Mark OTT Release: ಒಂದೇ ದಿನ OTTಯಲ್ಲಿ ರಿಲೀಸ್ ಆಗಲಿವೆ Mark ಮತ್ತು 45 ಸಿನಿಮಾ
Mark ಸಿನಿಮಾ Jio Hotstar OTT ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಆಗಲಿದೆ
45 ಸಿನಿಮಾ ZEE5 OTT ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಲಿದೆ
ಕಿಚ್ಚ ಸುದೀಪ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾರ್ಕ್ (Mark Movie) 2025ರ ಕ್ರಿಸ್‌ಮಸ್ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಈ ಸಿನಿಮಾ ಇದೀಗ OTT ಗೆ ಬರಲು ಸಜ್ಜಾಗಿದೆ. ಹೌದು ವಿಜಯ್ ಕಾರ್ತಿಕೇಯಾ ನಿರ್ದೇಶನದ ಮಾರ್ಕ್ ಸಿನಿಮಾ ಇದೇ ಜನವರಿ 23 ರಂದು OTT ಯಲ್ಲಿ ಪ್ರಸಾರಗೊಳ್ಳಲಿದೆ. ಅದೇ ದಿನ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಸಹ OTT ಪ್ಲಾಟ್‌ಫಾರ್ಮ್‌ಗೆ ರಿಲೀಸ್ ಆಗಲಿದೆ. ಈ ಎರಡು ಹಿಟ್ ಸಿನಿಮಾಗಳು ಒಂದೇ ದಿನ OTT ಗೆ ಬರುತ್ತಿರುವುದು ಅಭಿಮಾನಿಗಳ ಹರ್ಷ ಹೆಚ್ಚಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.
SurveyAlso Read : Amazon ಮಾರಾಟದಲ್ಲಿ 15,000 ರೂಗಳೊಳಗೆ ಲಭ್ಯವಿರುವ ಟಾಪ್ 5 ಸೂಪರ್ ಕೂಲ್ 5G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್‌ಗಳು!
Mark ಸಿನಿಮಾ: Jio Hotstar OTT ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ
ಮಾರ್ಕ್ ಸಿನಿಮಾ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯಾ ನಡುವಿನ ಎರಡನೇ ಚಿತ್ರವಾಗಿದೆ. ಈ ಮೊದಲು ಈ ಜೋಡಿ ಮ್ಯಾಕ್ಸ್ ಸಿನಿಮಾದಲ್ಲಿ ಒಂದಾಗಿತ್ತು. ಸ್ಟೈಲಿಶ್ ಆಕ್ಷನ್ ದೃಶ್ಯಗಳು ಮತ್ತು ತೀವ್ರ ಕುತೂಹಲ ಹೂರಣವನ್ನು ಒಳಗೊಂಡ ಈ ಸಿನಿಮಾ ಸಿನಿ ಪ್ರಿಯರನ್ನು ರಂಜಿಸಿದೆ. ಈ ಚಿತ್ರದಲ್ಲಿ ಸುದೀಪ್ ಅಜಯ್ ಮಾರ್ಕಂಡೇಯ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಜನವರಿ 23 ರಂದು Jio Hotstar OTT ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ. ಇನ್ನು ಈ ಸಿನಿಮಾವು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.

45 ಸಿನಿಮಾ: ZEE5 OTT ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ
ಡಾ. ಶಿವರಾಜಕುಮಾರ್ ಹಾಗೂ ರಿಯಲ್‌ಸ್ಟಾರ್ ಉಪೇಂದ್ರ ಅಭಿನಯದ ಅರ್ಜುನ ಜನ್ಯ ಆಕ್ಷನ್ ಕಟ್ ಹೇಳಿರುವ 45 ಸಿನಿಮಾ ಡಿಸೆಂಬರ್ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡಿದೆ. ಇದೀಗ ಜನವರಿ 23 ರಂದು ZEE5 OTT ತಾಣದಲ್ಲಿ ಪ್ರಸಾರವಾಗಲಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದ್ದು ಉತ್ತಮ ಕಲೆಕ್ಷನ್ ಸಹ ಕಂಡಿದೆ. ಇನ್ನು ಈ ಸಿನಿಮಾದ ತಾರಾಗಣದಲ್ಲಿ ನಟ ರಾಜ್ ಬಿ ಶೆಟ್ಟಿ ಸಹ ಅಭಿನಯಿಸಿದ್ದಾರೆ. ಹಾಗೆಯೇ ಈ ಸಿನಿಮಾವು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.