PAN-Aadhaar Link: ಇದೇ ಜೂನ್ 30 ಒಳಗೆ ಲಿಂಕ್ ಮಾಡ್ಕೊಳ್ಳಿ! ಇಲ್ಲದಿದ್ದರೆ ಈ ಸಮಸ್ಯೆಗಳು ಉಂಟಾಗಲಿವೆ!

PAN-Aadhaar Link: ಇದೇ ಜೂನ್ 30 ಒಳಗೆ ಲಿಂಕ್ ಮಾಡ್ಕೊಳ್ಳಿ! ಇಲ್ಲದಿದ್ದರೆ ಈ ಸಮಸ್ಯೆಗಳು ಉಂಟಾಗಲಿವೆ!
HIGHLIGHTS

ದೇಶದಲ್ಲಿ ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಬೇಕು.

Aadhaar ಮತ್ತು PAN ಲಿಂಕ್ ಮಾಡಲು ಸಾಧ್ಯವಾಗದಿದ್ದರೆ ನಿಮಗೆ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತವೆ ಎನ್ನುವುದರ ಫುಲ್ ಡಿಟೈಲ್ಸ್ ಇಲ್ಲಿದೆ.

ಒಂದು ವೇಳೆ ಜೂನ್ 30 ಒಳಗೆ ನಿಮ್ಮ Aadhaar ಕಾರ್ಡ್ ಅನ್ನು PAN ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ ಜೂಲೈ 1 ರಿಂದ PAN ಕಾರ್ಡ್ ಕೆಲಸ ಮಾಡುವುದಿಲ್ಲ

PAN-Aadhaar Link: ದೇಶದಲ್ಲಿ ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಬೇಕು. ಈಗ ಇದರ ಅವಧಿ ಈಗಾಗಲೇ ಮುಗಿದಿದೆ. ಇದರ ಕಾರಣ ಕೇಂದ್ರ ಸರ್ಕಾರ ಮತ್ತೆ ಇದರ ಮಾನ್ಯತೆಯನ್ನು ಜೂನ್ 30 ವರೆಗೆ ವಿಸ್ತರಿಸಿದೆ. ಆದ್ದರಿಂದ 1000 ರೂ ದಂಡ ಪಾವತಿಸಿ ಪ್ಯಾನ್ ಕಾರ್ಡ್ ಅನ್ನು ಅಮಾನ್ಯತೆಯಿಂದ ತಪ್ಪಿಸುವ ಅವಕಾಶವನ್ನು ಕಲ್ಪಿಸಿದೆ. ನೀವು ಒಂದು ವೇಳೆ ಜೂನ್ 30 ಒಳಗೆ ನಿಮ್ಮ Aadhaar ಕಾರ್ಡ್ ಅನ್ನು PAN ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ ಜೂಲೈ 1 ರಿಂದ PAN ಕಾರ್ಡ್ ಕೆಲಸ ಮಾಡುವುದಿಲ್ಲ ಎಂದು ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಅಂದರೆ ನೀವು PAN ಕಾರ್ಡ್ ಹೊಂದಿದ್ದರೂ ಅದನ್ನು ನಿಮಗೆ ಬಳಸಲು ಸಾಧ್ಯವಾಗುವುದಿಲ್ಲ ಎಂಬುದು ಇದರ ಅರ್ಥ. ಈಗ ಕೊಟ್ಟಿರುವ ಸಮಯದವರೆಗೂ ನೀವು Aadhaar ಮತ್ತು PAN ಲಿಂಕ್ ಮಾಡಲು ಸಾಧ್ಯವಾಗದಿದ್ದರೆ ನಿಮಗೆ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತವೆ ಎನ್ನುವುದರ ಫುಲ್ ಡಿಟೈಲ್ಸ್ ಇಲ್ಲಿದೆ.

Aadhaar ಮತ್ತು PAN ಲಿಂಕ್ ಮಾಡದಿದ್ದರೆ ಈ ಸಮಸ್ಯೆಗಳು ಉಂಟಾಗಲಿವೆ​!

➤Aadhaar ಲಿಂಕ್ ಆಗುವ ತನಕ ನಿಮ್ಮ PAN ಕೆಲಸ ಮಾಡುವುದಿಲ್ಲ.

➤PAN ಇಲ್ಲದೆ ನೀವು ಒಂದೇ ಬಾರಿಗೆ 5000 ರೂ ಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್ನಿಂದ ಹಿಂಪಡೆಯಲು ಸಾಧ್ಯವಾಗುವುದಿಲ್ಲ.

➤ನೀವು ಹೊಸ ಡೆಬಿಟ್/ ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವಾಗುವುದಿಲ್ಲ.

➤PAN ಇಲ್ಲದೇ ಇದ್ದರೆ ಡಿಡಿಎಸ್ ಅಥವಾ ಟಿಸಿಎಸ್ ಕಡಿತಗೊಳಿಸದಿದ್ದಲ್ಲಿ ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

➤ಷೇರು ಮಾರುಕಟ್ಟೆಯಲ್ಲಿ ವಹಿವಾಟು ಸಾಧ್ಯವಾಗುವುದಿಲ್ಲ ಮತ್ತು ಮ್ಯೂಚುವಲ್ ಪಂಡ್ ಹೂಡಿಕೆ ಬ್ಲಾಕ್ ಆಗುತ್ತದೆ.

ಮೊದಲು Aadhaar ಮತ್ತು PAN ಲಿಂಕ್ ಸ್ಟೇಟಸ್ ಪರಿಶೀಲಿಸಿಕೊಳ್ಳಿ

➥ಮೊದಲಿಗೆ UIDAI ವೆಬ್ಸೈಟ್ https://uidai.gov.in/ ಗೆ ಭೇಟಿ ನೀಡಿ.

➥ನಿಮ್ಮ Aadhaar ಸೇವೆಗಳ ಮೆನುವಿನಿಂದ Aadhaar ಲಿಂಕ್ ಮಾಡುವ ಸ್ಟೇಟಸ್ ಅನ್ನು ಆಯ್ಕೆಮಾಡಿ.

➥ನಂತರ ನಿಮ್ಮ 12 ಅಂಕಿಗಳ Aadhaar ಸಂಖ್ಯೆಯನ್ನು ನಮೂದಿಸಿ ಮತ್ತು ಗೆಟ್ ಸ್ಟೇಟಸ್ ಬಟನ್ ಮೇಲೆ ಕ್ಲಿಕ್ ಮಾಡಿ.

➥ಇಲ್ಲಿ ನೀವು ನಿಮ್ಮ PAN ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು.

➥ನಿಮ್ಮ Aadhaar ಮತ್ತು PAN ಲಿಂಕ್ ಮಾಡುವ ಸ್ಟೇಟಸ್ ಅನ್ನು ಪರಿಶೀಲಿಸಲು ಗೆಟ್ ಲಿಂಕ್ ಮಾಡುವ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

➥ನಂತರ ನಿಮ್ಮ Aadhaar ಮತ್ತು PANನೊಂದಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಸ್ಕ್ರಿನ್ ಮೇಲೆ ನೋಡಬಹುದು.

Aadhaar ಮತ್ತು PAN ಲಿಂಕ್ ಮಾಡುವುದು ಹೇಗೆ?

➤ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in/ ಹೋಗಿ

➤ಈಗಾಗಲೇ ನೋಂದಾಯಿಸದಿದ್ದರೆ ನೋಂದಾಯಿಸಿ. ನಿಮ್ಮ PAN ಸಂಖ್ಯೆ (PAN) ನಿಮ್ಮ ಬಳಕೆದಾರ ID ಆಗಿರುತ್ತದೆ.

➤ಈಗ ನಿಮ್ಮ ಬಳಕೆದಾರ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಬೇಕು.

➤ನಂತರ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ Aadhaarನೊಂದಿಗೆ PAN ಲಿಂಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. 

➤ಇದು ಬರದಿದ್ದರೆ 'ಪ್ರೊಫೈಲ್ ಸೆಟ್ಟಿಂಗ್ಸ್' ಗೆ ಹೋಗಿ 'ಲಿಂಕ್ Aadhaar' ಮೇಲೆ ಕ್ಲಿಕ್ ಮಾಡಿ. ಈಗ PAN ನಲ್ಲಿ ಹುಟ್ಟಿದ ದಿನಾಂಕ ಮತ್ತು ಲಿಂಗದ ವಿವರಗಳು ಇಲ್ಲಿ ಕಾಣಿಸುತ್ತವೆ.

➤ಈ ವಿವರಗಳನ್ನು ನಿಮ್ಮ Aadhaar ವಿವರಗಳೊಂದಿಗೆ ಹೊಂದಿಸಿ. ಈ ವಿವರವು ಎರಡೂ ದಾಖಲೆಗಳಲ್ಲಿ ಹೊಂದಿಕೆಯಾಗದಿದ್ದರೆ ನೀವು ತಪ್ಪಾಗಿರುವುದನ್ನು ಸರಿಪಡಿಸಬೇಕಾಗುತ್ತದೆ.

➤ವಿವರಗಳು ಹೊಂದಾಣಿಕೆಯಾಗಿದ್ದರೆ ನಿಮ್ಮ Aadhaar ಸಂಖ್ಯೆಯನ್ನು ನಮೂದಿಸಿ ಮತ್ತು "ಈಗ ಲಿಂಕ್" ಬಟನ್ ಮೇಲೆ ಕ್ಲಿಕ್ ಮಾಡಿ.

➤ನಿಮ್ಮ PAN ಅನ್ನು Aadhaar ಕಾರ್ಡ್ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿಸುವ ಪಾಪ್-ಅಪ್ ಸಂದೇಶವು ಕಾಣಿಸಿಕೊಳ್ಳುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo