ಬಿಎಸ್ಎನ್ಎಲ್ (BSNL) ಬಳಕೆದಾರರಿಗೆ ಕೈಗೆಟಕುವ ಬೆಲೆಗೆ ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿದೆ.
BSNL ಈ ಯೋಜನೆಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಡೇಟಾ ಮತ್ತು SMS ಪ್ರಯೋಜನ ನೀಡುತ್ತಿದೆ.
BSNL ತನ್ನ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಪ್ರಿಪೇಯ್ಡ್ , ಪೋಸ್ಟ್‌ಪೇಯ್ಡ್ ಮತ್ತು ಫೈಬರ್ ಯೋಜನೆ ಹೊಂದಿದೆ.
BSNL 897 Plan Details Explained: ಪ್ರಸ್ತುತ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ತಮ್ಮ ಬಳಕೆದಾರರಿಗೆ ಕೈಗೆಟಕುವ ಬೆಲೆಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ. BSNL ತನ್ನ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ವಿಭಿನ್ನ ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಫೈಬರ್ ರೀಚಾರ್ಜ್ ಯೋಜನೆಗಳನ್ನು ಹೊಂದಿದೆ. ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡುವ ತಲೆನೋವಿನಿಂದ ಜುಜುತ್ತಿದ್ದರೆ 160 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ BSNL Plan ರೀಚಾರ್ಜ್ ಬಗ್ಗೆ ತಿಳಿಯಿರಿ.
BSNL Plan ರೂ. 900 ಅಡಿಯಲ್ಲಿ ಅತ್ಯುತ್ತಮ ರಿಚಾರ್ಜ್ ಪ್ಲಾನ್:
ಈ BSNL ಪ್ಲಾನ್ ರೂ. 900 ಅಡಿಯಲ್ಲಿ ಬರುವ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಆಗಿದ್ದು ಗ್ರಾಹಕರಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಉತ್ತಮ ಡೇಟಾ ಮತ್ತು SMS ಪ್ರಯೋಜನಗಳನ್ನು ನೀಡುತ್ತಿದೆ. ನೀವು ಆಗಾಗ್ಗೆ ರೀಚಾರ್ಜ್ ಮಾಡುವ ಜಗಳವನ್ನು ಬಯಸದಿದ್ದರೆ ಮತ್ತು ಒಂದು ರೀಚಾರ್ಜ್‌ನೊಂದಿಗೆ ಬರೋಬ್ಬರಿ 6 ತಿಂಗಳು ಅಥವಾ 180 ದಿನಗಳ ವ್ಯಾಲಿಡಿಟಿಯೊಂದಿಗೆ ಅರ್ಧ ವರ್ಷಕ್ಕಾಗುವ ಪ್ರಯೋಜನಗಳನ್ನು ನೀಡುವ ಈ ಬಿಎಸ್ಎನ್ಎಲ್ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪರಿಶೀಲಿಸಿ.
ಬಿಎಸ್ಎನ್ಎಲ್ ಬಳಕೆದಾರರು ಇದಕ್ಕಾಗಿ ಪ್ರತಿ ತಿಂಗಳು ಸುಮಾರು ರೂ 150 ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯ ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಬಳಕೆದಾರರು ಉಚಿತ ರಾಷ್ಟ್ರೀಯ ರೋಮಿಂಗ್ ಮತ್ತು ದೇಶಾದ್ಯಂತ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನವನ್ನು ಪಡೆಯುತ್ತಾರೆ. BSNL ಈ ಅತಿ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯು ತಮ್ಮ ಸೆಕೆಂಡರಿ ಸಿಮ್ ಕಾರ್ಡ್ ಅನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಬಯಸುವ ಬಳಕೆದಾರರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
Also Read: BSNL Offers: ಪೂರ್ತಿ 425 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 850GB ಡೇಟಾದ ಮಸ್ತ್ ರಿಚಾರ್ಜ್ ಪ್ಲಾನ್!
BSNL Plans 2025 ಹೆಚ್ಚುವರಿ ಪ್ರಯೋಜನಗಳು:
ಈ ಯೋಜನೆಯ ಮೂಲಕ ಬಳಕೆದಾರರು 6 ತಿಂಗಳವರೆಗೆ ಒಳಬರುವ ಮತ್ತು ಹೊರಹೋಗುವ ಕರೆಗಳ ಜೊತೆಗೆ ಡೇಟಾ ಮತ್ತು SMS ಪ್ರಯೋಜನವನ್ನು ಪಡೆಯುತ್ತಾರೆ. ಬಳಕೆದಾರರು ದೆಹಲಿ ಮತ್ತು ಮುಂಬೈನಲ್ಲಿ MTNL ನೆಟ್‌ವರ್ಕ್‌ನಲ್ಲಿ ಉಚಿತ ಕರೆಯನ್ನು ಸಹ ಪಡೆಯಬಹುದು. ಇದಲ್ಲದೆ ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಯಾವುದೇ ದೈನಂದಿನ ಮಿತಿಯಿಲ್ಲದೆ 90GB ಡೇಟಾವನ್ನು ಪಡೆಯುತ್ತಾರೆ.
ಡೇಟಾ ಖಾಲಿಯಾದ ನಂತರ ಬಳಕೆದಾರರು 40kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್‌ನ ಪ್ರಯೋಜನವನ್ನು ಪಡೆಯುತ್ತಾರೆ. BSNL ಈ ಅತಿ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯಲ್ಲಿ ಲಭ್ಯವಿರುವ ಇತರ ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಬಳಕೆದಾರರು ಪ್ರತಿದಿನ 100 ಉಚಿತ SMS ಪ್ರಯೋಜನವನ್ನು ಪಡೆಯುತ್ತಾರೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile