Instagram Down! ಪೋಸ್ಟ್‌ ಮಾಡಲು ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ

HIGHLIGHTS

ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಡೌನ್‌ ಎಂದು ವರದಿ

ಇನ್‌ಸ್ಟಾಗ್ರಾಮ್ ಡೌನ್‌ ಬಳಕೆದಾರರು ಟ್ವಿಟರ್ X ನಲ್ಲಿ ದೂರು ಪೋಸ್ಟ್‌ ಮಾಡಿದ್ದಾರೆ

ಡೌನ್‌ಡೆಕ್ಟರ್ ಪ್ರಕಾರ 6,000 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ವರದಿ ಮಾಡಿದ್ದಾರೆ

Instagram Down! ಪೋಸ್ಟ್‌ ಮಾಡಲು ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ

ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಮೆಟಾ ಮಾಲೀಕತ್ವದ Instagram ಮಂಗಳವಾರ ಅಮೆರಿಕದಲ್ಲಿ ಪ್ರಮುಖ ಸ್ಥಗಿತವನ್ನು (Instagram down) ಅನುಭವಿಸಿದೆ ಎಂದು ವರದಿಯಾಗಿದೆ. ಅಮೆರಿಕದಲ್ಲಿ ಸಾವಿರಾರು ಬಳಕೆದಾರರು ಮೆಸೆಜ್‌ ಕಳುಹಿಸುವಿಕೆ, ಹೊಸ ಪೋಸ್ಟ್ ಮಾಡುವುದು ಸೇರಿದಂತೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಎದುರಿಸುವುದರ ಕುರಿತು ವರದಿ ಮಾಡಿದ್ದಾರೆ. ಔಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ 6,000 ಕ್ಕೂ ಹೆಚ್ಚು ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಮಾರ್ಚ್ 11 ರ ಬೆಳಿಗ್ಗೆ ಸುಮಾರು 10,000 ಕ್ಕೂ ಅಧಿಕ ಬಳಕೆದಾರರು ಇನ್‌ಸ್ಟಾಗ್ರಾಮ್ ಸ್ಥಗಿತಗಳನ್ನು ವರದಿ ಮಾಡಿದ್ದಾರೆ ಎಂದು ವರದಿಗಳಾಗಿವೆ. ಹಾಗೆಯೇ ಭಾರತದಲ್ಲಿ 845 ಬಳಕೆದಾರರು ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿ ಮಾಡಿದ್ದಾರೆ.

Digit.in Survey
✅ Thank you for completing the survey!

Also Read : Amazon EPL 2026 ಸೇಲ್‌: Redmi Note 15 5G ಖರೀದಿಸುವು ಪ್ಲಾನ್‌ ಇದ್ರೆ, ತಡ ಮಾಡಬೇಡಿ!


Instagram down: ಬಳಕೆದಾರರಿಂದ X ತಾಣದಲ್ಲಿ ದೂರು

ಜನಪ್ರಿಯ ಇನ್‌ಸ್ಟಾಗ್ರಾಮ್ ಸ್ಥಗಿತ ಆಗಿರುವ ಬೆನ್ನಲ್ಲೇ ಅನೆಕ ಬಳಕೆದಾರರು ಎಕ್ಸ್‌ ತಾಣದಲ್ಲಿ ಇನ್‌ಸ್ಟಾಗ್ರಾಮ್ ಡೌನ್‌ ಆಗಿರುವ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಹಾಗೆಯೇ ಅನೇಕ ಬಳಕೆದಾರರು ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ದೂರು ವರದಿ ಮಾಡಿದ್ದಾರೆ. ಇನ್ನು ಡೌನ್‌ಡೆಕ್ಟರ್ ಡೇಟಾ ಪ್ಲಾಟ್‌ಫಾರ್ಮ್ ಪ್ರಕಾರ ಹೆಚ್ಚಿನ ದೂರುಗಳು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನ ಸೇವೆಗಳಲ್ಲಿನ ಅಡಚಣೆಗಳಿಗೆ ಸಂಬಂಧಿಸಿವೆ. ಸುಮಾರು 68% ಬಳಕೆದಾರರು ಅಪ್ಲಿಕೇಶನ್ ಬಳಸುವಾಗ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. 19% ಜನರು ಸರ್ವರ್ ಸಂಪರ್ಕ ಸಮಸ್ಯೆಗಳನ್ನು ಎದುರಿಸಿದ್ದಾರೆ ಹಾಗೂ ಈ ದೂರುಗಳಲ್ಲಿ 7% ವಿಷಯ ಪ್ರಕಟಣೆ ಮತ್ತು ಪೋಸ್ಟ್ ಮಾಡುವಿಕೆಗೆ ಸಂಬಂಧಿಸಿವೆ. ಇನ್ನು ಅನೇಕ ಬಳಕೆದಾರರು ಇನ್‌ಸ್ಟಾಗ್ರಾಮ್‌ ಡೌನ್‌ ಬಗ್ಗೆ ಟ್ವಿಟರ್ X ನಲ್ಲಿ ದೂರು ನೀಡುತ್ತಲೇ ಇದ್ದಾರೆ.

Instagram

ಪ್ರಪಂಚದಾದ್ಯಂತದ ಅನೇಕ ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಮೆಸೆಜ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಮತ್ತು ಕೆಲವು ಫೀಚರ್ಸ್‌ಗಳನ್ನು ಬಳಕೆ ಮಾಡುವಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ. ಭಾರತ ಸೇರಿದಂತೆ ಅಮೆರಿಕ ಮತ್ತು ಬ್ರಿಟನ್‌ ಅನೇಕ ಬಳಕೆದಾರರು ಇನ್‌ಸ್ಟಾಗ್ರಾಮ್‌ ಡೌನ್‌ ಕಿರಿಕಿರಿ ಅನುಭವಿಸುತ್ತಿದ್ದಾರೆ. ಅಲ್ಲದೇ ಸಾವಿರಾರು ಬಳಕೆದಾರರು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. Instagram ಡೌನ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಅನ್ನು ಪ್ರಾರಂಭಿಸಿದೆ.

ಇನ್‌ಸ್ಟಾಗ್ರಾಮ್ ಡೌನ್‌: ನೆಟ್ಟಿಗರಿಂದ ಮೆಮ್ಸ್‌

ಇನ್‌ಸ್ಟಾಗ್ರಾಮ್ ಡೌನ್‌ ಆಗಿರುವ ಕುರಿತು ಅನೇಕ ನೆಟ್ಟಿಗರು X ಪ್ಲಾಟ್‌ಫಾರ್ಮ್ ನಲ್ಲಿ ನಿರಂತರವಾಗಿ ಅನೇಕ ದೂರುಗಳನ್ನು ವರದಿ ಮಾಡುತ್ತಿದ್ದಾರೆ ಅಲ್ಲದೇ ಮೆಮ್ಸ್‌ಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಬಳಕೆದಾರರು ಇನ್‌ಸ್ಟಾಗ್ರಾಮ್ ಡೌನ್‌ ಬಗ್ಗೆ X ಪ್ಲಾಟ್‌ಫಾರ್ಮ್ ನಲ್ಲಿ ಮಾಡಿರುವ ವರದಿಗಳ ಕೆಲವು ಪೋಸ್ಟ್‌ಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಬಳಕೆದಾರರು ಈ ಸಮಸ್ಯೆಯ ಬಗ್ಗೆ ಇಲ್ಲಿ ದೂರು ನೀಡುತ್ತಿದ್ದಾರೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo