ಜಿಯೋ ಆಫರ್: ಶಾರುಖ್ ಖಾನ್ ನನ್ನು ಭೇಟಿ ಮಾಡುವ ಸುವರ್ಣಾವಕಾಶ ಇದು ಕೇವಲ ಜಿಯೋ ಬಳಕೆದಾರರಿಗೆ ಮಾತ್ರ ಲಭ್ಯ.

HIGHLIGHTS

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿ ಬಹುಮಾನವನ್ನು ಗೆಲ್ಲುವ ಸುವರ್ಣಾವಕಾಶವನ್ನು ಇಲ್ಲಿದೆ.

ಜಿಯೋ ಆಫರ್: ಶಾರುಖ್ ಖಾನ್ ನನ್ನು ಭೇಟಿ ಮಾಡುವ ಸುವರ್ಣಾವಕಾಶ ಇದು ಕೇವಲ ಜಿಯೋ ಬಳಕೆದಾರರಿಗೆ ಮಾತ್ರ ಲಭ್ಯ.

ರಿಲಯನ್ಸ್ ಜಿಯೋ ಟೆಲಿಕಾಂ ಈಗಾಗಲೇ ಲಕ್ಷಾಂತರ ಬಳಕೆದಾರರಿಗೆ ಕೈಗೆಟುಕುವ ಕೊಡುಗೆಗಳನ್ನು ನೀಡಿದೆ. 2018 ರ ವರ್ಷದ ಅಂತ್ಯದ ವೇಳೆಗೆ ಜಿಯೋ ಮತ್ತೊಮ್ಮೆ ಜಿಯೋ ವತಿಯಿಂದ ತಮ್ಮ ಬಳಕೆದಾರರಿಗೆ ನೀಡುವ ಕೊಡುಗೆ ಬಹಳ ವಿಶೇಷವಾಗಿದೆ. ಏಕೆಂದರೆ ಜಿಯೋ ಈ ಬಾರಿ ತನ್ನ ಬಳಕೆದಾರರಿಗೆ ಬಾಲಿವುಡ್ ಕಿಂಗ್ ಆಗಿರುವ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿ ಬೇರೆ ಬಹುಮಾನವನ್ನು ಗೆಲ್ಲುವ ಸುವರ್ಣಾವಕಾಶವನ್ನು ನೀಡುತ್ತಿದೆ.

Digit.in Survey
✅ Thank you for completing the survey!

ರಿಲಯನ್ಸ್ ಜಿಯೋವಿನ ಈ ಪ್ರಸ್ತಾಪದಲ್ಲಿ ನೀವು ಪಾಲ್ಗೊಳ್ಳಲು ಬಯಸಿದರೆ ನಿಮ್ಮ ಸ್ನೇಹಿತ, ಸಂಬಂಧಿಗಳಿಗೆ ಆಹ್ವಾನ ಸಂದೇಶವನ್ನು Jio ನೆಟ್ವರ್ಕ್ಗೆ ಸೇರಲು ಕಳುಹಿಸಬೇಕಾಗುತ್ತದೆ. ನೀವು ಇನ್ವಾಯ್ಸ್ (ಆಹ್ವಾನಿತರು) ದೃಢೀಕರಿಸಿದಲ್ಲಿ ಇನ್ನೊಬ್ಬ ಬಳಕೆದಾರರು ಲೈವ್ ಸಿಮ್ ಅನ್ನು ಖರೀದಿಸಿದರೆ ಆಗ ಇಬ್ಬರೂ ಸೇರಿ ಶಾರುಖ್ ಅವರನ್ನು ಭೇಟಿ ಮಾಡಲು ಅವಕಾಶವನ್ನು ಪಡೆಯಬಹುದು.

ಪ್ರತ್ಯೇಕವಾಗಿ ರಿಲಯನ್ಸ್ ಜಿಯೋ ಬಳಕೆದಾರರಿಗೆ ಈ ಕೊಡುಗೆಯು ವಿಶೇಷವಾಗಿದೆ ಏಕೆಂದರೆ ಇದರಲ್ಲಿ ಭಾಗವಹಿಸುವ ಎಲ್ಲರಿಗೂ ಕೆಲವು ಬಹುಮಾನಗಳನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ನಂತರ ನೀವು ಎರಡು ಚಲನಚಿತ್ರ ಟಿಕೆಟ್ಗಳನ್ನು ಪಡೆಯಬಹುದು. ಇದಲ್ಲದೆ AJIO.com, Faasos, EaseMy Trip, Shopclues, Oyo, VLCC, Puma, Lenskart ಗಳಂತವುಗಳಲ್ಲಿ ಭಾರಿ ರಿಯಾಯಿತಿ ಕೂಪನ್ಗಳನ್ನು ಬಳಕೆದಾರರು ಪಡೆಯಬವುದು.

ಜಿಯೋವಿನ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆಯ ಆಹ್ವಾನದಲ್ಲಿ ಜಿಯೋ ಅಪ್ಲಿಕೇಶನ್ಗೆ ಹೋಗಿ 'Participate Now' ಆಯ್ಕೆಯನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ ನಂತರ ನಿಮ್ಮ ಪುಟದಲ್ಲಿ ಬರೆಯಲಾದ ಸಂದೇಶವನ್ನು ಹೊಂದಿರುವ ಪುಟ ತೆರೆಯುತ್ತದೆ. ನಿಮ್ಮ ಕಾಂಟೆಕ್ಟ್ ಪಟ್ಟಿಯಿಂದ ಕನಿಷ್ಠ 10 ಜನರಿಗೆ ನೀವು ಅದನ್ನು ಕಳುಹಿಸಬೇಕಾಗುತ್ತದೆ. ನಿಮ್ಮ ಪರವಾಗಿ ಕಳುಹಿಸಿದ ಯಾವುದೇ ಆಹ್ವಾನದಲ್ಲಿ ಯಾರಾದರೂ ಜಿಯೋ ನೆಟ್ವರ್ಕ್ನ ಸೇರಿದರೆ ನೀವು ಈ ಪ್ರಸ್ತಾಪಕ್ಕಾಗಿ ಅರ್ಹರಾಗಿರುತ್ತೀರಿ ಮತ್ತು ನೀವು ಶಾರುಖ್ ಖಾನ್ ಅವರನ್ನು ಭೇಟಿ ಮಾಡಲು ಒಂದು ಅವಕಾಶವನ್ನು ಪಡೆಯಬಹುದು.

ಇಮೇಜ್ ಸೋರ್ಸ್

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo