Kannada Horror Movies: ಬಿಡುಗಡೆಯಾಗಿ ವರ್ಷಗಳಾದರೂ ಇನ್ನೂ ಭಯಪಡಿಸುವ ಟಾಪ್ 5 ಕನ್ನಡ ಹಾರರ್ ಸಿನಿಮಾಗಳು!

Kannada Horror Movies: ಬಿಡುಗಡೆಯಾಗಿ ವರ್ಷಗಳಾದರೂ ಇನ್ನೂ ಭಯಪಡಿಸುವ ಟಾಪ್ 5 ಕನ್ನಡ ಹಾರರ್ ಸಿನಿಮಾಗಳು!
HIGHLIGHTS

Kannada Horror Movies ಪಟ್ಟಿಯಲ್ಲಿ ಪ್ರಸ್ತುತ ಕನ್ನಡದಲ್ಲಿ ನೂರಾರು ಹಾರರ್ ಸಿನಿಮಾಗಳಿವೆ.

ಹೆಚ್ಚು ಮೈ ಜುಮ್ ಎನಿಸುವ ಕಲ್ಪನಾ, 6-5=2 ಮತ್ತು ನಮೋ ಭೂತಾತ್ಮಾದಂತಹ ಹಾರರ್ ಸಿನಿಮಾಗಳಾಗಿವೆ.

ಈ ಕನ್ನಡ ಹಾರರ್ ಸಿನಿಮಾಗಳು ಇಂದಿಗೂ ಒಬ್ಬರೇ ಕುಳಿತು ನೋಡೋಕೆ ಭಯಪಡಿಸುವ ಕ್ರೆಜ್ ಹೊಂದಿವೆ.

Kannada Horror Movies: ಕನ್ನಡದಲ್ಲಿ ಹಾರರ್ ಸಿನಿಮಾಗಳ ವಿಭಾಗದಲ್ಲಿ ಬಿಡುಗಡೆಯಾಗುವುದು ತುಂಬ ಕಡಿಮೆಯಾದರೂ ಒಮ್ಮೆ ರಿಲೀಸ್ ಆದ ನಂತರ ಹಲವಾರು ವರ್ಷಗಳಿಗೆ ಎವರ್ ಗ್ರೀನ್ ಆಗಿ ಪ್ರದರ್ಶನಗೊಳ್ಳುವ ಕನ್ನಡದ ಹಾರರ್ ಸಿನಿಮಾಗಳ (Kannada Horror Movies) ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ. ಯಾಕೆಂದರೆ ಪ್ರಸ್ತುತ ಕನ್ನಡದಲ್ಲಿ ನೂರಾರು ಹಾರರ್ ಸಿನಿಮಾಗಳಿವೆ.

ಆದರೆ ಹೆಚ್ಚು ಮೈ ಜುಮ್ ಎನಿಸುವ ಅನಿಸಿಕೆಗಳಿಗೆ ಬಂದ್ರೆ ಕಲ್ಪನಾ, 6-5=2, ಯು ಟರ್ನ್, ಮಮ್ಮಿ ಮತ್ತು ನಮೋ ಭೂತಾತ್ಮಾದಂತಹ ಹಾರರ್ ಸಿನಿಮಾಗಳು ಇಂದಿಗೂ ಒಬ್ಬರೇ ಕುಳಿತು ನೋಡೋಕೆ ಭಯಪಡಿಸುವ ಕ್ರೆಜ್ ಹೊಂದಿವೆ. ಹಾಗಾದ್ರೆ ಈಗ YouTube ಅಥವಾ MX Player ಮೂಲಕ ಉಚಿತವಾಗಿ ವೀಕ್ಷಿಸಲು ಲಭ್ಯವಿರುವ ಟಾಪ್ 5 ಕನ್ನಡ ಹಾರರ್ ಸಿನಿಮಾಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

6-5=2 Kannada Horror Movies

ಈ ಪಟ್ಟಿಯಲ್ಲಿ ಚಿತ್ರ ಕೆ ಎಸ್ ಅಶೋಕ ನಿರ್ದೇಶನದ ಈ 6-5=2 ಆಗಿದೆ. ಈ ಚಲನಚಿತ್ರವು 1999 ಅಮೇರಿಕನ್ ಸ್ವತಂತ್ರ ಚಲನಚಿತ್ರ ದಿ ಬ್ಲೇರ್ ವಿಚ್ ಪ್ರಾಜೆಕ್ಟ್‌ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತದೆ. ಆದರೆ 28ನೇ ಅಕ್ಟೋಬರ್ 2010 ರಂದು ಮಂಡ್ಯ ಮತ್ತು ಬೆಂಗಳೂರು ಮೂಲದ 6 ಜನ ಸ್ನೇಹಿತರು ಪಶ್ಚಿಮ ಘಟ್ಟಗಳಲ್ಲಿನ ಅಜ್ಞಾತ ಪರ್ವತಕ್ಕೆ ಟ್ರಾಕಿಂಗ್ ಮಾಡಲು ಹೋಗುತ್ತಾರೆ.

ಆದರೆ ಮರಳಿ ಬರುವಾಗ ಅವರಲ್ಲಿ ನಾಲ್ವರು ಸತ್ತು ಒಬ್ಬ ಕಣ್ಮರೆಯಾಗಿ ಒಬ್ಬ ಜೀವಂತವಾಗಿ ಮನೆ ಸೇರುತ್ತಾನೆ ಇದರಿಂದ ಈ ಸಿನಿಮಾದ ಹೆಸರು 6-5=2 ಆಗಿದೆ. ನಂತರ 9 ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಸಿಬ್ಬಂದಿಗೆ ರಮೇಶ್ ಎಂಬುವವರ ಕ್ಯಾಮರಾ ಪತ್ತೆಯಾಗುತ್ತದೆ. ಅದರಲ್ಲಿನ ವಿಡಿಯೋಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾವನ್ನು ಪ್ರಸ್ತುತಪಡಿಸಲಾಗಿದೆ.

ಕಲ್ಪನಾ (Kalpana Kannada Movie)

ಎರಡನೇ ಚಿತ್ರ ಕಲ್ಪನಾ ಕನ್ನಡ ಭಾಷೆಯ ಹಾಸ್ಯ ಮತ್ತು ಭಯಾನಕ ಚಲನಚಿತ್ರವಾಗಿದ್ದು ಸೂಪರ್ ಸ್ಟಾರ್ ಉಪೇಂದ್ರ, ಸಾಯಿಕುಮಾರ್ ಮತ್ತು ಲಕ್ಷ್ಮಿ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರ ನಿರ್ಮಾಪಕ ರಾಮ ನಾರಾಯಣನ್ ಅವರು ತಮ್ಮ ಶ್ರೀ ತೇನಾಂಡಾಳ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದ್ದಾರೆ. ಈ ಚಿತ್ರವು 2011 ತಮಿಳಿನ ಕಾಂಚನಾ ಚಿತ್ರದ ರೀಮೇಕ್ ಆಗಿದೆ. ತಮಿಳು ಆವೃತ್ತಿಯಲ್ಲಿ ಮೂಲತಃ ಶರತ್ ಕುಮಾರ್ ನಿರ್ವಹಿಸಿದ ಮಂಗಳಮುಖಿ ಅಥವಾ ತೃತೀಯ ಲಿಂಗದ ಪಾತ್ರವನ್ನು ಕಲ್ಪನಾಳಾಗಿ ಸಾಯಿಕುಮಾರ್ ಪುನರಾವರ್ತಿಸಿದ್ದಾರೆ.

Also Read: Max OTT Release: ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾವನ್ನು ಮನೆಯಲ್ಲೇ ಕುಳಿತು ವೀಕ್ಷಿಸಲು ಡೇಟ್ ಕಂಫಾರ್ಮ್!

ನಮೋ ಭೂತಾತ್ಮ (Namo Bhootatma)

ಈ ಸಿನಿಮಾ ಕನ್ನಡದ ಹಾರರ್ ಹಾಸ್ಯ ಚಲನಚಿತ್ರಗಳಲ್ಲಿ ಒಂದಾಗಿದ್ದು ಇದು ತಮಿಳು ಚಲನಚಿತ್ರ Yaamirukka Bayamey ಸಿನಿಮಾದ ರೀಮೇಕ್ ಆಗಿದೆ. ಇದರಲ್ಲಿ ಕೋಮಲ್ ಕುಮಾರ್, ಐಶ್ವರ್ಯಾ ಮೆನನ್, ಅನಸ್ವರ ಕುಮಾರ್, ಗಾಯತ್ರಿ ಅಯ್ಯರ್ ಮತ್ತು ಹರೀಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗ ಇದರ ಎರಡನೇ ಭಾಗ ಸಹ ಬಂದಿದ್ದು ನೀವು ಉಚಿತವಾಗಿ ವೀಕ್ಷಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo