನೇ ವಯಸ್ಸಿನ ಹುಡುಗಿಯರು ಹೆಚ್ಚಾಗಿ ಆಸಕ್ತಿಯಿಂದ ಇರುತ್ತಾರೆ. ವಿವಿಧ ಪ್ರಕಾರದ ಕಾಸ್ಮೆಟಿಕ್ಸ್ ಮೇಕಪ್ ಕಿಟ್ ಗಳ ಕುರಿತಂತೆ ಅಂತರ್ಜಾಲದಲ್ಲಿ ಹುಡುಕುತ್ತಲೇ ಇರುತ್ತಾರೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo