Godrej 1.4 Ton 5 Star AC ಅಮೆಜಾನ್‌ನಲ್ಲಿ ಇಂದು ಸಿಕ್ಕಾಪಟ್ಟೆ ಕಡಿಮೆ ಬೆಲೆ ಮತ್ತು ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಲಭ್ಯ!

HIGHLIGHTS

ಪ್ರಸ್ತುತ ಹೊಸ Godrej 1.4 Ton 5 Star AC ಅತ್ಯುತ್ತಮ ಫೀಚರ್ಗಳೊಂದಿಗೆ ಬರುತ್ತದೆ.

ಅಮೆಜಾನ್‌ನಲ್ಲಿ Godrej 1.4 Ton 5 Star AC ಸುಮಾರು 30,000 ರೂಗಳೊಳಗೆ ಖರೀದಿಸಬಹುದು.

ಈ ಗೋದ್ರೇಜ್ 1.4 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ ಭಾರತದ ಬೇಸಿಗೆಯ ಉತ್ತುಂಗಕ್ಕೆ ಅಗತ್ಯವಾಗಿರುತ್ತದೆ.

Godrej 1.4 Ton 5 Star AC ಅಮೆಜಾನ್‌ನಲ್ಲಿ ಇಂದು ಸಿಕ್ಕಾಪಟ್ಟೆ ಕಡಿಮೆ ಬೆಲೆ ಮತ್ತು ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಲಭ್ಯ!

Godrej 1.4 Ton 5 Star AC: ನಿಮ್ಮ ಮನೆ ಅಥವಾ ಆಫೀಸ್‌ಗೊಂದು ಹೊಸ ಏರ್ ಕಂಡಿಷನರ್ ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ಸೇಲ್ನಲ್ಲಿ (Amazon GIF Sale 2025) ಜನಪ್ರಿಯ ಮತ್ತು ಹೆಚ್ಚು ಭರವಸೆಗೆ ಹೆಸರಾಗಿರುವ ಗೋದ್ರಾಜ್ ಕಂಪನಿಯ ಈ 1.4 Ton 5 Star AC (EI 17LINV5R32 WYR) ಜಬರ್ದಸ್ತ್ ಡೀಲ್ ಪಡೆಯಲು ಸೂಕ್ತ ಸಮಯವಾಗಿದ್ದು ಇಂದೇ ಖರೀದಿಸಿಕೊಳ್ಳುವುದು ಉತ್ತಮ. ನೀವು ಮೊದಲ ಬಾರಿಗೆ ಹೊಸ ಏರ್ ಕಂಡಿಷನರ್ ಖರೀದಿಸಲು ಯೋಚಿಸುತ್ತಿದ್ದರೆ ಮಾರುಕಟ್ಟೆಯಲ್ಲಿ ಹತ್ತಾರು ಆಯ್ಕೆಗಳು ನಿಮಗೆ ಗೊಂದಲಕ್ಕೆ ದೂಡುತ್ತವೆ. ಪ್ರಸ್ತುತ ನಿಮ್ಮ ಕೈಗೆಟಕುವ ಈ ಹೊಸ ಗೋದ್ರಾಜ್ ಏರ್ ಕಂಡಿಷನರ್ ಯಾಕೆ ಖರೀದಿಸಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವುದೇ ಒಂದು ಹೊಸ ಏರ್ ಕಂಡಿಷನರ್ ಖರೀದಿಸುವ ಮುಂಚೆ ಅದರ ಯಾವ ಅಂಶಗಳನ್ನು ಗಮನಿಸಬೇಕು ಮತ್ತು ಯಾವ ವಿಷಯ ಗೊತ್ತಿರಬೇಕು ತಿಳಿಯಿರಿ.

Digit.in Survey
✅ Thank you for completing the survey!

Godrej 1.4 Ton 5 Star AC (EI 17LINV5R32 WYR) ಏಕೆ ಖರೀದಿಸಬೇಕು?

ಈ ಗೋದ್ರೇಜ್ 1.4 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ ಭಾರತದ ಬೇಸಿಗೆಯ ಉತ್ತುಂಗಕ್ಕೆ ಅಗತ್ಯವಾಗಿರುತ್ತದೆ. ಇದರ ಅತ್ಯುತ್ತಮ ಫೀಚರ್ ಮತ್ತು ದೃಢವಾದ ವಾರಂಟಿ ನಿಮ್ಮನ್ನು ಮೊದಲು ಸೆಳೆಯುತ್ತದೆ. ಕಂಪನಿ 1 ವರ್ಷದ ಪ್ರಾಡಕ್ಟ್ ವಾರಂಟಿಯೊಂದಿಗೆ 5 ವರ್ಷಗಳ ಸಮಗ್ರ ಖಾತರಿಯನ್ನು ಒದಗಿಸುತ್ತದೆ. ಇದರ ಕಂಪ್ರೆಸರ್ ಮೇಲೆ ಪೂರ್ತಿ 10 ವರ್ಷಗಳ ವಾರಂಟಿ ನೀಡುತ್ತದೆ. ಹೆವಿ-ಡ್ಯೂಟಿ ಕೂಲಿಂಗ್ ಸಾಮರ್ಥ್ಯವು ನಿಜವಾದ ವಿಭಿನ್ನತೆಯಾಗಿದ್ದು ಸುತ್ತುವರಿದ ತಾಪಮಾನವು ಸುಮಾರು 52°C ವರೆಗೆ ಏರಿದಾಗಲೂ ನಿಮ್ಮನ್ನು ತಂಪಾಗಿಸುತ್ತದೆ.

Godrej 1.4 Ton 5 Star AC (EI 17LINV5R32 WYR)-

ಹೆಚ್ಚುವರಿಯಾಗಿ AI ಟೆಕ್ ಮತ್ತು I-ಸೆನ್ಸ್ ಟೆಕ್ನಾಲಜಿ ಸ್ಮಾರ್ಟ್ ಕೂಲಿಂಗ್ ಅನುಭವವನ್ನು ನೀಡುತ್ತವೆ. ಈ AC ರಿಮೋಟ್‌ನಲ್ಲಿ ಅಂತರ್ನಿರ್ಮಿತ ಸೆನ್ಸರ್ ನೀಡಿದ್ದು ಅದು ಕೋಣೆಯ ಉಷ್ಣತೆಯನ್ನು ನಿಮ್ಮ ನಿಖರವಾದ ಸ್ಥಳಕ್ಕೆ ಹೊಂದಿಸುತ್ತದೆ. ಇದು ವೈಯಕ್ತಿಕಗೊಳಿಸಿದ ಮತ್ತು ನಿಖರವಾದ ಸೌಕರ್ಯವನ್ನು ಖಾತ್ರಿಗೊಳಿಸುತ್ತದೆ. ಈ ಫೀಚರ್ ಪ್ರೀಮಿಯಂ ಅಲ್ಲದ ಮಾದರಿಗಳಲ್ಲಿ ಹೆಚ್ಚಾಗಿ ಕಾಣೆಯಾಗಿದೆ. ಕೊನೆಯದಾಗಿ 5-in-1 ಕನ್ವರ್ಟಿಬಲ್ ಕೂಲಿಂಗ್ ಮೋಡ್ ಒಂದು ಪ್ರಮುಖ ಅಂಶವಾಗಿದ್ದು ಕೂಲಿಂಗ್ ಸಾಮರ್ಥ್ಯವನ್ನು 40% ರಿಂದ 110% ವರೆಗೆ ಹೊಂದಿಸಲು ಅನುವು ಮಾಡಿಕೊಡುತ್ತದೆ.

Godrej 1.4 Ton 5 Star AC ಅತ್ಯುತ್ತಮ ಫೀಚರ್ಗಳೇನು?

ಈ ಗೋದ್ರೇಜ್ ಇನ್ವರ್ಟರ್ ಸ್ಪ್ಲಿಟ್ ಪವರ್ಫುಲ್ ಉಪಕರಣವಾಗಿದ್ದು ಸುಧಾರಿತ ತಂಪಾಗಿಸುವಿಕೆ ಮತ್ತು ಬಾಳಿಕೆ ಫೀಚರ್ ಹೊಂದಿದೆ. ಪ್ರಸ್ತುತ ಇದು ಸಣ್ಣ ಅಥವಾ ಸುಮಾರು 170 ಚದರ ಅಡಿವರೆಗಿನ ಕೊಠಡಿಗೆ ಸೂಕ್ತವಾಗಿದೆ. ಇದರ ISEER ಮೌಲ್ಯದೊಂದಿಗೆ ಹೆಚ್ಚಿನ 5 ಸ್ಟಾರ್ ಎನರ್ಜಿ ರೇಟಿಂಗ್ ಅನ್ನು ಹೊಂದಿದೆ. ಇದು ಕಡಿಮೆ ವಾರ್ಷಿಕ ಪವರ್ ಬಳಕೆಯನ್ನು ಖಚಿತಪಡಿಸುತ್ತದೆ.

Also Read: ಅಮೆಜಾನ್‌ನಲ್ಲಿ iPhone 15 ಫೋನ್ ಇಂದು ಬರೋಬ್ಬರಿ ₹45,000 ರೂಗಳಿಗಿಂತ ಕಡಿಮೆ ಬೆಲೆಗೆ ಲಭ್ಯ!

ಇದರ ಮಧ್ಯಭಾಗದಲ್ಲಿ ವೇರಿಯಬಲ್ ಸ್ಪೀಡ್ ಇನ್ವರ್ಟರ್ ಕಂಪ್ರೆಸರ್ ಹೊಂದಿದ್ದು ಇದು ಹೆಚ್ಚಿನ ಶಾಖದ ಹೊರೆ ಆಧರಿಸಿ ಪವರ್ ಸರಿಹೊಂದಿಸುತ್ತದೆ. ಹೆಚ್ಚುವರಿಯಯಾಗಿ ಇದು ಬ್ಲೂ ಫಿನ್ ಆಂಟಿ-ಕೊರೊಷನ್ ಲೇಪನದೊಂದಿಗೆ 100% ತಾಮ್ರ ಕಂಡೆನ್ಸರ್ ಸುರುಳಿಗಳನ್ನು ಹೊಂದಿದೆ. ವೈಯಕ್ತಿಕಗೊಳಿಸಿದ ಕೂಲಿಂಗ್‌ಗಾಗಿ I-ಸೆನ್ಸ್ ಟೆಕ್ನಾಲಜಿ 5-in-1 ಕನ್ವರ್ಟಿಬಲ್ ಕೂಲಿಂಗ್ ಹೆವಿ ಡ್ಯೂಟಿ ಕೂಲಿಂಗ್‌ನಂತಹ ವಿಶೇಷ ಫೀಚರ್ ಹೊಂದಿದೆ.

Godrej 1.4 Ton 5 Star AC ಬೆಲೆ ಮತ್ತು ಡಿಸ್ಕೌಂಟ್‌ಗಳು:

ಅಮೆಜಾನ್ (GIF) ಮಾರಾಟದ ಸಮಯದಲ್ಲಿ ಈ AC ಬೆಲೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಇದರ ಬೆಲೆ ₹49,900 ರೂಗಳಾಗಿವೆ ಆದರೆ ಮಾರಾಟದಲ್ಲಿ ಸುಮಾರು ₹31,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಮಾರಾಟದಲ್ಲಿ ನಿರ್ದಿಷ್ಟ ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿ 1750 ರೂಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಇದು ಸಾಮಾನ್ಯವಾಗಿ 10% ರಿಂದ 15% ವರೆಗೆ ಇರುತ್ತದೆ. ವಿನಿಮಯ ಬೋನಸ್ (Exchange Bonus) ಅಡಿಯಲ್ಲಿ ನಿಮ್ಮ ಹಳೆಯ AC ಅಥವಾ ಉಪಕರಣವನ್ನು ವಿನಿಮಯ (Exchange) ಮಾಡಿದರೆ ಅದರ ಮೌಲ್ಯದ ಜೊತೆಗೆ ಹೆಚ್ಚುವರಿಯಾಗಿ ₹5,100 ವರೆಗೆ ವಿನಿಮಯ ಬೋನಸ್ ಕೂಡ ಸಿಗುವ ಸಾಧ್ಯತೆ ಇರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo