Moto Watch ಭಾರತದಲ್ಲಿ ಬಿಡುಗಡೆ; 13 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ

HIGHLIGHTS

Moto Watch ಇದು 13 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್‌ ಒದಗಿಸುತ್ತದೆ

Moto Watch ಜನವರಿ 30 ರಂದು ಮೊಟೊರೊಲಾ ವೆಬ್‌ಸೈಟ್ ಮೂಲಕ ಭಾರತದಲ್ಲಿ ಮಾರಾಟ ಶುರು ಮಾಡಲಿದೆ

Moto Watch ಭಾರತದಲ್ಲಿ ಬಿಡುಗಡೆ; 13 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ

Motorola Moto Watch: ಮೊಟೊರೊಲಾ ಸಂಸ್ಥೆಯು ಇಂದು (ಜ.23 ರಂದು) ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ Motorola Signature ಫೋನ್‌ ಜೊತೆಗೆ Moto Watch ಅನ್ನು ಸಹ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಸಂಸ್ಥೆಯ ಈ ಹೊಸ Moto Watch ಭಾರತದಲ್ಲಿ ಮೊಟೊರೊಲಾದ ಅಧಿಕೃತ ಆನ್ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯ ಆಗಲಿದೆ. ಈ ನೂತನ ಸ್ಮಾರ್ಟ್‌ ವಾಚ್‌ನಲ್ಲಿ ಹೆಲ್ತ್ ಹಾಗೂ ಫಿಟ್ನೆಸ್ ಟ್ರ್ಯಾಕಿಂಗ್ ಆಯ್ಕೆಗಳನ್ನು ಒಳಗೊಂಡಿದೆ. ಮುಖ್ಯವಾಗಿ ರಕ್ತದಲ್ಲಿನ ಆಕ್ಸಿಜನ್ ಮಟ್ಟ ಟ್ರ್ಯಾಕಿಂಗ್, ಹಾರ್ಟ್‌ ರೇಟ್ ಮಾನಿಟರಿಂಗ್, ಸ್ಲಿಪ್‌ ಮತ್ತು ರಿಕವರಿ ಮಾನಿಟರಿಂಗ್‌ನಂತಹ ಹೆಲ್ತ್ ಫೀಚರ್ಸ್‌ ಪಡೆದಿದ್ದು ಗ್ರಾಹಕರ ಗಮನ ಸೆಳೆದಿದೆ. ಹಾಗಾದರೇ Motorola Moto Watch ನ ಬೆಲೆ ಎಷ್ಟು, ಇತರೆ ಫೀಚರ್ಸ್‌ ಏನು ಎಂಬುದನ್ನು ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Motorola Signature ಅಂತೂ ಲಾಂಚ್ ಆಯ್ತು! ಫೀಚರ್ಸ್‌ ಏನು, ಬೆಲೆ ಮತ್ತು ಆಫರ್‌ ಮಾಹಿತಿ

Motorola Moto Watch: ಬೆಲೆ ಮತ್ತು ಲಭ್ಯತೆಯ ಮಾಹಿತಿ ಇಲ್ಲಿದೆ

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ Moto Watch ನ ಸಿಲಿಕೋನ್ ಸ್ಟ್ರಾಪ್ ವೇರಿಯಂಟ್‌ ಬೆಲೆ ರೂ. 5,999 ರಿಂದ ಪ್ರಾರಂಭ ಆಗುತ್ತದೆ. ಹಾಗೆಯೇ ಮೆಟಲ್‌ ಮತ್ತು ಲೆದರ್ ಸ್ಟ್ರಾಪ್ ವೇರಿಯಂಟ್‌ ಆಯ್ಕೆಯ ಬೆಲೆಯು ರೂ. 6,999 ಗಳು ಆಗಿದೆ. ಇನ್ನು ಮೊಟೊರೊಲಾ ಸಿಗ್ನಿಚರ್ ಫೋನಿನಂತೆ ಇದೇ ಜನವರಿ 30 ರಂದು ಮೊಟೊರೊಲಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಭಾರತದಲ್ಲಿ ಸೇಲ್ ಪ್ರಾರಂಭಿಸಲಿದೆ.

Motorola Moto Watch ನ ಸಿಲಿಕೋನ್ ಸ್ಟ್ರಾಪ್ ವೇರಿಯಂಟ್‌ ಪ್ಯಾಂಟೋನ್ ಹರ್ಬಲ್ ಗಾರ್ಡನ್, ಪ್ಯಾಂಟೋನ್ ವಾಲ್ಕಾನಿಕ್ ಆಶ್ ಮತ್ತು ಪ್ಯಾಂಟೋನ್ ಪ್ಯಾರಾಚೂಟ್ ಪರ್ಪಲ್ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯಾಗಲಿದೆ. ಹಾಗೆಯೇ ಮೆಟಲ್‌ ಮತ್ತು ಲೆದರ್ ಸ್ಟ್ರಾಪ್ ವೇರಿಯಂಟ್‌ ಮ್ಯಾಟ್ ಬ್ಲಾಕ್ ಮತ್ತು ಮ್ಯಾಟ್ ಸಿಲ್ವರ್ ಕಲರ್‌ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯ ಆಗಲಿವೆ.

Motorola Moto Watch: ಫೀಚರ್ಸ್‌ ಮತ್ತು ಇತರೆ ಆಯ್ಕೆಗಳು

ಮೊಟೊ ಕಂಪನಿಯು ಪರಿಚಯಿಸಿರುವ ನೂತನ Motorola Moto Watch ಸ್ಮಾರ್ಟ್‌ ವಾಚ್ ರೌಂಡ್ ಡಯಲ್ ರಚನೆ ಅನ್ನು ಹೊಂದಿದೆ. ಇದು 1.4 ಇಂಚಿನ OLED ಡಿಸ್‌ಪ್ಲೇ ಪಡೆದಿದ್ದು ಜೊತೆಗೆ Corning Gorilla Glass 3 ರಕ್ಷಣೆ ಸೌಲಭ್ಯ ಪಡೆದಿದೆ. ಹಾಗೆಯೇ ಈ ವಾಚ್ everyday scratches ಮತ್ತು minor falls ನಿಂದ ಸುರಕ್ಷತೆಯನ್ನು ನೀಡುತ್ತದೆ. ಸ್ಮಾರ್ಟ್‌ವಾಚ್ 4GB eMMC ಸ್ಟೋರೇಜ್ ಆಯ್ಕೆ ಒಳಗೊಂಡಿದ್ದು ಇದು ಬಳಕೆದಾರರ ಫಿಟ್ನೆಸ್ ಡೇಟಾಗೂ ಬೆಂಬಲ ನೀಡುತ್ತದೆ. ಇನ್ನು ಈ ವಾಚ್ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 13 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ ಎಂದು ಕಂಪನಿಯು ಹೇಳಿದೆ.

ಕನೆಕ್ಟಿವಿಟಿ ಆಯ್ಕೆಗಳನ್ನು ನೋಡುವುದಾದರೇ ಈ ವಾಚ್ ಡ್ಯುಯಲ್ ಫ್ರೀಕ್ವೆನ್ಸಿ GPS ಮತ್ತು Bluetooth 5.3 ಅನ್ನು ಸಪೋರ್ಟ್ ಮಾಡುತ್ತದೆ. ಅದೇ ರೀತಿ ಇದು ಹೆಲ್ತ್‌ ಮತ್ತು ಫಿಟ್‌ನೆಸ್ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ಪಡೆದಿದೆ. ಈ ವಾಚ್ ಹೃದಯ ಬಡಿತ ಮೇಲ್ವಿಚಾರಣೆ, ಚೇತರಿಕೆ ಮೇಲ್ವಿಚಾರಣೆ, ರಕ್ತದಲ್ಲಿನ ಆಮ್ಲಜನಕ ಮಟ್ಟದ ಟ್ರ್ಯಾಕಿಂಗ್, ಸ್ಟೆಪ್‌ ಕೌಂಟರ್, ಕ್ಯಾಲೋರಿ ಕೌಂಟರ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಈ ವಾಚ್ ಆಂಡ್ರಾಯ್ಡ್ 12 ಹಾಗೂ ಆ ನಂತರದ ಲೇಟೆಸ್ಟ್‌ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ.

Manthesh B
Digit.in
Logo
Digit.in
Logo