Boat Chrome Iris ಸ್ಮಾರ್ಟ್‌ವಾಚ್‌ ಬಿಡುಗಡೆ! ಬಿಗ್‌ ಬ್ಯಾಟರಿ ಸೌಲಭ್ಯ ಇರುವ ಈ ವಾಚ್‌ ಬೆಲೆ ಎಷ್ಟು?

HIGHLIGHTS

Boat Chrome Iris ಬ್ಲೂಟೂತ್ ಕಾಲಿಂಗ್‌ ಸೌಲಭ್ಯ ಒಳಗೊಂಡಿದೆ

ಈ ಸ್ಮಾರ್ಟ್‌ವಾಚ್‌ AMOLED ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ

ಈ ವಾಚ್‌ 180mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಹೊಂದಿದೆ

Boat Chrome Iris ಸ್ಮಾರ್ಟ್‌ವಾಚ್‌ ಬಿಡುಗಡೆ! ಬಿಗ್‌ ಬ್ಯಾಟರಿ ಸೌಲಭ್ಯ ಇರುವ ಈ ವಾಚ್‌ ಬೆಲೆ ಎಷ್ಟು?

Boat ಸಂಸ್ಥೆಯು ಭಾರತದಲ್ಲಿ Boat Chrome Iris smartwatch ಅನ್ನು ಬಿಡುಗಡೆ ಮಾಡಿದೆ. ಬೋಟ್ ಸಂಸ್ಥೆಯ ಈ ನೂತನ ಸ್ಮಾರ್ಟ್‌ ವಾಚ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಅಲ್ಟ್ರಾಸ್ಲಿಮ್ ಮೆಟಲ್ ಬಾಡಿ ರಚನೆಯನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ ವಾಚ್‌ ವಿಶೇಷವಾಗಿ ಹೆಲ್ತ್ ಟ್ರ್ಯಾಕಿಂಗ್, ಬ್ಲೂಟೂತ್ ಕರೆ ಸಪೋರ್ಟ್‌ ಸೇರಿದಂತೆ ಕೆಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಪ್ರವೇಶ ಮಾಡಿದೆ. ಹಾಗೆಯೇ ಬ್ಯಾಟರಿ ಬ್ಯಾಕ್‌ಅಪ್‌ ಸಹ ಉತ್ತಮವಾಗಿದ್ದು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಐದು ದಿನಗಳ ವರೆಗೆ ಬ್ಯಾಕ್‌ಅಪ್‌ ಒದಗಿಸಬಲ್ಲದು ಎನ್ನಲಾಗಿದೆ. ಅಲ್ಲದೇ ಐದು ಭಿನ್ನ ಕಲರ್‌ ಆಯ್ಕೆಯನ್ನು ಸಹ ಇದು ಪಡೆದುಕೊಂಡಿದೆ. ಇನ್ನುಳಿದಂತೆ ಬೋಟ್‌ ಕ್ರೋಮ್‌ ಐರಿಸ್ ಸ್ಮಾರ್ಟ್‌ ವಾಚ್‌ನ ಇತರೆ ಫೀಚರ್ಸ್‌ ಹಾಗೂ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : itel A100 ಲಾಂಚ್! ಕಡಿಮೆ ಬೆಲೆಯಲ್ಲಿ ಲಗ್ಗೆ ಇಟ್ಟಿರುವ ಈ ಫೋನ್‌ 5,000mAh ಬ್ಯಾಟರಿ ಪಡೆದಿದೆ

Boat Chrome Iris ಸ್ಮಾರ್ಟ್‌ವಾಚ್‌ ಬೆಲೆ ಹಾಗೂ ಲಭ್ಯತೆ

ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಬೋಟ್‌ ಕಂಪನಿಯ ಕ್ರೋಮ್‌ ಐರಿಸ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ 3,499 ರೂ.ಗಳ ಬೆಲೆಯನ್ನು ಪಡೆದಿದೆ. ಈ ಸ್ಮಾರ್ಟ್‌ ವಾಚ್‌ ಅನ್ನು ಗ್ರಾಹಕರು Amazon, Flipkart ಮತ್ತು Boat ವೆಬ್‌ಸೈಟ್‌ ಸೇರಿದಂತೆ ಪ್ರಮುಖ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ. ಅಂದಹಾಗೆ ಕ್ರೋಮ್‌ ಐರಿಸ್ ಸ್ಮಾರ್ಟ್‌ವಾಚ್‌ ಮೆಟಲ್ ಗೋಲ್ಡ್, ರೋಸ್ ಪಿಂಕ್, ವೆಲ್ವೆಟ್ ವೈನ್, ಸಿಲ್ಕ್ ಸ್ಕಿನ್ ಮತ್ತು ಫ್ರಾಸ್ಟೆಡ್ ಸ್ಕೈ ಕಲರ್‌ ಆಯ್ಕೆಗಳಲ್ಲಿ ಲಭ್ಯವಿದೆ.

Boat Chrome Iris ಸ್ಮಾರ್ಟ್‌ವಾಚ್‌ನ ಫೀಚರ್ಸ್‌

ಈ ನೂತನ ವಾಚ್‌1.32 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 466×466 ಪಿಕ್ಸಲ್‌ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಇದರ ಸ್ಕ್ರೀನ್‌ ಅಲ್ವೇಸ್‌ ಆನ್‌ ಡಿಸ್‌ಪ್ಲೇ ಮಾದರಿಯಲ್ಲಿ ಇದ್ದು, 1000 nits ಬ್ರೈಟ್ನೆಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಈ ವಾಚ್‌ ಹಗುರವಾದ ವಿನ್ಯಾಸದ ಜೊತೆಗೆ ಅಲ್ಟ್ರಾಸ್ಲಿಮ್ ಮೆಟಲ್ ಬಾಡಿಯ ರಚನೆಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ವಾಚ್ ಆರೋಗ್ಯ ಮೇಲ್ವಿಚಾರಣೆ, ಫಿಟ್‌ನೆಸ್ ಟ್ರ್ಯಾಕಿಂಗ್ ಮತ್ತು ಹೆಚ್ಚುವರಿ ಸ್ಮಾರ್ಟ್ ಟೂಲ್‌ಗಳಲ್ಲಿ ಮ್ಯೂಸಿಕ್‌ ಮತ್ತು ಕ್ಯಾಮೆರಾ ಕಂಟ್ರೋಲ್‌ ಸಹ ಸೇರಿವೆ.

ಬೋಟ್ ಕ್ರೋಮ್ ಐರಿಸ್‌ ವಾಚ್‌ ನಿರಂತರ ಹೃದಯ ಬಡಿತ ಮೇಲ್ವಿಚಾರಣೆ, SpO2 ಟ್ರ್ಯಾಕಿಂಗ್, ನಿದ್ರೆ ಟ್ರ್ಯಾಕಿಂಗ್, ಉಸಿರಾಟದ ವಿಧಾನಗಳು, ಸ್ಟೆಪ್‌ ಕೌಂಟ್‌ ಮತ್ತು ಕ್ಯಾಲೊರಿಗಳಿಗಾಗಿ ದೈನಂದಿನ ಚಟುವಟಿಕೆ ಟ್ರ್ಯಾಕಿಂಗ್ ನಂತಹ ಹೆಲ್ತ್‌ ಟ್ರ್ಯಾಕ್‌ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಭಿನ್ನ ಸ್ಪೋರ್ಟ್ಸ ಮೋಡಗಳನ್ನು ಸಹ ಬೆಂಬಲಿಸುತ್ತದೆ. ಅಲ್ಲದೇ ಈ ವಾಚ್ ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳು, ಕಸ್ಟಮೈಸ್ ಮಾಡಬಹುದಾದ ಮೆನು ಲೇಔಟ್‌ಗಳು ಮತ್ತು ನ್ಯಾವಿಗೇಷನ್‌ಗಾಗಿ 2.5D ಬಳಕೆದಾರ ಇಂಟರ್ಫೇಸ್ ಅನ್ನು ಸಹ ಬೆಂಬಲಿಸುತ್ತದೆ. ಈ ಸ್ಮಾರ್ಟ್‌ವಾಚ್ 180mAh ಬ್ಯಾಟರಿ ಪಡೆದಿದ್ದು ಇದು ಐದು ದಿನಗಳ ವರೆಗೆ ಬ್ಯಾಕ್‌ಅಪ್‌ ಒದಗಿಸಲಿದೆ ಎನ್ನಲಾಗಿದೆ. ಹಾಗೆಯೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಸ್ಮಾರ್ಟ್‌ವಾಚ್ IP68 ರೇಟಿಂಗ್ ಅನ್ನು ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo