ಕೊರೊನಾವೈರಸ್‌ Apple, Xiaomi ಮತ್ತು Samsung ಕಂಪನಿಗಳ ಮೇಲೂ ಪ್ರಭಾವ ಬೀರುತ್ತಿದೆ

ಕೊರೊನಾವೈರಸ್‌ Apple, Xiaomi ಮತ್ತು Samsung ಕಂಪನಿಗಳ ಮೇಲೂ ಪ್ರಭಾವ ಬೀರುತ್ತಿದೆ
HIGHLIGHTS

ಈ ಕರೋನ ವೈರಸ್‌ನಿಂದಾಗಿ ಚೀನಾದಲ್ಲಿ ಲಾಕ್‌ಡೌನ್ ಮುಂದುವರಿದರೆ ಈ ಕಂಪನಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ

ಚೀನಾದಿಂದ ಹುಟ್ಟಿದ ಕರೋನವೈರಸ್ ವಿಶ್ವದದ್ಯಾಂತ ಕೈಗಾರಿಕೆಗಳು ಮತ್ತು ಟೆಕ್ನಾಲಜಿಯ ಮೇಲೆ ಪ್ರಪಂಚದಾದ್ಯಂತದ ಜನರ ಮೇಲೆ ಸ್ವಲ್ಪ ಹೆಚ್ಚಾಗಿಯೇ ಪ್ರಭಾವ ಬೀರಿದೆ. ನಮಗೇಲ್ಲಾ ತಿಳಿದಿರುವ ಹಾಗೆ ಟೆಕ್ ಚೀನಾ  ಉದ್ಯಮವನ್ನು ಯಾವ ಮಟ್ಟಿಗೆ ಅವಲಂಬಿಸಿದೆ ಎಂಬುದು ಯಾವುದೇ ರೀತಿಯಲ್ಲಿ ರಹಸ್ಯವಾಗಿಲ್ಲ. ಅದರಲ್ಲೂ Apple, Xiaomi, Samsung ಮತ್ತು ಫೇಸ್‌ಬುಕ್‌ನಂತಹ ಹಲವಾರು ದೊಡ್ಡ ಹೆಸರುಗಳ ಬ್ರ್ಯಾಂಡ್ಗಳು ಈ ವೈರಸ್‌ನಿಂದಾಗಿ ಕೆಲವು ರೀತಿಯ ಪ್ರಭಾವಕ್ಕೆ ಒಳಗಾಗಿವೆ. ಈ ವೈರಸ್‌ ಟೆಕ್ ಕಂಪನಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ಇದು ಹೆಚ್ಚು ಮುಖ್ಯವಾಗಿ ಈ ಟೆಕ್ ಬ್ರಾಂಡ್ಗಾಳ ಮೂಲಕ ಹಾದು ಗ್ರಾಹಕರ ಮೇಲೆ ಬೀರುವ ಪರಿಣಾಮಗಳನೊಮ್ಮೆ ನೋಡೋಣ.

ಭಾರತದಲ್ಲಿ ನಂಬರ್ 1 ಸ್ಮಾರ್ಟ್ಫೋನ್ ಮಾರಾಟಗಾರನಾದ Xiaomi ಇಂಡಿಯಾ ತನ್ನ ಹೊಸ ಸ್ಮಾರ್ಟ್ಫೋನ್ ಸಾಗಣೆಯಲ್ಲಿ ಭಾರಿ ವಿಳಂಬವಾಗಬಹುದು. ಈ ಕರೋನ ವೈರಸ್‌ನಿಂದಾಗಿ ಚೀನಾದಲ್ಲಿ ಲಾಕ್‌ಡೌನ್ ಮುಂದುವರಿದರೆ Xaiomi ಕಂಪನಿಯ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು Xiaomi ಇಂಡಿಯಾದ ವಕ್ತಾರೊಬ್ಬರು ದಿ ಎಕನಾಮಿಕ್ ಟೈಮ್ಸ್ಗೆ ತಿಳಿಸಿದ್ದಾರೆ.

ಆಪಲ್ ತನ್ನ ಜನಪ್ರಿಯ ಏರ್‌ಪಾಡ್ಸ್ ಸಾಗಣೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಚೀನಾ ಆಪಲ್ ಉತ್ಪನ್ನಗಳ ಉತ್ಪಾದನೆಗೆ ಬಂದಾಗ ಅದು ಒಂದು ದೊಡ್ಡ ಕೇಂದ್ರವಾಗಿದೆ. ಈ ಕರೋನವೈರಸ್‌ನಿಂದಾಗಿ ಏರ್‌ಪಾಡ್ಸ್ ಸಾಗಣೆ ವಿಳಂಬವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆಪಲ್ ಕಡಿಮೆ ದರದಲ್ಲಿ ಬಿಡುಗಡೆ ಮಾಡಲಿದೆ ಎಂದು ವದಂತಿಗಳಿವೆ. ಅಲ್ಲದೆ ಹೊಸ ಐಫೋನ್ ಮಾರ್ಚ್‌ನಲ್ಲಿ ಬರುವುದಾಗಿ ಸೋರಿಕೆಯಾದ ವರದಿಯಂತೆ  ಕರೋನವೈರಸ್ ಕಾರಣದಿಂದಾಗಿ ಇದರ ಸರಬರಾಜು ಸರಪಳಿಗೆ ಪರಿಣಾಮ ಬೀರಬಹುದು ಎಂದು ಅನೇಕ ವರದಿಗಳು ಸೂಚಿಸಿವೆ. 

ಭಾರತದಲ್ಲಿ  ಹೊಸದಾಗಿ ಬಿಡುಗಡೆಯಾದ POCO X2 ಸ್ಮಾರ್ಟ್ಫೋನ್ ಸಾಗಣೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. Xiaomi ಸ್ಪಿನ್-ಆಫ್ ಬ್ರಾಂಡ್ ಪೊಕೊ ಇತ್ತೀಚೆಗೆ ತನ್ನ ಮೊದಲ ಸ್ಮಾರ್ಟ್ಫೋನ್ POCO X2 ಅನ್ನು ದೇಶದಲ್ಲಿ ಬಿಡುಗಡೆ ಮಾಡಿತು. ಅದ್ರ ಪ್ರಾರಂಭದಲ್ಲಿ ಭಾರತದಲ್ಲಿ ಒಂದು ತಿಂಗಳ ಮೊಬೈಲ್ ಫೋನ್ ಮಾರಾಟವಿದೆ ಎಂದು ಕಂಪನಿ ಹೇಳಿದೆ. ಈ ಕರೋನವೈರಸ್ ಪ್ರಭಾವ ಮುಂದುವರಿದರೆ POCO X2 ಸ್ಮಾರ್ಟ್ಫೋನ್ ಮೇಲಿಯೂ ಸಹ ಭಾರಿ ಪರಿಣಾಮ ಬೀರಬಹುದು. 

ನಿಮಗೆ ತಿಳಿದಿರುವ ಹಾಗೆ ಕಳೆದ ವಾರ ಆಪಲ್ ತನ್ನ ಸ್ಟೋರ್ ಮತ್ತು ಆಫೀಸ್ಗಳನ್ನು ಫೆಬ್ರವರಿ 9 ರವರೆಗೆ ಮುಚ್ಚುವುದಾಗಿ ಘೋಷಿಸಿತು. ಆದಾಗ್ಯೂ ಚೀನಾದಲ್ಲಿ ಕಚೇರಿಗಳು ಮತ್ತು ಮಳಿಗೆಗಳನ್ನು ತೆರೆಯಲು ಕಂಪನಿಯು ಮತ್ತಷ್ಟು ವಿಳಂಬ ಮಾಡಿದೆ ಎಂದು ತೋರುತ್ತಿದೆ. ಅಲ್ಲದೆ ಚೀನಾದಲ್ಲಿನ ಬ್ರಾಂಡ್ಗಳ ಟಿವಿ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು. ಇದರ ಉತ್ಪಾದನೆ ಕಡಿಮೆಯಾದ ಕಾರಣ ಟಿವಿಗಳ ಲಭ್ಯತೆಯಲ್ಲಿ ಇಳಿಕೆ ಕಂಡುಬಂದಿದೆ. ಇದು LCD ಟಿವಿ ಪ್ಯಾನೆಲ್‌ಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo