Hit 3 OTT Release: ನಾನಿ ಅಭಿನಯದ ಜಬರ್ದಸ್ತ್ ಆಕ್ಷನ್ ಸಿನಿಮಾ ಓಟಿಟಿ ಡೇಟ್ ಕಂಫಾರ್ಮ್ ಆಯ್ತು! ಕನ್ನಡದಲ್ಲೂ ವೀಕ್ಷಿಸಬಹುದು!
ನಾನಿ ಅಭಿನಯದ ಬ್ಲಾಕ್ ಬಾಸ್ಟರ್ 'Hit 3' ಸಿನಿಮಾ ಈಗ OTT ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ ಬರಲಿದೆ.
ಈ 'Hit 3' ಬ್ಲಾಕ್ ಬಾಸ್ಟರ್ ಸಿನಿಮಾ ಇದೆ 29ನೇ ಮೇ 2025 ರಿಂದ ಕನ್ನಡದಲ್ಲೇ ಸ್ಟ್ರೀಮ್ ಮಾಡಬಹುದು.
Hit 3 ಸೂಪರ್ ಹಿಟ್ ಸಿನಿಮಾವನ್ನು ಆಸಕ್ತ ವೀಕ್ಷಕರು Netflix ಓಟಿಟಿ ಮೂಲಕ ಕನ್ನಡದಲ್ಲೇ ವೀಕ್ಷಿಸಬಹುದು.
Hit 3 OTT Release Date: ತೆಲುಗು ಸ್ಟಾರ್ ನಟ ನಾನಿ (Nani – Naveen Babu Ghanta) ಅವರ ಸೂಪರ್ ಹಿಟ್ ಚಿತ್ರ HIT 3: ದಿ ಥರ್ಡ್ ಕೇಸ್ ಈಗ OTT ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ನೆಟ್‌ಫ್ಲಿಕ್ಸ್ ಇಂಡಿಯಾ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಇದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಮೂಲಕ ನಾನಿ ಅಭಿನಿಯಯದ ಈ ಬ್ಲಾಕ್ ಬಾಸ್ಟರ್ ಸಿನಿಮಾ HIT 3 ದಿ ಥರ್ಡ್ ಕೇಸ್ ಇದೆ ತಿಂಗಳ ಕೊನೆಯಲ್ಲಿ ಅಂದ್ರೆ 29ನೇ ಮೇ 2025 ರಿಂದ ಪ್ರತ್ಯೇಕವಾಗಿ ನೆಟ್‌ಫ್ಲಿಕ್ಸ್ (Netflix) ಮೂಲಕ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ.
SurveyHe’s Arjun for the loved ones and Sarkaar for the criminals 😎
— Netflix India (@NetflixIndia) May 24, 2025
Watch HIT: The Third Case, out 29 May, on Netflix in Telugu, Hindi, Tamil, Malayalam and Kannada.#HitTheThirdCaseOnNetflix pic.twitter.com/OP3VM8ohDP
ಈ ಸಿನಿಮಾವನ್ನು ಆಸಕ್ತ ಪ್ರೇಕ್ಷಕರು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ವೀಕ್ಷಿಸಬಹುದು. ಈ ಘೋಷಣೆಗೆ ಪ್ರತಿಕ್ರಿಯಿಸುತ್ತಾ, ಅಭಿಮಾನಿಯೊಬ್ಬರು, “ಕೊನೆಗೂ! ನಾನು ಇದಕ್ಕಾಗಿ ಕಾಯುತ್ತಿದ್ದೆ! ಎಂದು ಕಾಮೆಂಟ್ ಮಾಡಿದ್ದಾರೆ. ಎರಡನೇ ಅಭಿಮಾನಿ, “ನೆಟ್‌ಫ್ಲಿಕ್ಸ್‌ನಲ್ಲಿ ನಾನಿ! ಎಂತಹ ಅದ್ಭುತ ಚಿತ್ರ” ಎಂದು ಹೇಳಿದರು. “ಕಾಯುವಿಕೆ ಮುಗಿದಿದೆ!” ಎಂದು ಕಾಮೆಂಟ್ ಮಾಡಲಾಗಿದೆ.
ಇದನ್ನೂ ಓದಿ: Jio Plan: ಒಂದೇ ಪ್ರಿಪೇಯ್ಡ್ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, 5G ಡೇಟಾ ಮತ್ತು ಪ್ರೈಮ್ ವಿಡಿಯೋ ಪೂರ್ತಿ 84 ದಿನಗಳಿಗೆ ಲಭ್ಯ!
HIT 3: ದಿ ಥರ್ಡ್ ಕೇಸ್ ಕಲೆಕ್ಷನ್ ಹೇಗಾಗಿದೆ?
ಈ HIT 3 ಸಿನಿಮಾ ವಿಶ್ವಾದ್ಯಂತ ₹100 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದು ಫ್ರ್ಯಾಂಚೈಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಚಿತ್ರ ಇದಾಗಿದೆ. ಕೊಲೆ ರಹಸ್ಯವನ್ನು ಭೇದಿಸುವ ಪೊಲೀಸ್ ಅಧಿಕಾರಿಯನ್ನು ಅನುಸರಿಸುವ HIT ಫ್ರಾಂಚೈಸ್‌ನ ಮೂರನೇ ಚಿತ್ರ ಇದಾಗಿದೆ. ಚಿತ್ರದಲ್ಲಿ ನಾನಿ ಎಸ್‌ಪಿ ಅರ್ಜುನ್ ಸರ್ಕಾರ್ ಪಾತ್ರವನ್ನು ನಿರ್ವಹಿಸಿದರೆ ಶ್ರೀನಿಧಿ ಶೆಟ್ಟಿ ಅವರ ಪ್ರೇಮಿ ಮೃದುಲ ಪಾತ್ರವನ್ನು ನಿರ್ವಹಿಸುತ್ತಾರೆ.
ಪ್ರತೀಕ್ ಸ್ಮಿತಾ ಪಾಟೀಲ್ ಪ್ರತಿಸ್ಪರ್ಧಿ ಆಲ್ಫಾ ಪಾತ್ರವನ್ನು ನಿರ್ವಹಿಸುತ್ತಾರೆ. ಚಿತ್ರದಲ್ಲಿ ಅರ್ಜುನ್ (Nani) ದೇಶಾದ್ಯಂತ ಇದೇ ರೀತಿಯ ವಿಧಾನದೊಂದಿಗೆ ನಡೆದ ಕೊಲೆಗಳನ್ನು ಪರಿಹರಿಸುತ್ತಾರೆ. ಮುಂದಿನ ಚಿತ್ರ HIT 4 ಕಾರ್ತಿ ಎಸಿಪಿ ವೀರಪ್ಪನ್ ಪಾತ್ರದಲ್ಲಿ ನಟಿಸಲಿರುವ ಬಗ್ಗೆ ಕೊನೆಯಲ್ಲಿ ಸಿನಿಮಾವನ್ನು ತೆರೆದಿಡಲಾಗಿದೆ. ಆದರೆ ಈ HIT 4 ಸಿನಿಮಾದಲ್ಲಿ ನಾನಿ ಮತ್ತು ಇದೆ ಚಿತ್ರ ತಂಡದವರು ತಯಾರಿಸುತ್ತಾರೋ ಇಲ್ವೋ ಅನ್ನೋದು ಕಾದು ನೋಡಬೇಕಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile