Chandra Grahan Timing: ಇದು ವರ್ಷದ ಮೊದಲ ಚಂದ್ರಗ್ರಹಣ

HIGHLIGHTS

ಭೂಮಿಯು ಚಂದ್ರನ ಮೇಲೆ ಬೀಳುವ ಸೂರ್ಯನ ಕಿರಣಗಳನ್ನು ತಡೆದು ಹೊರಗಿನ ನೆರಳು ಮಾತ್ರ ಚಂದ್ರನ ಮೇಲೆ ಬೀಳಿಸುತ್ತದೆ

ಚಂದ್ರಗ್ರಹಣದ ಸಮಯದಲ್ಲಿ ಅನೇಕ ವಿಷಯವನ್ನು ಗಮನದಲ್ಲಿಡುವುದು ಅನಾದಿ ಕಾಲದಿಂದಲೂ ನಡೆದು ಬಂದ ಸಾಂಪ್ರದಾಯ.

Chandra Grahan Timing: ಇದು ವರ್ಷದ ಮೊದಲ ಚಂದ್ರಗ್ರಹಣ

ಈ ಚಂದ್ರಗ್ರಹಣ 2020 ಸಮಯ ಆರಂಭದಲ್ಲಿಯೇ ಅಂದ್ರೆ ಇದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಇದರ ವಿಶೇಷವೆಂದರೆ ಅದು ಭಾರತದಲ್ಲಿಯೂ ಕಾಣಿಸುತ್ತದೆ. ಈ ಗ್ರಹಣವು ಇಂದು ಅಂದ್ರೆ 10ನೇ ಜನವರಿ 2020 ರಂದು ರಾತ್ರಿ 10:39pm ನಿಮಿಷಗಳಿಂದ ಪ್ರಾರಂಭವಾಗಿ 11ನೇ ಜನವರಿ 2020 ಮಧ್ಯರಾತ್ರಿ 02:40am ರವರೆಗೆ ಇರುತ್ತದೆ. ಈ ಚಂದ್ರಗ್ರಹಣವು 04 ಗಂಟೆ 01 ನಿಮಿಷಗಳ ಕಾಲ ಇರುತ್ತದೆ. ಇದು ಭಾರತ ಸೇರಿದಂತೆ ಯುರೋಪ್, ಆಸ್ಟ್ರೇಲಿಯಾ ಮತ್ತು ಆಫ್ರಿಕಾದ ಅನೇಕ ಭಾಗಗಳಲ್ಲಿ ಕಾಣಿಸುತ್ತದೆ. ಆದಾಗ್ಯೂ ಚಂದ್ರಗ್ರಹಣ ಇದು ಹೆಚ್ಚು ಪರಿಣಾಮ ಬೀರುವುದಿಲ್ಲವೆಂದು ಮೂಲಗಳು ತಿಳಿಸಿವೆ.

Digit.in Survey
✅ Thank you for completing the survey!

ಚಂದ್ರಗ್ರಹಣ (Lunar eclipse) ಎಂದರೇನು?
ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದು ಅದರ ಉಪಗ್ರಹ ಚಂದ್ರನನ್ನು ಅದರ ನೆರಳಿನಿಂದ ಆವರಿಸಿದಾಗ ಆಗುವ ಛಾಯೆಯೇ ಚಂದ್ರಗ್ರಹಣ (Lunar eclipse) ಸಂಭವಿಸುತ್ತದೆ. ಮತ್ತೊಂದು ಅರ್ಥದಲ್ಲಿ ಸರಳವಾಗಿ ಹೇಳುವುದಾದರೆ ಭೂಮಿಯು ಚಂದ್ರನ ಮೇಲೆ ಬೀಳುವ ಸೂರ್ಯನ ಕಿರಣಗಳನ್ನು ತಡೆದು ಹೊರಗಿನ ನೆರಳು ಮಾತ್ರ ಚಂದ್ರನ ಮೇಲೆ ಬೀಳಿಸುತ್ತದೆ ಈ ವಿಧಾನವನ್ನು ಚಂದ್ರಗ್ರಹಣ ಎನ್ನಲಾಗುತ್ತದೆ.

ಭಾರತ ಸೇರಿದಂತೆ ಏಷ್ಯಾದ ಎಲ್ಲಾ ದೇಶಗಳು, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕ, ಹಿಂದೂ ಮಹಾಸಾಗರಗಳಲ್ಲಿ ಕಾಣಿಸುತ್ತೆ ಈ ಚಂದ್ರಗ್ರಹಣ. ಚಂದ್ರಗ್ರಹಣದ ಸಮಯದಲ್ಲಿ ಅನೇಕ ವಿಷಯಗಳನ್ನು ಗಮನದಲ್ಲಿಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುವ ಸಾಂಪ್ರದಾಯವಾಗಿದೆ. ಹಾಗಾಗಿ ಇಂದಿಗೂ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆ ಬಿಟ್ಟು ಅಥವಾ ಮನೆಯಿಂದ ಹೊರಗೆ ಹೋಗಬಾರದು ಎಂದು ಧೃಡವಾಗಿ ನಂಬಲಾಗುತ್ತದೆ. 

ಅದೇ ರೀತಿಯಲ್ಲಿ ಈ ಗ್ರಹಣ ಸಮಯದಲ್ಲಿ ಯಾವುದೇ ಶುಭ ಕೆಲಸವನ್ನು ಪ್ರಾರಂಭಿಸುವುದನ್ನು ನಿಷೇಧಿಸಲಾಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಅಡುಗೆಯನ್ನೂ ಸಹ ತಪ್ಪಿಸುವ ಪದ್ದತಿಯು ರೂಢಿಯಲ್ಲಿದೆ. ಇದಕ್ಕೆ ಮೂಲ ಕಾರಣ ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತವೆ ಆದ್ದರಿಂದ ಈ ಸಮಯದಲ್ಲಿ ಯಾವಾಗಲೂ ದೇವರನ್ನು ಧ್ಯಾನಿಸುವುದು ಒಳಿತು ಎಂಬ ರೀತಿಯ ಅನೇಕ ಮಾತುಗಳನ್ನು ಕೇಳುವುದರೊಂದಿಗೆ ಪಾಲಿಸುವುದು ಅನಿವಾರ್ಯವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo