WhatsApp ಪೇಮೆಂಟ್ ಅನ್ನು ಸೆಟ್ ಮಾಡುವುದು ಹೇಗೆ? WhatsApp Pay ಮೂಲಕ ಹಣ ಕಳುಹಿಸುವುದು ಹೇಗೆ?

WhatsApp ಪೇಮೆಂಟ್ ಅನ್ನು ಸೆಟ್ ಮಾಡುವುದು ಹೇಗೆ? WhatsApp Pay ಮೂಲಕ ಹಣ ಕಳುಹಿಸುವುದು ಹೇಗೆ?
HIGHLIGHTS

ವಾಟ್ಸಾಪ್ (WhatsApp) ಪೇಮೆಂಟ್ ಫೀಚರ್ ಅನ್ನು NPCI ಸಹಭಾಗಿತ್ವದಲ್ಲಿ ಡಿಸೈನ್ ಮಾಡಲಾಗಿದೆ.

ಆಂಡ್ರಾಯ್ಡ್ ಅಥವಾ IOS ನ ಲೇಟೆಸ್ಟ್ ವಾಟ್ಸಾಪ್ ವರ್ಷನ್ ಗೆ ಅಪ್-ಗ್ರೇಡ್ ಆಗುವುದು ಬಹಳ ಮುಖ್ಯವಾಗಿದೆ.

ನೀವು Google Pay PhonePe ಇತ್ಯಾದಿಗಳ ಇನ್ನೊಂದು ವೇದಿಕೆಯ UPI ID ಬಳಸಿ ಹಣವನ್ನು ವರ್ಗಾಯಿಸಬಹುದು.

ವಾಟ್ಸಾಪ್ (WhatsApp) ಪೇಮೆಂಟ್ ಫೀಚರ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಥವಾ ಎನ್‌ಪಿಸಿಐ ಸಹಭಾಗಿತ್ವದಲ್ಲಿ ಡಿಸೈನ್ ಮಾಡಲಾಗಿದೆ. ಹಾಗೂ ಇದು ಏಕೀಕೃತ ಪಾವತಿ ಇಂಟರ್ಫೇಸ್ (Unified Payments Interface -UPI) ಆಧಾರಿತ ಪೇಮೆಂಟ್ ವಿಧಾನವಾಗಿದೆ. ಈ ವಾಟ್ಸಾಪ್ (WhatsApp) ಫೀಚರ್ ಅನ್ನು ಬಳಸಲು ನಿಮ್ಮ ಆಂಡ್ರಾಯ್ಡ್ ಅಥವಾ IOS ನ ಲೇಟೆಸ್ಟ್ ವಾಟ್ಸಾಪ್ ವರ್ಷನ್ ಗೆ ಅಪ್-ಗ್ರೇಡ್ ಆಗುವುದು ಬಹಳ ಮುಖ್ಯವಾಗಿದೆ. ವಾಟ್ಸ್‌ಆ್ಯಪ್ ನಮ್ಮ ಪಾವತಿ ವೈಶಿಷ್ಟ್ಯವನ್ನು ಎನ್‌ಪಿಸಿಐ ಪಾಲುದಾರಿಕೆಯಲ್ಲಿ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಬಳಸಿ ವಿನ್ಯಾಸಗೊಳಿಸಿದ್ದು UPI ಯಲ್ಲಿ ಗರಿಷ್ಠ 20 ಮಿಲಿಯನ್ ನೋಂದಾಯಿತ ಬಳಕೆದಾರರ ಮೂಲದಿಂದ ಆರಂಭವಾಗುತ್ತದೆ. ಇದನ್ನೂ ಓದಿ: ಅಮೆಜಾನ್‌ನಲ್ಲಿ 5000mAh ಬ್ಯಾಟರಿ ಮತ್ತು 48MP ಟ್ರಿಪಲ್ ಕ್ಯಾಮೆರಾದ ಈ ಸ್ಮಾರ್ಟ್‌ಫೋನ್‌ಗಳು 12,999 ರೂಗಳಲ್ಲಿ ಲಭ್ಯ

ಯುಪಿಐ ಮೂಲಕ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ನೀವು ವಾಟ್ಸಾಪ್ ಪೇ ಖಾತೆಯನ್ನು ಹೇಗೆ ಹೊಂದಿಸಬಹುದು ಎಂಬುದನ್ನು ಇಲ್ಲಿ ನೋಡೋಣ.ಅಲ್ಲದೆ WhatsApp ಬ್ಲಾಗ್ ಪೋಸ್ಟ್ ಪ್ರಕಾರ ಭಾರತದಲ್ಲಿ WhatsApp ನಲ್ಲಿ ಹಣವನ್ನು ಕಳುಹಿಸಲು ಭಾರತದಲ್ಲಿ ಬ್ಯಾಂಕ್ ಖಾತೆ ಮತ್ತು ಸಕ್ರಿಯ ಡೆಬಿಟ್ ಕಾರ್ಡ್ ಹೊಂದಿರುವುದು ಅಗತ್ಯವಾಗಿದೆ. ವಾಟ್ಸ್‌ಆ್ಯಪ್ ಬ್ಯಾಂಕ್‌ಗಳಿಗೆ ಸೂಚನೆಗಳನ್ನು ಕಳುಹಿಸುತ್ತದೆ ಇದನ್ನು ಪಾವತಿ ಸೇವಾ ಪೂರೈಕೆದಾರರು ಎಂದೂ ಕರೆಯುತ್ತಾರೆ ಇದು ಕಳುಹಿಸುವವರು ಮತ್ತು ರಿಸೀವರ್ ಬ್ಯಾಂಕ್ ಖಾತೆಗಳ ನಡುವೆ UPI ಮೂಲಕ ಹಣ ವರ್ಗಾವಣೆಯನ್ನು ಆರಂಭಿಸುತ್ತದೆ. ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಪೇ ಖಾತೆಯನ್ನು ನೀವು ಹೇಗೆ ಹೊಂದಿಸಬಹುದು.

WhatsApp Pay

ಹಂತ 1: ಆಂಡ್ರಾಯ್ಡ್ ಸಾಧನಗಳಿಗಾಗಿ ವಾಟ್ಸಾಪ್ ತೆರೆಯಿರಿ ಮತ್ತು ಆಪ್‌ನ ಮೇಲಿನ ಬಲಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. IOS ಗಾಗಿ ಕೆಳಗಿನ ಬಲ ಮೂಲೆಯಲ್ಲಿರುವ 'ಸೆಟ್ಟಿಂಗ್ಸ್' ಆಯ್ಕೆಯನ್ನು ಕ್ಲಿಕ್ ಮಾಡಿ. 

ಹಂತ 2: 'ಪಾವತಿಗಳು' ಆಯ್ಕೆಯನ್ನು ಆರಿಸಿ. 'ಪಾವತಿ ವಿಧಾನವನ್ನು ಸೇರಿಸಿ' ಆಯ್ಕೆಮಾಡಿ. WhatsApp ಪಾವತಿ ನೀತಿಗಳನ್ನು ಸ್ವೀಕರಿಸಲು ನಿಮ್ಮನ್ನು ಕೇಳಲಾಗುತ್ತದೆ. 'ಸ್ವೀಕರಿಸಿ ಮತ್ತು ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ. 

ಹಂತ 3: ನೀವು ಬ್ಯಾಂಕುಗಳ ಪಟ್ಟಿಯನ್ನು ಪಡೆಯುತ್ತೀರಿ; ನೀವು ಪಾವತಿ ಮಾಡಲು ಬಯಸುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ. ಇದಲ್ಲದೆ ನೀವು ಒಂದು ಬ್ಯಾಂಕ್‌ನಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ನೀವು ಪಾವತಿ ಮಾಡಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ.

ಹಂತ 4: ಬ್ಯಾಂಕ್ ಅನ್ನು ಆಯ್ಕೆಮಾಡುವಾಗ WhatsApp ಮೊಬೈಲ್ ಸಂಖ್ಯೆಯು ನಿಮ್ಮ ಉಳಿತಾಯ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಪರಿಶೀಲನೆ ಉದ್ದೇಶಕ್ಕಾಗಿ ಈ ಸಂಖ್ಯೆಗೆ SMS ಕಳುಹಿಸಲಾಗುತ್ತದೆ. 

ಹಂತ 5: ಪರಿಶೀಲನೆ ಪೂರ್ಣಗೊಂಡ ನಂತರ ಭವಿಷ್ಯದ ಪಾವತಿಗಳನ್ನು ಮಾಡಲು ನೀವು UPI ಪಿನ್ ಅನ್ನು ಹೊಂದಿಸಬೇಕಾಗುತ್ತದೆ. 

ವಾಟ್ಸಾಪ್ ಮೂಲಕ ಹಣವನ್ನು ಹೇಗೆ ಕಳುಹಿಸುವುದು? 

ಹಂತ 1: ನಿಮ್ಮ ವಾಟ್ಸಾಪ್ ಸಂಪರ್ಕ ಪಟ್ಟಿಯಿಂದ ನೀವು ಯಾರಿಗೆ ಹಣವನ್ನು ವರ್ಗಾಯಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ. ಚಾಟ್ ಆಯ್ಕೆಯನ್ನು ತೆರೆಯಿರಿ ಮತ್ತು ನಂತರ ಪಾವತಿ ಆಯ್ಕೆಯನ್ನು ಆರಿಸಿ. ನೀವು ಆಯ್ಕೆ ಮಾಡಿದ ಸಂಪರ್ಕವು WhatsApp ಪಾವತಿ ಆಯ್ಕೆಯನ್ನು ಬಳಸುತ್ತಿಲ್ಲವಾದರೆ ನೀವು Google Pay PhonePe ಇತ್ಯಾದಿಗಳ ಇನ್ನೊಂದು ವೇದಿಕೆಯ UPI ID ಬಳಸಿ ಹಣವನ್ನು ವರ್ಗಾಯಿಸಬಹುದು. WhatsApp ಪಾವತಿ ಕಾರ್ಯವಿಧಾನ ಅದರ ನಂತರ ನೀವು 'UPI ID ಗೆ ಕಳುಹಿಸಿ' ಆಯ್ಕೆಯನ್ನು ಆರಿಸಿಕೊಳ್ಳಬಹುದು. ಸ್ಕ್ಯಾನ್ ಕ್ಯೂಆರ್ ಕೋಡ್ ಆಯ್ಕೆಯನ್ನು ಬಳಸಿಕೊಂಡು ನೀವು ಹಣವನ್ನು ವರ್ಗಾಯಿಸಬಹುದು. 

ಹಂತ 2: ಮೊತ್ತ ಮತ್ತು ನಿಮ್ಮ UPI ಪಿನ್ ನಮೂದಿಸಿ. ಸರಿಯಾದ ಪಿನ್ ನಮೂದಿಸಿದ ನಂತರ ಮೊತ್ತವನ್ನು ಸ್ವೀಕರಿಸುವವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಹಣವನ್ನು ಸ್ವೀಕರಿಸುವುದು ಕಳುಹಿಸುವವರು ವಾಟ್ಸಾಪ್ ಪೇ ಹೊಂದಿದ್ದರೆ: ಕಳುಹಿಸುವವರು ನಿಮಗೆ ವಾಟ್ಸಾಪ್ ಪೇ ಮೂಲಕ ಹಣವನ್ನು ವರ್ಗಾಯಿಸುತ್ತಿದ್ದರೆ ಅವನು/ಅವಳು ಮಾಡಬೇಕಾಗಿರುವುದು ಹಣವನ್ನು ವರ್ಗಾಯಿಸಲು ಮೇಲಿನ ಸೂಚನೆಗಳನ್ನು ಅನುಸರಿಸಿ. ಇದನ್ನೂ ಓದಿ: iPhone Deals: ಅಮೆಜಾನ್ ಫೆಸ್ಟಿವಲ್ ಮಾರಾಟದ ಟಾಪ್ ಡೀಲ್‌ಗಳಲ್ಲಿ ಈ iPhone ಅತ್ಯಂತ ಕಡಿಮೆ ಬೆಲೆಗೆ ಲಭ್ಯ

WhatsApp Pay

ವಾಟ್ಸಾಪ್ ಮೂಲಕ ಹಣವನ್ನು ಹೇಗೆ ಸ್ವೀಕರಿಸುವುದು?

ಸ್ವೀಕರಿಸುವವರಲ್ಲಿ ಒಂದು ವೇಳೆ ವಾಟ್ಸಾಪ್ ಪೇ ಇಲ್ಲದಿದ್ದರೂ ಸಹ ನೀವು ಹಣವನ್ನು ಕಳುಹಿಸಬಹುದು. ಅದಕ್ಕಾಗಿ ಕಳುಹಿಸುವವರಿಗೆ ನಿಮ್ಮ WhatsApp Pay UPI ID ಅನ್ನು ನೀವು ಹಂಚಿಕೊಳ್ಳಬೇಕಾಗುತ್ತದೆ. ಸ್ವೀಕರಿಸುವವರು ನಿಮಗೆ ಹಣವನ್ನು ಕಳುಹಿಸುವವರಿಂದ WhatsApp Pay UPI ID ಪಡೆದು ಬೇರೆ ಪಾವತಿ ಆಪ್ ಅಂದ್ರೆ Google Pay PhonePe ಇತ್ಯಾದಿ ಪಾವತಿ ವೇದಿಕೆಯಲ್ಲಿ ನಮೂದಿಸಿ ಪಡೆಯಬವುದು. ಒಮ್ಮೆ ನೀವು ಹಣವನ್ನು ಪಡೆದರೆ ನಿಮಗೆ ಸ್ವೀಕರಿಸಿದ್ದೀರಿ ಎಂದು WhatsApp Pay ನಿಮಗೆ ತಿಳಿಸುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo