WhatsApp Messages: ಆಕಸ್ಮಿಕವಾಗಿ ಡಿಲೀಟ್ ಆದ ವಾಟ್ಸಾಪ್ ಮೆಸೇಜ್‌ಗಳನ್ನು ಮತ್ತೇ ಪಡೆಯುವುದು ಹೇಗೆ?

WhatsApp Messages: ಆಕಸ್ಮಿಕವಾಗಿ ಡಿಲೀಟ್ ಆದ ವಾಟ್ಸಾಪ್ ಮೆಸೇಜ್‌ಗಳನ್ನು ಮತ್ತೇ ಪಡೆಯುವುದು ಹೇಗೆ?
HIGHLIGHTS

ಹಲವಾರು ಬಾರಿ ತಿಳಿದೋ ತಿಳಿಯಾದೆಯೋ ನಮ್ಮಿಂದ ವಾಟ್ಸಾಪ್ (WhatsApp) ಚಾಟ್‌ಗಳಲ್ಲಿ ಕೆಲವೊಂದು ಮೆಸೇಜ್ ಡಿಲೀಟ್ ಆಗೋದು ಅನಿವಾರ್ಯ.

ವಾಟ್ಸಾಪ್ (WhatsApp) ತಮ್ಮ ಬಳಕೆದಾರರ ಅನುಭವನನ್ನು ಹೆಚ್ಚಿಸಲು ಹತ್ತಾರು ವಿಶೇಷ ಫೀಚರ್ಗಳನ್ನು ನೀಡುತ್ತಿರುವುದು ನೀವು ಕಂಡಿರಬಹುದು.

ನಿಮ್ಮಿಂದ ಆಕಸ್ಮಿಕವಾಗಿ ಡಿಲೀಟ್ ಆದ WhatsApp ಮೆಸೇಜ್‌ಗಳನ್ನು ಮತ್ತೇ ಪಡೆಯುವುದು ಹೇಗೆ ಎನ್ನುವುದನ್ನು ತಿಳಿಯೋಣ.

WhatsApp Messages: ಜನಪ್ರಿಯ ಮತ್ತು ಅತಿ ಹೆಚ್ಚು ಜನರು ಬಳಸುತ್ತಿರುವ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ತಮ್ಮ ಬಳಕೆದಾರರ ಅನುಭವನನ್ನು ಹೆಚ್ಚಿಸಲು ಹತ್ತಾರು ವಿಶೇಷ ಫೀಚರ್ಗಳನ್ನು ನೀಡುತ್ತಿರುವುದು ನೀವು ಕಂಡಿರಬಹುದು. ಆದರೆ ಕೆಲವೊಂದು ಫೀಚರ್ ನಿಜಕ್ಕೂ ಅತಿ ಹೆಚ್ಚು ಸರಳ ಮತ್ತು ಅತಿ ಮುಖ್ಯವಾದ ವಿಶೇಷಣಗಳನ್ನು ಹೊಂದಿದೆ. ವಾಟ್ಸಾಪ್ (WhatsApp) ಚಾಟ್‌ಗಳು ಆಕಸ್ಮಿಕವಾಗಿ ನಮ್ಮಿಂದ ಡಿಲೀಟ್ ಆದರೆ ಆ ಸಮಯಕ್ಕೆ ಮುಖ್ಯವಾಗಿಲ್ಲವಾದರೂ ಕೊಂಚ ಸಮಯ ಕಳೆದ ನಂತರ ಅದರ ಅಗತ್ಯವಿರುತ್ತದೆ. ಆದ್ದರಿಂದ ಆಕಸ್ಮಿಕವಾಗಿ ಡಿಲೀಟ್ ಆದ WhatsApp ಮೆಸೇಜ್‌ಗಳನ್ನು ಮತ್ತೇ ಪಡೆಯುವುದು ಹೇಗೆ ಎನ್ನುವುದನ್ನು ತಿಳಿಯೋಣ.

ಆಕಸ್ಮಿಕವಾಗಿ ಡಿಲೀಟ್ ಆದ WhatsApp ಮೆಸೇಜ್‌ಗಳನ್ನು ಮತ್ತೇ ಪಡೆಯುವುದು ಹೇಗೆ?

ಹಲವಾರು ಬಾರಿ ತಿಳಿದೋ ತಿಳಿಯಾದೆಯೋ ನಮ್ಮಿಂದ ವಾಟ್ಸಾಪ್ (WhatsApp) ಚಾಟ್‌ಗಳಲ್ಲಿ ಕೆಲವೊಂದು ಮೆಸೇಜ್ ಡಿಲೀಟ್ ಆಗೋದು ಅನಿವಾರ್ಯ. ಆದರೆ ಚಿಂತಿಸಬೇಡಿ ನೀವು ಡಿಲೀಟ್ ಮಾಡಿದ ಚಾಟ್‌ಗಳನ್ನು ಮರಳಿ ಪಡೆಯಲು ವಾಟ್ಸಾಪ್ (WhatsApp) ಕೆಲವು ವಿಧಾನಗಳನ್ನು ಒದಗಿಸುತ್ತದೆ. ನೀವು ಮೊದಲು ಬ್ಯಾಕಪ್ ಮಾಡಿದ್ದೀರಾ ಅಥವಾ ಇಲ್ಲವೇ ಮತ್ತು ನೀವು ಯಾವ ರೀತಿಯ ಫೋನ್ ಅನ್ನು ಬಳಸುತ್ತಿರುವಿರಿ ಎಂಬಂತಹ ಕೆಲವು ವಿಷಯಗಳನ್ನು ಅವಲಂಬಿಸಿರುತ್ತದೆ. ನಿಮ್ಮ ವಾಟ್ಸಾಪ್ (WhatsApp) ಚಾಟ್‌ಗಳಿಂದ ಡಿಲೀಟ್ ಮಾಡಿದ ಮೆಸೇಜ್‌ಗಳನ್ನು ಮರುಸ್ಥಾಪಿಸಲು ನೀವು ಬಯಸಿದರೆ ಈ ಹಂತಗಳನ್ನು ಅನುಸರಿಸಬಹುದು.

How to recover deleted messages on WhatsApp
How to recover deleted messages on WhatsApp

ಬ್ಯಾಕಪ್‌ನಿಂದ ಡಿಲೀಟ್ ಮಾಡಿದ ಮೆಸೇಜ್‌ಗಳನ್ನು ಮರುಪಡೆಯುವುದು ಹೇಗೆ?

ನಿಮ್ಮ ಡಿಲೀಟ್ ಮಾಡಿದ WhatsApp ಚಾಟ್‌ಗಳನ್ನು ಮರುಸ್ಥಾಪಿಸಲು ನೀವು ಹಿಂದೆ ಬ್ಯಾಕಪ್ ಅನ್ನು ರಚಿಸಿರುವುದು ಮುಖ್ಯವಾಗಿದೆ. Android ಫೋನ್‌ಗಳಲ್ಲಿ WhatsApp ನಿಮ್ಮ ಚಾಟ್‌ಗಳನ್ನು Google ಡ್ರೈವ್‌ಗೆ ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡುತ್ತದೆ ನೀವು ಅದನ್ನು ಆಫ್ ಮಾಡದಿದ್ದರೆ. iPhone ನಲ್ಲಿ WhatsApp ಯಾವಾಗಲೂ ನಿಮ್ಮ ಚಾಟ್‌ಗಳನ್ನು iCloud ಗೆ ಬ್ಯಾಕ್‌ಅಪ್ ಮಾಡುತ್ತದೆ. ನೀವು ಅದನ್ನು ಸಕ್ರಿಯಗೊಳಿಸಿದ್ದರೆ. ನೀವು ಬ್ಯಾಕಪ್ ಅನ್ನು ರಚಿಸಿದ್ದರೆ ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಡಿಲೀಟ್ ಮಾಡಿದ ಚಾಟ್‌ಗಳನ್ನು ನೀವು ಮರುಸ್ಥಾಪಿಸಬಹುದು.

Also Read: Infinix Note 40 Pro 5G ಬಿಡುಗಡೆಯಾಗುತ್ತಿದಂತೆ 6000 ಸಾವಿರ ರೂಗಳ ರಿಯಾಯಿತಿ ಲಭ್ಯ!

ಆಂಡ್ರಾಯ್ಡ್ ಫೋನ್ಗಳಲ್ಲಿ ಡಿಲೀಟ್ ಮಾಡಿದ ಮೆಸೇಜ್‌ಗಳನ್ನು ಮತ್ತೇ ಪಡೆಯುವುದು ಹೇಗೆ?

ಆಂಡ್ರಾಯ್ಡ್ ಫೋನ್ಗಳಲ್ಲಿ ಡಿಲೀಟ್ ಮಾಡಿದ ಮೆಸೇಜ್‌ಗಳನ್ನು ಮತ್ತೇ ತರಲು ಮೊದಲು ನೀವು ವಾಟ್ಸಾಪ್ (WhatsApp) ಅನ್ನು ನಿಮ್ಮ ಫೋನ್‌ನಿಂದ ತೆಗೆದುಹಾಕಬೇಕು (Uninstall) ಮತ್ತು ನಂತರ ಅದನ್ನು ನೀವು ಪುನಃ ಮರುಸ್ಥಾಪಿಸ (Install) ಮಾಡಬೇಕು. ಇದರ ನಂತರ ನೀವು WhatsApp ಅನ್ನು ಮರುಸ್ಥಾಪಿಸಿದ ನಂತರ ಸ್ವಯಂಚಾಲಿತವಾಗಿ ನಿಮ್ಮ Google ಡ್ರೈವ್‌ನಲ್ಲಿ ಬ್ಯಾಕಪ್ ಅನ್ನು ಕೇಳಿತ್ತದೆ ಈಗ ನೀವು “Restore” ಮೇಲೆ ಒತ್ತಿರಿ ಮತ್ತು ನಿಮ್ಮ ಡಿಲೀಟ್ ಮಾಡಿದ ಚಾಟ್‌ಗಳನ್ನು ಮರುಪಡೆಯಿರಿ (ಬ್ಯಾಕಪ್ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಚಾಟ್‌ಗಳನ್ನು ಮಾತ್ರ ಮರುಸ್ಥಾಪಿಸಲಾಗುತ್ತದೆ ಎಂಬುದನ್ನು ಗಮನಿಸಬೇಕಾದ ವಿಷಯವಾಗಿದೆ).

How to recover deleted messages on WhatsApp
How to recover deleted messages on WhatsApp

ಐಫೋನ್ಗಳಲ್ಲಿ ಡಿಲೀಟ್ ಮಾಡಿದ ಮೆಸೇಜ್‌ಗಳನ್ನು ಮತ್ತೇ ಪಡೆಯುವುದು ಹೇಗೆ?

ಇದರಲ್ಲೂ ಸಹ ಅದೇ ಮಾದರಿಯ ಸೆಟಪ್ ಅನ್ನು ಹೊಂದಿದ್ದು ಐಫೋನ್ಗಳಲ್ಲಿ ಡಿಲೀಟ್ ಮಾಡಿದ ಮೆಸೇಜ್‌ಗಳನ್ನು ಮತ್ತೇ ತರಲು ಮೊದಲು ನೀವು ವಾಟ್ಸಾಪ್ (WhatsApp) ಅನ್ನು ನಿಮ್ಮ ಫೋನ್‌ನಿಂದ ತೆಗೆದುಹಾಕಬೇಕು (Uninstall) ಮತ್ತು ನಂತರ ಅದನ್ನು ನೀವು ಪುನಃ ಮರುಸ್ಥಾಪಿಸ (Install) ಮಾಡಬೇಕು. ಸೆಟಪ್ ಸಮಯದಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸಿಪ್ರಾಂಪ್ಟ್ ಮಾಡಿದಾಗ ನಿಮ್ಮ iCloud ಬ್ಯಾಕ್‌ಅಪ್ ಅನ್ನು ಬಳಸಲು “ಚಾಟ್ ಇತಿಹಾಸವನ್ನು ಮರುಸ್ಥಾಪಿಸಿ” ಟ್ಯಾಪ್ ಮಾಡಿ ಅಷ್ಟೇ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo