ನಿಮಗೊತ್ತಾ Type C ಮತ್ತು Micro USB ಮಧ್ಯೆ ಇರುವ ವ್ಯತ್ಯಾಸಗಳು

ನಿಮಗೊತ್ತಾ Type C ಮತ್ತು Micro USB ಮಧ್ಯೆ ಇರುವ ವ್ಯತ್ಯಾಸಗಳು
HIGHLIGHTS

ಈ ಟೈಪ್ C ಪೋರ್ಟ್ಗಳಿಗೆ ಭಾರಿ ಮಾತ್ರದ ಅಂತಂದ್ರೆ 18W ಮೇಲ್ಪಟ್ಟ ಅಡಾಪ್ಟರ್ಗಳನ್ನೂ ನೀಡಲಾಗುತ್ತದೆ.

ಇಂದಿನ ದಿನಗಳಲ್ಲಿ ಟೈಪ್ ಸಿ ಪೋರ್ಟ್ ಅನ್ನು ಮೊಬೈಲ್, ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ಗಳಲ್ಲೂ ಲಭ್ಯವಾಗುತ್ತಿವೆ.

ಸ್ನೇಹಿತರೇ ಇಂದು ನಾನು ನಿಮಗೆ Type C ಮತ್ತು Micro USB Portಗಳ ಬಗ್ಗೆ ಅನುಕೂಲ ಅನಾನುಕೂಲ ಮತ್ತು ಇದರ ವ್ಯತ್ಯಾಸಗಳನ್ನು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಲಿದ್ದೇನೆ. ಈ Type C ಮತ್ತು Micro USB Portಗಳ ಬಗ್ಗೆ ಹೆಚ್ಚಾಗಿ ಫೋನ್ಗಳಲ್ಲಿ ನೋಡಿರಬವುದು. ಅಲ್ಲದೆ ಇಂದಿನ ದಿನಗಳಲ್ಲಿ ಟೈಪ್ ಸಿ ಪೋರ್ಟ್ ಅನ್ನು ಮೊಬೈಲ್, ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ಗಳಲ್ಲೂ ಲಭ್ಯವಾಗುತ್ತಿವೆ. ಹಾಗಾದರೆ ಇದು ಯಾವ ಸ್ಪೀಡಲ್ಲಿ ಕೆಸಲ ಮಾಡುತ್ತೆ ಮತ್ತು ಅಣು ಪ್ರಾಯೋಜನ ಅಂಥ ನೋಡೋಣ.        

ಮೊದಲಿಗೆ Type C ಪೋರ್ಟ್ ಬಗ್ಗೆ ನೋಡೋಣ ಇದು ಮೊದಲು 2014 ರಿಂದ ಫೋನ್ಗಳಲ್ಲಿ ಬರಲು ಶುರುವಾಯ್ತು ಇದು ಮೈಕ್ರೋ USB ಪೋರ್ಟ್ಗಿಂತ ಸ್ವಲ್ಪ ದೊಡ್ಡದಾಗಿದ್ದು ಇದರಲ್ಲಿ ಯಾವುದೇ ರೀತಿಯ ಹುಕ್ ಅಂದ್ರೆ ಈ ಪೋರ್ಟ್ ಬಾಯೊಳಗೆ ಸಣ್ಣ ಸಣ್ಣ ತಾರುಗಳಿರುವುದಿಲ್ಲ.  ಈ Type C ಪೋರ್ಟ್ 3.0, 3.1, 3.2 ಮಾದರಿಯಲ್ಲಿ ಬರುತ್ತದೆ. ಈ ಪೋರ್ಟ್ಗಳು ಐದು ಗೀಗ ಬೈಟ್ ಪರ್ ಸೆಕೆಂಡಿಂದ ಹಿಡಿದು ಇಪ್ಪತ್ತು ಗೀಗ ಬೈಟ್ ಪರ್ ಸೆಕೆಂಡ್ ಸ್ಪೀಡಲ್ಲಿ ಡೇಟಾ ಟ್ರಾನ್ಸ್ಫರ್ ಮಾಡಲು ಸಪೋರ್ಟ್ ಮಾಡುತ್ತದೆ. ಸಿಂಪಲಾಗಿ ಹೇಳೋದಾದ್ರೆ ನಾರ್ಮಲಾಗಿ ಈ ಟೈಪ್ C ಪೋರ್ಟ್ಗಳಿಗೆ ಭಾರಿ ಮಾತ್ರದ ಅಂತಂದ್ರೆ 18W ಮೇಲ್ಪಟ್ಟ ಅಡಾಪ್ಟರ್ಗಳನ್ನೂ ನೀಡಲಾಗುತ್ತದೆ.

https://i.can.ua/goods/4133/4133829.jpg 

ಈ ಟೈಪ್ ಸಿ ಪೋರ್ಟ್ ಕನೆಕ್ಟರ್ ಸುಮಾರು ನೂರು ವ್ಯಾಟ್ಗಳ ಪವರ್ ಸಪ್ಲಯ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ಮೂಲಕ ನಿಮ್ಮ ಡೇಟಾ ಟ್ರಾನ್ಸ್ಫರ್ ಮತ್ತು ಡಿವೈಸ್ ಚಾರ್ಜ್ ವೇಗವಾಗಿ ಏರುತ್ತದೆ. ಅಲ್ಲದೆ ಇಂದಿನ ದಿನಗಳಲ್ಲಿ ಟೈಪ್ ಸಿ ಪೋರ್ಟ್ ಹೆಚ್ಚಾಗಿ ಟ್ರೆಂಡ್ ಆಗಿದ್ದು ಮೊಬೈಲ್, ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ಗಳಲ್ಲು ಲಭ್ಯವಿದೆ. ಈ ಟೈಪ್ ಸಿ ಪೋರ್ಟ್ಗಳನ್ನು ಯಾವುದೇ ಡಿವೈಸ್ಗಳಿಗೆ ಸೇರಿಸಲು ನಿರ್ದಿಷ್ಟ ಡೈರೆಕ್ಷನ್ ಇರೋದಿಲ್ಲ ಹೇಗೆ ಬೇಕಾದ್ರು ಸೇರಿಸಬವುದು.

ಈವರೆಗಿನ ಅದ್ದೂರಿಯ ಟೈಪ್ ಸಿ ಪೋರ್ಟ್ ಚಾರ್ಜರ್ ಅಂತಂದ್ರೆ Realme X2 Pro ಸ್ಮಾರ್ಟ್ಫೋನ್ ಜೊತೆಗೆ ಬರುವ ಈ ಟೈಪ್ ಸಿ ಪೋರ್ಟ್.  ಏಕೆಂದರೆ ಇದರ ಅಡಾಪ್ಟರ್ ಸುಮಾರು 50W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುವ ಸಾಮರ್ಥ್ಯವನು ಹೊಂದಿದೆ. ಕೆಲವೇ ನಿಮಿಷಗಳಲ್ಲಿ ಇದು 10 ರಿಂದ 100% ಚಾರ್ಜ್ ಮಾಡುತ್ತೇ. 

https://sgcdn.startech.com/005329/media/products/gallery_large/icusbandrs232.b.jpg         

ಅದೇ ಈ Micro USB ಪೋರ್ಟ್ಗಳು ಸಹ 1.0, 2.0, 3.1 ಮಾದರಿಯಲ್ಲಿ ಬರುತ್ತದೆ. ಈ ಪೋರ್ಟ್ಗಳು ಐದು ಗೀಗ ಬೈಟ್ ಪರ್ ಸೆಕೆಂಡಿಂದ ಹಿಡಿದು ಕೇವಲ ಹತ್ತು ಗೀಗ ಬೈಟ್ ಪರ್ ಸೆಕೆಂಡ್ ಸ್ಪೀಡಲ್ಲಿ ಡೇಟಾ Transfer ಮಾಡಲು ಸಪೋರ್ಟ್ ಮಾಡುತ್ತದೆ. ಈ ಮೈಕ್ರೋ USB ಪೋರ್ಟ್ಗಳು ಕೇವಲ 2.5 ವ್ಯಾಟ್ ಪವರ್ ಸಪ್ಲಯ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಮೂಲಕ ನಿಮ್ಮ ಡೇಟಾ Transfer ಮತ್ತು ಡಿವೈಸ್ ಚಾರ್ಜ್ ಮಂಧಗತಿಯಲ್ಲಿ ಏರುತ್ತದೆ. ಈ ಪೋರ್ಟ್ಗಳನ್ನು ಯಾವುದೇ ಡಿವೈಸ್ಗಳಿಗೆ ಕನೆಕ್ಟ್ ಮಾಡಲು ಇದರದೇಯಾದ ನಿರ್ದಿಷ್ಟ ಡೈರೆಕ್ಷನ್ ಇರುತ್ತದೆ. ಅಲ್ಲದೆ ಇಂದಿನ ದಿನಗಳಲ್ಲಿ ಟೈಪ್ ಸಿ ಪೋರ್ಟ್ ಹೆಚ್ಚಾಗಿ ಟ್ರೆಂಡ್ ಆಗಿದ್ದು ಮೈಕ್ರೋ USB ಅಷ್ಟಾಗಿ ಬಳಕೆಯಲ್ಲಿಲ್ಲ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo