Samsung Sound Tower 2026 Lineup ಭಾರತಕ್ಕೆ ಎಂಟ್ರಿ; ಪಾರ್ಟಿ ಮೋಡ್‌ಗೆ ಇದು ಪರ್ಫೆಕ್ಟ್ ಸ್ಪೀಕರ್
Sound Tower 2026 ಶ್ರೇಣಿಯು Samsung ಆನ್‌ಲೈನ್ ಸ್ಟೋರ್ ಮತ್ತು ಪ್ರಮುಖ ಇ-ಕಾಮರ್ಸ್ ಮೂಲಕ ಮಾರಾಟ ಆರಂಭಿಸಲಿದೆ
Sound Tower 2026 ಶ್ರೇಣಿಯ ಸ್ಪೀಕರ್‌ಗಳು ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಲಭ್ಯ
ದಕ್ಷಿಣ ಕೊರಿಯಾದ ಟೆಕ್ ದೈತ್ಯ Samsung ಕಂಪನಿಯು ಇದೀಗ ದೇಶಿಯ ಮಾರುಕಟ್ಟೆಗೆ ಎರಡು ಹೊಸ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ಸಂಸ್ಥೆಯು ಹೊಸದಾಗಿ ST50F ಮತ್ತು ST40F ಹೆಸರಿನ ಸ್ಪೀಕರ್‌ಗಳನ್ನು ಪರಿಚಯಿಸುವ ಮೂಲಕ ತನ್ನ Sound Tower 2026 ಲೈನ್‌ಅಪ್ ವಿಸ್ತರಿಸಿದೆ. ನೂತನ ಸೌಂಡ್ ಟವರ್ 2026 ಶ್ರೇಣಿಯು ಪಾರ್ಟಿ ಲೈಟ್ಸ್+ ಸೌಲಭ್ಯದ ಜೊತೆಗೆ 18 ಗಂಟೆಗಳ ಪ್ಲೇಬ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಹಾಗಾದರೇ Samsung ಕಂಪನಿಯ ಹೊಸ Sound Tower 2026 ಶ್ರೇಣಿಯ ಸ್ಪೀಕರ್‌ಗಳ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.
SurveyAlso Read : Mark OTT Release: ಒಂದೇ ದಿನ OTTಯಲ್ಲಿ ರಿಲೀಸ್ ಆಗಲಿವೆ Mark ಮತ್ತು 45 ಸಿನಿಮಾ
Samsung ಕಂಪನಿಯ ಹೊಸ ಸ್ಪೀಕರ್‌ಗಳ ಬೆಲೆ ಮತ್ತು ಲಭ್ಯತೆ ಮಾಹಿತಿ
Samsung ಬಿಡುಗಡೆ ಮಾಡಿರುವ ಸೌಂಡ್ ಟವರ್ 2026 ಶ್ರೇಣಿಯ ಸ್ಪೀಕರ್‌ಗಳ ಬೆಲೆ 25,500 ರೂಗಳಿಂದ ಪ್ರಾರಂಭವಾಗುತ್ತದೆ. ಇನ್ನು ಈ ಡಿವೈಸ್‌ಗಳು ಶೀಘ್ರದಲ್ಲೇ Samsung ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಆರಂಭಿಸಲಿದೆ. ಹಾಗೆಯೇ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕವೂ ಸಹ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಸ್ಪೀಕರ್‌ಗಳು ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಲಭ್ಯ.

Samsung ಸೌಂಡ್ ಟವರ್ ಸ್ಪೀಕರ್‌ಗಳ ಫೀಚರ್ಸ್
ಸ್ಯಾಮ್‌ಸಂಗ್ ಕಂಪನಿಯ ಸೌಂಡ್ ಟವರ್ 2026 ಲೈನ್‌ಅಪ್‌ನಲ್ಲಿ ಲಗ್ಗೆ ಇಟ್ಟಿರುವ ST50F ಮತ್ತು ST40F ಸ್ಪೀಕರ್‌ಗಳು ಅಪ್‌ಗ್ರೇಡ್ ಮಾಡಿದ ಅಕೌಸ್ಟಿಕ್ ಆರ್ಕಿಟೆಕ್ಚರ್ ಅನ್ನು ಹೊಂದಿದೆ. ಈ ನೂತನ ಸ್ಪೀಕರ್‌ಗಳು 240W ವರೆಗಿನ ಗರಿಷ್ಠ ಔಟ್‌ಪುಟ್ ಅನ್ನು ಒದಗಿಸುತ್ತವೆ. ಹಾಗೆಯೇ ಸೌಂಡ್ ಟವರ್ ST50F ಮತ್ತು ST40F ಮಾಡೆಲ್‌ಗಳು ಮಲ್ಟಿಪಲ್ ಸೌಂಡ್ ಮೋಡ್ ಆಯ್ಕೆಗಳನ್ನು ಹೊಂದಿರಲಿದ್ದು ಬಳಕೆದಾರರು ಕೇಳುತ್ತಿರುವ ಟ್ರ್ಯಾಕ್‌ಗೆ ಅನುಗುಣವಾಗಿ ಸೆಟ್ ಆಗುತ್ತವೆ.ಅಲ್ಲದೇ ಈ ಸ್ಪೀಕರ್ಸ್‌ಗಳು ಔರಾಕಾಸ್ಟ್ ಗ್ರೂಪ್ ಪ್ಲೇ ಮತ್ತು ಸ್ಟಿರಿಯೊ ಪ್ಲೇ ಅನ್ನು ಸಹ ಸಪೋರ್ಟ್ ಮಾಡುತ್ತವೆ. ಈ ಆಯ್ಕೆಯು ಬಳಕೆದಾರರಿಗೆ ಎರಡು ವಾಯ್ಸ್ ಟವರ್‌ಗಳನ್ನು ಪರಸ್ಪರ ಜೋಡಿಸಲು ನೆರವಾಗುತ್ತದೆ.
ST50F ಮತ್ತು ST40F ಈ ಎರಡೂ ಮಾಡೆಲ್‌ಗಳು ಧೂಳು ಮತ್ತು ಸ್ಪ್ಲಾಶ್ ನಿರೋಧಕತೆಗಾಗಿ IPX4 ರೇಟಿಂಗ್ ಸೌಲಭ್ಯವನ್ನು ಪಡೆದಿವೆ. ಇದರೊಂದಿಗೆ ಸ್ಯಾಮ್‌ಸಂಗ್‌ನ ಸೌಂಡ್ ಟವರ್ 2026 ಲೈನ್‌ಅಪ್ ಪಾರ್ಟಿ ಲೈಟ್ಸ್+ ಹೆಸರಿನ LED RGB ಲೈಟಿಂಗ್ ಸಿಸ್ಟಮ್ ಸೌಲಭ್ಯ ಸಹ ಹೊಂದಿದೆ. ಬಳಕೆದಾರರು ಈ ಸೌಲಭ್ಯವನ್ನು Samsung Sound Tower app ಮೂಲಕ ಕಂಟ್ರೋಲ್ ಮಾಡುವ ಅವಕಾಶ ಇದೆ. ಹಾಗೆಯೇ ಈ ಸ್ಪೀಕರ್ಸ್ ಐದು ಮೂಡ್ ಪ್ರಿಸೆಟ್‌ಗಳು ಮತ್ತು ಆರು ಡೈನಾಮಿಕ್ ಲೈಟಿಂಗ್ ಪ್ಯಾಟರ್ನ್‌ಗಳನ್ನು ಕೂಡಾ ಪಡೆದಿದುಕೊಂಡಿವೆ.