PUBG ಬ್ಯಾನ್: ಬ್ಯಾಟಲ್ ರಾಯಲ್ PUBG ಮೊಬೈಲ್ ಗೇಮ್ ಭಾರತದ ಈ ರಾಜ್ಯದಲ್ಲಿ ಆಗಲಿದೆ ಬ್ಯಾನ್

HIGHLIGHTS

ಮಕ್ಕಳ ಮತ್ತು ಯುವಕರಲ್ಲಿ ಹಿಂಸಾತ್ಮಕ ನಡವಳಿಕೆಯ ಹೆಚ್ಚಳದ ಕಾರಣದಿಂದ ನಿಷೇಧವನ್ನು ಹೇರುವ ಮುಖ್ಯ ಕಾರಣ

PUBG ಬ್ಯಾನ್: ಬ್ಯಾಟಲ್ ರಾಯಲ್ PUBG ಮೊಬೈಲ್ ಗೇಮ್ ಭಾರತದ ಈ ರಾಜ್ಯದಲ್ಲಿ ಆಗಲಿದೆ ಬ್ಯಾನ್

ಆನ್ಲೈನ್ ಬ್ಯಾಟಲ್ ರಾಯೇಲ್ ಆಟವಾಗಿರುವ ಅತಿ ಹೆಚ್ಚು ಜನಪ್ರಿಯ PubG ಈಗ ಹೆಚ್ಚು ವ್ಯಸನಕಾರಿ ಅಥವಾ ಹಾನಿಕಾರಕ ಅಥವಾ ಒಂದು ರೀತಿಯ ನಕಾರಾತ್ಮಕವೆಂದು ಕರೆಯಲ್ಪಡುವ ಗೇಮ್ ಆಗಿದೆ. ಈ ಆಟವನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಗಳು ಕ್ರಮಗಳನ್ನು ಕೈಗೊಂಡಿದ್ದ ಹಲವಾರು ಘಟನೆಗಳು ನಡೆದಿವೆ. ಜಮ್ಮುವಿನ ಫಿಟ್ನೆಸ್ ತರಬೇತುದಾರನ ಕಥೆಯಂತೆ ದೇಶದ ಎಲ್ಲೆಡೆ ಇತರ ಘಟನೆಗಳು ನಡೆದಿವೆ. ಇವೇಲ್ಲವನ್ನು ಗಮನದಲ್ಲಿಟ್ಟುಕೊಂಡು ಈಗ ಸೂರತ್ ಜಿಲ್ಲೆಯ ಆಡಳಿತ ಗುರುವಾರ PUBG ಆಟಕ್ಕೆ ನಿಷೇಧವನ್ನು ವಿಧಿಸಿದೆ. 

Digit.in Survey
✅ Thank you for completing the survey!

ಇದು ಮಕ್ಕಳ ಮತ್ತು ಯುವಕರಲ್ಲಿ ಹಿಂಸಾತ್ಮಕ ನಡವಳಿಕೆಯ ಹೆಚ್ಚಳದ ಕಾರಣದಿಂದ ನಿಷೇಧವನ್ನು ಹೇರುವ ಮುಖ್ಯ ಕಾರಣವೆಂದು ತಿಳಿಸಲಾಗಿದೆ. ಅಲ್ಲಿನ ಆಡಳಿತದ ಪ್ರಕಾರ ಈ ಆನ್ಲೈನ್ ಗೇಮ್ಗಳಲ್ಲಿ ವ್ಯಸನದಿಂದಾಗಿ ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಆನ್ಲೈನ್ ಮಾಧ್ಯಮ ವರದಿಗಳ ಪ್ರಕಾರ ಜಿಲ್ಲೆಯ ಹಲವಾರು ಪ್ರಾಥಮಿಕ ಶಿಕ್ಷಣ ಅಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದೆ.

https://english.cdn.zeenews.com/sites/default/files/pubg-surat.jpg 

ಇದು PUBG ಮೊಬೈಲ್ ವ್ಯಸನದಿಂದ ಬರುವ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚುಗೊಳಿಸಿರುವುದರಿಂದ ಈ ವಿಧಿಯನ್ನು ಜಾರಿಗೊಳಿಸಲು ಕ್ರಮಗಳನ್ನು ಒಟ್ಟುಗೂಡಿಸಿವೆ. ಗುಜರಾತ್ ಚೈಲ್ಡ್ ರೈಟ್ಸ್ ಬಾಡಿ ಅಧ್ಯಕ್ಷೆ ಜಾಗೃತಿ ಪಾಂಡ್ಯ ಅವರು ದೇಶದ 'ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ'ಕ್ಕೆ (NCPCR) ರಾಜ್ಯದಲ್ಲಿ PUBG ಮೊಬೈಲ್ ಅನ್ನು ನಿಷೇಧಿಸುವ ಸಲುವಾಗಿ ಶಿಫಾರಸು ಮಾಡಿದ್ದಾರೆ. 

ಅಧಿಕಾರಿಗಳ ಪ್ರಕಾರ ಆಟವು ಹಲವಾರು ಯುವಜನರನ್ನು ಪ್ರಭಾವಿಸಿದೆ. NCPCR ಎಲ್ಲಾ ರಾಜ್ಯಗಳಿಗೆ ಪತ್ರವೊಂದನ್ನು ಕಳುಹಿಸಿದೆ ಮತ್ತು ಆಟವನ್ನು ನಿಷೇಧಿಸಬೇಕೆಂದು ಶಿಫಾರಸು ಮಾಡಿದೆ. ದೇಶದ ಎಲ್ಲಾ ರಾಜ್ಯಗಳು ಇದನ್ನು ಜಾರಿಗೊಳಿಸಬೇಕಾಗಿ ಕೋರಿದ್ದು ಈ ಆಟದ ಋಣಾತ್ಮಕ ಪರಿಣಾಮಗಳನ್ನು ನೋಡುವಾಗ ಇಂದಿನ ತಲೆಮಾರು ಒಂಟಿಯಾಗಿ ಸ್ನೇಹ ಭಾಂದವ್ಯಗಳಿಂದ ದೂರವಾಗುತ್ತಿದ್ದಾರೆ ಎಂದು ಜಾಗೃತಿ ಪಾಂಡ್ಯದವರು ಹೇಳಿದ್ದಾರೆ. ಈ ಆಟದ ಮೇಲೆ ನಿಷೇಧವನ್ನು ಶಿಫಾರಸು ಮಾಡಲು ರಾಜ್ಯ ಸರ್ಕಾರಕ್ಕೆ ಈಗಾಗಲೇ ಪತ್ರ ಕಳುಹಿಸಲಾಗಿದೆ.

 

Digit Kannada
Digit.in
Logo
Digit.in
Logo