Jio Tip: ಜಿಯೋ ಗ್ರಾಹಕರೇ ಹೊಸ ಬೆಲೆ ಅನ್ವಯಿಸುವ ಮುಂಚೆ ಈ ಕೆಲಸ ಮಾಡಿ 480 ರೂಗಳನ್ನು ಉಳಿಸಿ!

Jio Tip: ಜಿಯೋ ಗ್ರಾಹಕರೇ ಹೊಸ ಬೆಲೆ ಅನ್ವಯಿಸುವ ಮುಂಚೆ ಈ ಕೆಲಸ ಮಾಡಿ 480 ರೂಗಳನ್ನು ಉಳಿಸಿ!
HIGHLIGHTS

ಜಿಯೋ ವಾರ್ಷಿಕ ರೀಚಾರ್ಜ್ ಯೋಜನೆ ಡಿಸೆಂಬರ್ 1 ರಿಂದ ಜಿಯೋ ಯೋಜನೆಗಳ ದರಗಳು ಹೆಚ್ಚಾಗಲಿವೆ.

ಈ ಹಿನ್ನೆಲೆಯಲ್ಲಿ ಹಳೆಯ ದರಗಳಲ್ಲಿ ರೀಚಾರ್ಜ್ ಮಾಡಲು ಮತ್ತು 480 ರೂಗಳನ್ನು ಉಳಿಸುವ ಮಾರ್ಗವೊಂದಿದೆ.

ಜಿಯೋದ 2399 ರೂಗಳ ಪ್ಲಾನ್ ನೊಂದಿಗೆ ರೀಚಾರ್ಜ್ ಮಾಡುವ ಮೂಲಕ ಇಡೀ ವರ್ಷಕ್ಕೆ ರೀಚಾರ್ಜ್ ಮಾಡುವ ಟೆಕ್ಷನ್ ದೂರವಿಡಬವುದು.

ಜಿಯೋ ವಾರ್ಷಿಕ ರೀಚಾರ್ಜ್ ಯೋಜನೆ ಡಿಸೆಂಬರ್ 1 ರಿಂದ ಜಿಯೋ ಯೋಜನೆಗಳ ದರಗಳು ಹೆಚ್ಚಾಗಲಿವೆ. ರಿಲಯನ್ಸ್ ಜಿಯೋ ಪ್ಲಾನ್ ಗಳು ( Reliance Jio Plans) ದುಬಾರಿಯಾಗಲಿವೆ. ಹೊಸ ದರಗಳು ಡಿಸೆಂಬರ್ 1 ರಿಂದ ಅಂದರೆ ನಾಳೆಯಿಂದ ಅನ್ವಯವಾಗಲಿದೆ. ಡಿಸೆಂಬರ್ 1 ರಿಂದ ಬಳಕೆದಾರರು ಹೆಚ್ಚಿನ ಹಣ ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬೇಕು. ರೀಚಾರ್ಜ್‌ಗಾಗಿ (Recharge plan) ಬಳಕೆದಾರರು ಮೊದಲಿಗಿಂತ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಳೆಯ ದರಗಳಲ್ಲಿ ರೀಚಾರ್ಜ್ ಮಾಡಲು ಮತ್ತು 480 ರೂಗಳನ್ನು ಉಳಿಸುವ ಮಾರ್ಗವೊಂದಿದೆ. 

ಜಿಯೋ ಗ್ರಾಹಕರು 480 ರೂಗಳನ್ನು ಉಳಿಸುವುದೇಗೆ?

ನೀವು 480 ರೂಗಳನ್ನು ಉಳಿಸಲು ಇರುವ ಕೊನೆಯ ಅವಕಾಶ ಇದು. ಡಿಸೆಂಬರ್ 1 ರಿಂದ ಜಿಯೋ ಹೊಸ ದರವನ್ನು ( Jio new rate) ಜಾರಿಗೆ ತರುತ್ತದೆ. ಅಂದರೆ ಜಿಯೋ ಯೋಜನೆಗಳು (Jio recharge plan) ದುಬಾರಿಯಾಗಲಿವೆ. ಆದರೆ ಮುಂದಿನ ವರ್ಷದ ನವೆಂಬರ್‌ವರೆಗೆ ಹಳೆಯ ದರದಲ್ಲಿ ಡೇಟಾ ಕರೆ ಮತ್ತು SMS ಸೇವೆಯನ್ನು ಪಡೆಯುವ ಮಾರ್ಗವೊಂದಿದೆ. ಹೀಗೆ ಮಾಡಿದರೆ ಹೆಚ್ಚುವರಿ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಬಹುದು. ಜಿಯೋ ವಾರ್ಷಿಕ ಪ್ಲಾನ್ (Jio annuala plan) ಮೂಲಕ ರೀಚಾರ್ಜ್ ಮಾಡಿಕೊಳ್ಳಬೇಕು. ಅಂದರೆ ಜಿಯೋದ  2399 ರೂಗಳ ಪ್ಲಾನ್ ನೊಂದಿಗೆ ರೀಚಾರ್ಜ್ ಮಾಡುವ ಮೂಲಕ ಇಡೀ ವರ್ಷಕ್ಕೆ ರೀಚಾರ್ಜ್ ಮಾಡುವ ಟೆಕ್ಷನ್ ದೂರವಿಡಬವುದು.

ಜಿಯೋ ರೂ 2399  ವಾರ್ಷಿಕ ರೀಚಾರ್ಜ್ ಯೋಜನೆ:

ನಿಮ್ಮ ಮಾಹಿತಿಗಾಗಿ ರಿಲಯನ್ಸ್ ಜಿಯೋ Jio.com ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬ್ಯಾನರ್ ಗೋಚರಿಸುತ್ತದೆ.ಅದರಲ್ಲಿ ಮುಂಗಡವಾಗಿ ರೀಚಾರ್ಜ್ ಮಾಡಿ ಮತ್ತು 20% ಉಳಿಸಿ ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಪ್ಲಾನ್ ವ್ಯಾಲಿಡಿಟಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ನಮೂದಿಸಿದೆ. ಜಿಯೋ 2399 ಯೋಜನೆ ಈ ಯೋಜನೆಯೊಂದಿಗೆ ಜಿಯೋ ಬಳಕೆದಾರರಿಗೆ ದಿನಕ್ಕೆ 2GB ಡೇಟಾ ಮತ್ತು ದಿನಕ್ಕೆ 100 SMS ನೊಂದಿಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡಲಾಗುತ್ತದೆ. ಈ ಯೋಜನೆಯು ಬಳಕೆದಾರರಿಗೆ 365 ದಿನಗಳ ಮಾನ್ಯತೆಯನ್ನು ನೀಡುತ್ತದೆ.

ಆದರೆ ನೀವು ಇದೇ ಯೋಜನೆಯನ್ನು ಡಿಸೆಂಬರ್ 1 ರಂದು ಅಥವಾ ನಂತರ ರೀಚಾರ್ಜ್ ಮಾಡಿದರೆ ಅದು ನಿಮಗೆ ರೂ 2879 ವೆಚ್ಚವಾಗುತ್ತದೆ ಅಂದರೆ ನಿಮ್ಮ ಜೇಬಿನಲ್ಲಿ ರೂ 480 ಹೆಚ್ಚುವರಿ ವೆಚ್ಚವಾಗುತ್ತದೆ. ಆದರೆ ನೀವು ವಾರ್ಷಿಕ ಯೋಜನೆಯಿಂದ ಇಂದು ಅಂದರೆ ನವೆಂಬರ್ 29 ಅಥವಾ 30 ರಂದು ರೀಚಾರ್ಜ್ ಮಾಡಿದರೆ ನಂತರ ನೀವು 365 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ ಅಂದರೆ ಮುಂದಿನ ವರ್ಷ ನವೆಂಬರ್‌ವರೆಗೆ ರೀಚಾರ್ಜ್ ಮಾಡುವ ತೊಂದರೆಯನ್ನು ತೊಡೆದುಹಾಕಲು ಮತ್ತು ನಿಮ್ಮ ಜೇಬಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲ. ನಿಮ್ಮ ಸಂಖ್ಯೆಗೆ Jio ನೀಡುತ್ತಿರುವ ಇತ್ತೀಚಿನ ಉತ್ತಮ ಪ್ಲಾನ್‌ಗಳನ್ನು ಇಲ್ಲಿಂದ My Offers ಉಚಿತವಾಗಿ ಪರೀಕ್ಷಿಸಬಹುದು

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo