BSNL ದೇಶಾದ್ಯಂತ 4G ನೆಟ್‌ವರ್ಕ್ ವಿಸ್ತರಣೆಯೊಂದಿಗೆ ಮನೆ ಬಾಗಿಲಿಗೆ ಸಿಮ್ ವಿತರಣೆ ಸೇವೆ ಲಭ್ಯ!

HIGHLIGHTS

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ 4G ಸೇವೆಯನ್ನು ದೇಶಾದ್ಯಂತ ವಿಸ್ತರಿಸುತ್ತಿದೆ.

ಸರ್ಕಾರದಿಂದ ಬರೋಬ್ಬರಿ 6,982 ಕೋಟಿ ರೂಗಳ ಸರ್ಕಾರಿ ನಿಧಿಯೊಂದಿಗೆ ಪ್ರಾರಂಭಿಸಲು ಸಜ್ಜಾಗಿದೆ.

ದೇಶಾದ್ಯಂತ ಈಗ ಮನೆ ಬಾಗಿಲಿಗೆ BSNL ಸಿಮ್ ವಿತರಣೆ ಸೇವೆಯನ್ನು ಸಹ ಹೆಚ್ಚಿಸಿದ್ದು ತುಂಬ ಲಭ್ಯವಿದೆ.

BSNL ದೇಶಾದ್ಯಂತ 4G ನೆಟ್‌ವರ್ಕ್ ವಿಸ್ತರಣೆಯೊಂದಿಗೆ ಮನೆ ಬಾಗಿಲಿಗೆ ಸಿಮ್ ವಿತರಣೆ ಸೇವೆ ಲಭ್ಯ!

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ದೊಡ್ಡ ಸುದ್ದಿ ತಂದಿದೆ! ಸರ್ಕಾರದಿಂದ ಬರೋಬ್ಬರಿ ₹6,982 ಕೋಟಿಗಳ ಬೃಹತ್ ನಿಧಿಯೊಂದಿಗೆ BSNL ಇಡೀ ದೇಶಾದ್ಯಂತ ತನ್ನ 4G ಸೇವೆಯನ್ನು ವೇಗವಾಗಿ ವಿಸ್ತರಿಸಲು ಸಜ್ಜಾಗಿದೆ. ಇದರ ಜೊತೆಗೆ ಮತ್ತೊಂದು ವಿಶೇಷ ಅಪ್ಡೇಟ್ ಅಂದರೆ ಈಗ ಕಂಪನಿ ಪೂರ್ತಿ ದೇಶಾದ್ಯಂತ ಮನೆ ಬಾಗಿಲಿಗೆ BSNL ಸಿಮ್ ವಿತರಣೆ ಸೇವೆಯನ್ನು ಸಹ ಲಭ್ಯಗೊಳಿಸಿದೆ. ಈ ಮೂಲಕ ಸ್ಟೋರ್‌ಗಳಿಗೆ ಹೋಗಿ ಸಮಯ ವ್ಯರ್ಥ ಮಾಡುವುದರಿಂದ ಗ್ರಾಹಕರಿಗೆ ಮುಕ್ತಿ ಸಿಕ್ಕಿದೆ.

Digit.in Survey
✅ Thank you for completing the survey!

ಸರ್ಕಾರದಿಂದ ಬಿಎಸ್ಎನ್ಎಲ್ಗೆ 4G ಮತ್ತು Q-5G ವಿಸ್ತರಣೆಗೆ ಅನುದಾನ:

BSNL ತನ್ನ 4G ಮತ್ತು ಭವಿಷ್ಯದ 5G ನೆಟ್‌ವರ್ಕ್ ವಿಸ್ತರಣೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರದಿಂದ ಬೃಹತ್ ಆರ್ಥಿಕ ಬೆಂಬಲವನ್ನು ಪಡೆದಿದೆ. ಇತ್ತೀಚೆಗೆ 2025ರಲ್ಲಿ ದೇಶಾದ್ಯಂತ 4G ನೆಟ್‌ವರ್ಕ್ ರೋಲ್‌ಔಟ್‌ಗಾಗಿ ಹೆಚ್ಚುವರಿ ಬಂಡವಾಳ ವೆಚ್ಚದ ಬೆಂಬಲವಾಗಿ ₹6,982 ಕೋಟಿಗಳನ್ನು ಸರ್ಕಾರವು ಅನುಮೋದಿಸಿದೆ ಎಂದು ಸಂಸತ್ತಿಗೆ ತಿಳಿಸಲಾಗಿದೆ. ಇದು BSNL ಕಳೆದ 2019, 2022 ಮತ್ತು 2023ರಲ್ಲಿ ಸಿಕ್ಕಿರುವ ₹3.22 ಲಕ್ಷ ಕೋಟಿಗಳ ಬೆಂಬಲಕ್ಕೆ ಹೆಚ್ಚುವರಿಯಾಗಿದೆ.

BSNL 5G Q-5G service

ಈ ನಿಧಿಯ ಸಹಾಯದಿಂದ BSNL ಈಗಾಗಲೇ ದೇಶಾದ್ಯಂತ 96,300 4G ಸೈಟ್‌ಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ 91,281 ಸೈಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ನಿರಂತರ ಸರ್ಕಾರಿ ಬೆಂಬಲವು BSNL ಅನ್ನು ಮತ್ತೆ ಲಾಭದ ಹಾದಿಗೆ ತರಲು ಮತ್ತು ದೇಶದಾದ್ಯಂತ ತನ್ನ ಸೇವೆಗಳನ್ನು ವಿಸ್ತರಿಸಲು ಸಹಾಯ ಮಾಡುತ್ತಿದೆ.

Also Read: ಭಾರತದಲ್ಲಿ Flipkart Black ಬಿಡುಗಡೆ, ಪೂರ್ತಿ 1 ವರ್ಷಕ್ಕೆ ಉಚಿತ YouTube Premium

ಮನೆ ಬಾಗಿಲಿಗೆ BSNL ಸಿಮ್ ವಿತರಣೆ ಸೇವೆ:

BSNL ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಇನ್ಮುಂದೆ ಹೊಸ ಸಿಮ್ ಕಾರ್ಡ್ ಪಡೆಯಲು ಅಥವಾ ನಂಬರ್ ಪೋರ್ಟ್ ಮಾಡಿಕೊಳ್ಳಲು BSNL ಕಛೇರಿಗೆ ಅಥವಾ ಸ್ಟೋರ್‌ಗೆ ಹೋಗಬೇಕಾದ ಅವಶ್ಯಕತೆ ಇಲ್ಲ. BSNL ಮನೆ ಬಾಗಿಲಿಗೆ ಸಿಮ್ ವಿತರಣೆ ಸೇವೆಯನ್ನು ದೇಶಾದ್ಯಂತ ವಿಸ್ತರಿಸಿದೆ. ಈ ಸೇವೆಯ ಮೂಲಕ ನೀವು ಸುಲಭವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಯಾದರ ನಂತರ ನಿಮ್ಮ ಹೊಸ BSNL ಸಿಮ್ ಕಾರ್ಡ್ ಅನ್ನು ನೇರವಾಗಿ ನಿಮ್ಮ ಮನೆಯ ವಿಳಾಸಕ್ಕೆ ತರಿಸಿಕೊಳ್ಳಬಹುದು. ಇದು ಸಮಯ ಮತ್ತು ಶ್ರಮ ಎರಡನ್ನೂ ಉಳಿಸುವ ಒಂದು ಉತ್ತಮ ಉಪಕ್ರಮವಾಗಿದೆ.

ನೆಟ್‌ವರ್ಕ್ ಅಪ್‌ಗ್ರೇಡ್‌ಗಳ ಜೊತೆಗೆ ಬಿಎಸ್‌ಎನ್‌ಎಲ್ ಹೊಸ ಆನ್‌ಲೈನ್ ಪೋರ್ಟಲ್ ಮೂಲಕ ಸಿಮ್ ಕಾರ್ಡ್‌ಗಳ ಮನೆ ಬಾಗಿಲಿಗೆ ವಿತರಣೆಯನ್ನು ಪ್ರಾರಂಭಿಸಿದೆ. ಗ್ರಾಹಕರು ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸಿಮ್‌ಗಳನ್ನು ಆರ್ಡರ್ ಮಾಡಬಹುದು ಆನ್‌ಲೈನ್‌ನಲ್ಲಿ ಸ್ವಯಂ-ಕೆವೈಸಿ ಪೂರ್ಣಗೊಳಿಸಬಹುದು ಮತ್ತು ತಮ್ಮ ಸಿಮ್‌ಗಳನ್ನು ಮನೆಗೆ ತಲುಪಿಸಬಹುದು. ಹೆಚ್ಚುವರಿಯಾಗಿ ಮೋಸದ ಎಸ್‌ಎಂಎಸ್ ಲಿಂಕ್‌ಗಳಿಂದ ಬಳಕೆದಾರರನ್ನು ರಕ್ಷಿಸಲು ಕಂಪನಿಯು ಭಾರತದಾದ್ಯಂತ ಸ್ಮಿಶಿಂಗ್ ವಿರೋಧಿ ಮತ್ತು ಸ್ಪ್ಯಾಮ್ ವಿರೋಧಿ ರಕ್ಷಣೆಗಳನ್ನು ಜಾರಿಗೆ ತಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo