ಬಿಎಸ್ಎನ್ಎಲ್ (BSNL) ತಮ್ಮ ಗ್ರಾಹಕರಿಗೆ ಅದ್ದೂರಿಯ ಹೋಳಿ ಆಫರ್ ನೀಡುತ್ತಿದೆ.
BSNL Holi Offer 2025 ಅಡಿಯಲ್ಲಿ ಬರೋಬ್ಬರಿ 29 ದಿನಗಳ ಉಚಿತ ವ್ಯಾಲಿಡಿಟಿಯನ್ನು ನೀಡುತ್ತಿದೆ.
ಬಿಎಸ್ಎನ್ಎಲ್ (BSNL) ಹೊಸ 1499 ರೂಗಳ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಗಳು ಇಲ್ಲಿವೆ.
BSNL Holi Offer 2025: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತಮ್ಮ ಗ್ರಾಹಕರಿಗೆ 1499 ರೂಗಳ ರಿಚಾರ್ಜ್ ಯೋಜನೆಯಲ್ಲಿ ವಿಶೇಷ ಹೋಳಿ ಕೊಡುಗೆಯನ್ನು ಘೋಷಿಸಿದೆ. ಬಿಎಸ್ಎನ್ಎಲ್ ಈಗಾಗಲೇ ಅತಿ ಕಡಿಮೆ ಬೆಲೆಗೆ ನೀಡುತ್ತಿದೆ ಈಗ 2025 ವರ್ಷದ ಹೋಳಿ ಹಬ್ಬದ ಪ್ರಯುಕ್ತ ಅದೇ 1499 ರೂಗಳ ಯೋಜನೆಯ ರಿಚಾರ್ಜ್ ಯೋಜನೆಯಲ್ಲಿ 29 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ನೀಡಲು ಮುಂದಾಗಿದೆ. ಈ ಹೊಸ BSNL Holi Offer 2025 ಆಫರ್ ಲಿಮಿಟೆಡ್ ಸಮಯದವರೆಗೆ ನೀಡುತ್ತಿದೆ ಹಾಗಾದ್ರೆ ಈ ಯೋಜನೆಯ ಸಂಪೂರ್ಣ ಪ್ರಯೋಜನಗಳೇನು ತಿಳಿಯಿರಿ.
ಬಿಎಸ್ಎನ್ಎಲ್ ರೂ. 1,499 ಹೋಳಿ ವಿಶೇಷ ಕೊಡುಗೆ (BSNL Holi Offer 2025)
ಈ ವರ್ಷದ ಅಂದ್ರೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಈಗ ಈ 1499 ರೂಗಳ ರಿಚಾರ್ಜ್ ಯೋಜನೆಯಲ್ಲಿ 336 ದಿನಗ ಬದಲಿಗೆ ಬರೋಬ್ಬರಿ 336 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಕಂಪನಿಯು ತನ್ನ ಅತ್ಯಂತ ಜನಪ್ರಿಯ ದೀರ್ಘಾವಧಿಯ ಯೋಜನೆಗೆ ಹೆಚ್ಚುವರಿಯಾಗಿ 29 ದಿನಗಳ ಮಾನ್ಯತೆಯನ್ನು ಸೇರಿಸಿದೆ. 1,499 ರೂ. ಯೋಜನೆಯು ಈಗ 365 ದಿನಗಳ ಮಾನ್ಯತೆಯನ್ನು ನೀಡುತ್ತದೆ ಸಾಮಾನ್ಯವಾಗಿ ಇದರಲ್ಲಿ 336 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ ಎನ್ನುವುದನ್ನು ಗಮನಿಸಬೇಕು. ವಿಶೇಷವಾಗಿ ಈ BSNL Holi Offer 2025 ರಿಚಾರ್ಜ್ ಯೋಜನೆ 31ನೇ ಮಾರ್ಚ 2025 ವರಗೆ ಮಾತ್ರ ಲಭ್ಯವಿರುತ್ತದೆ.
Holi celebrations just got bigger with BSNL’s Holi Dhamaka Offer!
— BSNL India (@BSNLCorporate) March 10, 2025
For just ₹1499, enjoy 365 days (29 Days extra) of uninterrupted connectivity—because celebrations should never be cut short!
BSNL’s long-term offer that keeps you connected beyond the festival!
Offer valid for… pic.twitter.com/Bd6wlVMgon
ವಿಶೇಷವೆಂದರೆ ಈ ಹೆಚ್ಚುವರಿ ಮಾನ್ಯತೆಯ ಅವಧಿಗೆ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ. ಇದಲ್ಲದೆ ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆ ಮತ್ತು ಅನಿಯಮಿತ ಡೇಟಾ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಹೆಚ್ಚುವರಿಯಾಗಿ ಕಂಪನಿ ಸ್ವತಃ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದರ ಬಗ್ಗೆ ಪೋಸ್ಟ್ ಸಹ ಮಾಡಿದೆ. ಇನ್ನೂ ಈ ರಿಚಾರ್ಜ್ ಮಾಡದ ಗ್ರಾಹಕರು ಇಂದೇ ಈ ರಿಚಾರ್ಜ್ ಮಾಡಿಕೊಂಡು 29 ದಿನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಿರಿ.
Also Read: ಸ್ಯಾಮ್‌ಸಂಗ್‌ನಿಂದ 15,000 ರೂಪಾಯಿಗೆ 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದ 5G ಸ್ಮಾರ್ಟ್ಫೋನ್ ಮಾರಾಟ!
ಬಿಎಸ್ಎನ್ಎಲ್ (BSNL) ತನ್ನ ಅಧಿಕೃತ ಎಕ್ಸ್ ಪುಟದಲ್ಲಿ ಈ ವಿಶೇಷ ಕೊಡುಗೆಯನ್ನು ಘೋಷಿಸಿದೆ. ದೀರ್ಘಾವಧಿಯ ಮಾನ್ಯತೆಯ ಅವಧಿಗಳು ಮತ್ತು ಉತ್ತಮ ಡೇಟಾ ಪ್ರಯೋಜನಗಳೊಂದಿಗೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸೇವೆಗಳನ್ನು ಒದಗಿಸಲು ಕಂಪನಿಯ ಹೋಳಿ ಧಮಾಕಾ ಕೊಡುಗೆಯನ್ನು ಪರಿಚಯಿಸಲಾಗಿದೆ. ನೀವು ಕೂಡ BSNL Recharge ಮಾಡಿ ಬಳಸುವ ಬಳಕೆದಾರರಾಗಿದ್ದರೆ ಈ ಅದ್ಭುತ ಕೊಡುಗೆಯ ಲಾಭ ಪಡೆಯಲು ಇದೊಂದು ಉತ್ತಮ ಅವಕಾಶವನ್ನು ನೀಡುತ್ತಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile