ಎಲ್ಲ ಚಾಟ್‌ಜಿಪಿಟಿ ಬಳಕೆದಾರರಿಗೆ ಹೊಸ ಮತ್ತು ಉಚಿತ ChatGPT 5 ಪರಿಚಯ!

HIGHLIGHTS

ಓಪನ್ ಎಐ ಸಂಸ್ಥಾಪಕ ಸ್ಯಾಮ್ ಆಲ್ಟ್‌ಮನ್ (Sam Altman) ಹೊಸ ChatGPT 5 ಬಿಡುಗಡೆಗೊಳಿಸಿದ್ದಾರೆ.

ಆರ್ಟಿಫೀಆಯಲ್ ಇಂಟೆಲಿಜೆನ್ಸ್ (ಎಐ) ವಲಯದಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ AI ಮಾರುಕಟ್ಟೆಯಾಗಿದೆ.

ಈ ಹೊಸ ChatGPT 5 ಆರ್ಟಿಫಿಯಲ್ ಇಂಟೆಲಿಜೆನ್ಸ್ ಇಲ್ಲಿಯವರೆಗಿನ ಅತ್ಯಂತ ಅಡ್ವಾನ್ಸ್ ಎಐ ಮಾದರಿಯಾಗಿದೆ.

ಎಲ್ಲ ಚಾಟ್‌ಜಿಪಿಟಿ ಬಳಕೆದಾರರಿಗೆ ಹೊಸ ಮತ್ತು ಉಚಿತ ChatGPT 5 ಪರಿಚಯ!

ಜನಪ್ರಿಯ ಮತ್ತು ಓಪನ್ ಎಐ ಸಂಸ್ಥಾಪಕ ಸ್ಯಾಮ್ ಆಲ್ಟ್‌ಮನ್ (Sam Altman) ಈಗ ಚಾಟ್ ಜಿಪಿಟಿಯನ್ನು ಬಿಡುಗಡೆ ಮಾಡಿದೆ. ಇದು ಇಲ್ಲಿಯವರೆಗಿನ ಅತ್ಯಂತ ಅಡ್ವಾನ್ಸ್ ಎಐ ಮಾದರಿಯಾಗಿದೆ. ಈ ಹೊಸ ChatGPT 5 ಮಾದರಿಯು ಅಲ್ಲ ಬಳಕೆದಾರರಿಗೆ ಮಿತಿಯೊಂದಿಗೆ ಉಚಿತವಾಗಿದ್ದು ಹಿಂದಿನ ಆವೃತ್ತಿಗಳಿಗಿಂತ ಬುದ್ಧಿವಂತಿಕೆಯಲ್ಲಿ ಗಮನಾರ್ಹ ಅಧಿಕವನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಬಳಕೆದಾರರು ಹೊಸ ಕೋಡಿಂಗ್, ಗಣಿತದ ಪ್ರಶ್ನೆಗೆ ಉತ್ತರ, ಯಾವುದೇ ವಿಷಯದ ಮೇಲೆ ಕೈ ಬರವಣಿಗೆ, ಆರೋಗ್ಯ ಸಂಭಧಿತ ಮಾಹಿತಿ ಮತ್ತು ದೃಶ್ಯ ಗ್ರಹಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಕಾರ್ಯಕ್ಷಮತೆಯನ್ನು ನೀಡುತ್ತದೆ.

Digit.in Survey
✅ Thank you for completing the survey!

ಭಾರತವು ವಿಶ್ವದ ಎರಡನೇ ಅತಿದೊಡ್ಡ AI ಮಾರುಕಟ್ಟೆ

ಅಲ್ಲದೆ ಭಾರತವನ್ನು ನಂಬಲಾಗದಷ್ಟು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಎಂದು ಕರೆದ ಸ್ಯಾಮ್ ಆಲ್ಟ್‌ಮನ್ (Sam Altman) ಆರ್ಟಿಫಿಯಲ್ ಇಂಟೆಲಿಜೆನ್ಸ್ ವಲಯದಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ AI ಮಾರುಕಟ್ಟೆ ಎಂದು ಹೇಳಿದ್ದಾರೆ. ಯುಎಸ್ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು ಭಾರತೀಯರು ನಂಬಲಾಗದಷ್ಟು ವೇಗವಾಗಿ ಬೆಳೆಯುತ್ತಿದ್ದು ಬಳಕೆದಾರರು AI ಜೊತೆಗೆ ಸಿಕ್ಕಾಪಟ್ಟೆ ವಿಶೇಷತೆಗಳನ್ನು ಮಾಡುತ್ತಿರುವುದು ನಿಜಕ್ಕೂ ಗಮನಾರ್ಹವಾಗಿದೆ ಎಂದಿದ್ದಾರೆ.

Also Read: Raksha Bandhan Gifts 2025: ನಿಮ್ಮ ಪ್ರೀತಿ ಪಾತ್ರರಿಗೆ ಇಂಟ್ರೆಸ್ಟಿಂಗ್ ಗ್ಯಾಜೆಟ್ ಗಿಫ್ಟ್ ನೀಡಲು ಇಲ್ಲಿದೆ ಅತ್ಯುತ್ತಮ ಆಯ್ಕೆ!

GPT 5 ಅನ್ನು ಉಚಿತವಾಗಿ ಬಳಸುವುದು ಹೇಗೆ?

ಮೊದಲು ನೀವು ChatGPT ಸೈನ್ ಅಪ್ ಅಥವಾ ಲಾಗಿನ್ ಮಾಡಿ.

ಈಗ ಚಾಟ್ ಮಾಡಲು ಪ್ರಾರಂಭಿಸಿ GPT-5 ಈಗ ಡೀಫಾಲ್ಟ್ ಮಾದರಿಯಾಗಿದೆ ಆದ್ದರಿಂದ ನಿಮ್ಮ ಪ್ರಶ್ನೆ ಅಥವಾ ಪ್ರಾಂಪ್ಟ್‌ಗಳನ್ನು ನೀಡಬಹುದು.

ನಿಮ್ಮ ಫ್ರೀ-ಟೈರ್ ಬಳಕೆಯ ಮಿತಿಯನ್ನು ನೀವು ತಲುಪಿದರೆ ನಿಮ್ಮನ್ನು GPT-5 ಮಿನಿಗೆ ಬದಲಾಯಿಸಲಾಗುತ್ತದೆ.

ನೀವು ದಿನಕ್ಕೆ ಒಂದು GPT-5 ಚಿಂತನಾ ಮೆಸೇಜ್ಗಳನ್ನು ಪಡೆಯುತ್ತೀರಿ ಸಂಕೀರ್ಣ ಅಥವಾ ಹೆಚ್ಚಿನ ಪಾಲನ್ನು ಹೊಂದಿರುವ ಪ್ರಶ್ನೆಗಳಿಗೆ ಅದನ್ನು ಬಳಸಬಹುದು.

ChatGPT 5

ಭಾರತಕ್ಕಾಗಿ AI ಅನ್ನು ಸುಧಾರಿಸಲು ಮತ್ತು ಅದನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಓಪನ್‌ಐ ಸ್ಥಳೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಸೆಪ್ಟೆಂಬರ್‌ನಲ್ಲಿ ದೇಶಕ್ಕೆ ಭೇಟಿ ನೀಡುವ ಯೋಜನೆಯನ್ನೂ ಅವರು ಹೇಳಿದರು. ನೀವು GPT-5 ಅನ್ನು ಉಚಿತವಾಗಿ ಬಳಸಬಹುದು ಆದರೆ ಬಳಕೆಯ ಮಿತಿಗಳನ್ನು ನಿರೀಕ್ಷಿಸಬಹುದು. ನೀವು ಕಡಿಮೆ ನಿರ್ಬಂಧಗಳು ಮತ್ತು ಅತ್ಯಂತ ಶಕ್ತಿಶಾಲಿ ರೂಪಾಂತರಗಳಿಗೆ ಪ್ರವೇಶವನ್ನು ಬಯಸಿದರೆ ಪ್ಲಸ್ ಅಥವಾ ಪ್ರೊ ಯೋಜನೆಗಳು ಹೆಚ್ಚು ನಮ್ಯತೆ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತವೆ.

ChatGPT 5 ಬಳಕೆಯ ಪ್ರಯೋಜನಗಳೇನು?

ಈಗಾಗಲೇ ಮೇಲೆ ತಿಳಿಸಿರುವಂತೆ ಇದರಲ್ಲಿ ಬಳಕೆದಾರರು ಹೊಸ ಕೋಡಿಂಗ್, ಗಣಿತದ ಪ್ರಶ್ನೆಗೆ ಉತ್ತರ, ಯಾವುದೇ ವಿಷಯದ ಮೇಲೆ ಕೈ ಬರವಣಿಗೆ, ಆರೋಗ್ಯ ಸಂಭಧಿತ ಮಾಹಿತಿ ಮತ್ತು ದೃಶ್ಯ ಗ್ರಹಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಕಾರ್ಯಕ್ಷಮತೆಯನ್ನು ನೀಡುತ್ತದೆ. ವೇಗವಾದ ಹೆಚ್ಚು ನಿಖರವಾದ ಉತ್ತರಗಳು, ಉತ್ತಮ ತಾರ್ಕಿಕತೆ ಮತ್ತು ಸಂದರ್ಭಕ್ಕೆ ಸುಧಾರಿತ ಸ್ಮರಣೆಯನ್ನು ನೀಡುತ್ತದೆ. ಇದು ಮೆಸೇಜ್, ಇಮೇಜ್ ಮತ್ತು ವಾಯ್ಸ್ ಸರಾಗವಾಗಿ ನಿರ್ವಹಿಸುತ್ತದೆ. ಆಳವಾದ ವಿಶ್ಲೇಷಣೆಗಾಗಿ ನೀವು ಪ್ರತಿದಿನ ಒಂದು “ಚಿಂತನೆಯ ಮೆಸೇಜ್ಗಳನ್ನು ಪಡೆಯುತ್ತೀರಿ. ಗಮದನದಲ್ಲಿರಲಿ ಈ ಉಚಿತ ಬಳಕೆದಾರರು ಸೀಮಿತ ಬಳಕೆಯನ್ನು ಅನ್‌ಲಾಕ್ ಮಾಡುತ್ತವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo