Vi 5G: ಅತ್ಯುತ್ತಮ ಕನೆಕ್ಟಿವಿಟಿಗಾಗಿ ಈಗ ಬೆಂಗಳೂರಿನಲ್ಲೂ 5G ಸೇವೆ ಆರಂಭಸಿದ ವೊಡಾಫೋನ್ ಐಡಿಯಾ!

HIGHLIGHTS

ವೊಡಾಫೋನ್ ಐಡಿಯಾ (Vi) ಬೆಂಗಳೂರಿನಲ್ಲೂ Vi 5G ಆರಂಭ.

11ನೇ ಜೂನ್ 2025 ರಿಂದ ತನ್ನ Vi 5G ಸೇವೆ ಆರಂಭಿಸುತ್ತಿರುವುದಾಗಿ ಪ್ರಕಟಿಸಿದೆ.

ವೊಡಾಫೋನ್‌ ಐಡಿಯಾದ ಕರ್ನಾಟಕ ವಹಿವಾಟು ಮುಖ್ಯಸ್ಥ ಆನಂದ ದಾನಿ.

Vi 5G: ಅತ್ಯುತ್ತಮ ಕನೆಕ್ಟಿವಿಟಿಗಾಗಿ ಈಗ ಬೆಂಗಳೂರಿನಲ್ಲೂ 5G ಸೇವೆ ಆರಂಭಸಿದ ವೊಡಾಫೋನ್ ಐಡಿಯಾ!

ದೇಶದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ವೊಡಾಫೋನ್ ಐಡಿಯಾ (Vi) ಬೆಂಗಳೂರಿನಲ್ಲಿ ಇಂದಿನಿಂದ 11ನೇ ಜೂನ್ 2025 ರಿಂದ ತನ್ನ Vi 5G ಸೇವೆ ಆರಂಭಿಸುತ್ತಿರುವುದಾಗಿ ಪ್ರಕಟಿಸಿದೆ. ದೇಶದ ತಂತ್ರಜ್ಞಾನ ಕೇಂದ್ರ ಖ್ಯಾತಿಯ ಬೆಂಗಳೂರು ಮಹಾನಗರದ ನಿವಾಸಿಗಳು ಮತ್ತು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆ ವಹಿವಾಟುಗಳು ಈಗ Vi 5G ದೂರಸಂಪರ್ಕ ಜಾಲದಲ್ಲಿ ಉತ್ತಮ ಡೇಟಾ ಸೌಲಭ್ಯ ಮತ್ತು ವರ್ಧಿತ ಸಂಪರ್ಕ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬಹುದು.

ಬೆಂಗಳೂರು ಸೇರಿ 17 ವಲಯಗಳಲ್ಲಿ Vi 5G ಸೇವೆ

ಮುಂಬೈ, ದೆಹಲಿ-ಎನ್‌ಸಿಆರ್‌, ಪಾಟ್ನಾ ಮತ್ತು ಚಂಡಿಗಢದಲ್ಲಿ ವಿ ಇತ್ತೀಚಿಗೆ ಜಾರಿಗೆ ತಂದಿರುವ Vi 5G ಸೌಲಭ್ಯದ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಈ ಸೇವೆ ಪರಿಚಯಿಸಲಾಗಿದೆ. Vi 5G ತರಂಗಾಂತರ ಖರೀದಿಸಿರುವ ತನ್ನ ಎಲ್ಲಾ 17 ದೂರಸಂಪರ್ಕ ಆದ್ಯತಾ ವಲಯಗಳಲ್ಲಿ ಈ ಸೌಲಭ್ಯವನ್ನು ಕಂಪನಿಯು ಹಂತ ಹಂತವಾಗಿ ಜಾರಿಗೆ ತರುತ್ತಿದೆ.

Vi 5G Services available in Bangalore

ಈ ವರ್ಷದ ಆಗಸ್ಟ್ ವೇಳೆಗೆ 5G ಸೌಲಭ್ಯದ ಮೊಬೈಲ್‌ಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಇರುವ Vi ಬಳಕೆದಾರರು ಈಗ Vi 5G ಸೇವೆಗಳನ್ನು ಬಳಸಬಹುದಾಗಿದೆ. ನಗರದ ಡಿಜಿಟಲ್ ಪ್ರೇಮಿ ಗ್ರಾಹಕರಿಗೆ ಅತ್ಯುತ್ತಮ ಬಗೆಯ ಆನ್‌ಲೈನ್ ಅನುಭವಗಳನ್ನು ಒದಗಿಸುವ ರೀತಿಯಲ್ಲಿ ಈ ಸೇವೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Motorola Edge 60 vs Vivo V40e 5G ಈ ಎರಡು ಸ್ಮಾರ್ಟ್ಫೋನ್‌ಗಳಲ್ಲಿ ‌ಯಾವುದು ಬೆಸ್ಟ್?

ವೊಡಾಫೋನ್‌ ಐಡಿಯಾ ಮುಖ್ಯಸ್ಥರ ಮಾತೇನು?

ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ವೊಡಾಫೋನ್‌ ಐಡಿಯಾದ ಕರ್ನಾಟಕ ವಹಿವಾಟು ಮುಖ್ಯಸ್ಥ ಆನಂದ ದಾನಿ ಅವರು”ತಂತ್ರಜ್ಞಾನ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರುವ ನಗರವಾದ ಬೆಂಗಳೂರಿನಲ್ಲಿ ವಿ -ದ 5ಜಿ ಸೇವೆ ಆರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಮುಂದಿನ ಪೀಳಿಗೆಯ 5ಜಿ ಮತ್ತು ವರ್ಧಿತ 4ಜಿ ಸಂಪರ್ಕ ಜಾಲದ ನೆರವಿನಿಂದ ನಮ್ಮ ಬಳಕೆದಾರರಿಗೆ ಹೆಚ್ಚುವರಿ ಅನುಭವ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಸೇವೆ ಆರಂಭಿಸಿದ ಮಾರುಕಟ್ಟೆಗಳಲ್ಲಿ ನಮಗೆ ದೊರೆತಿರುವ ಉತ್ತೇಜಕರ ಪ್ರತಿಕ್ರಿಯೆ ಮತ್ತು ಸದೃಢ ಕಾರ್ಯಕ್ಷಮತೆಯಿಂದ ಪ್ರೇರಿತರಾಗಿರುವ ನಾವು, ಹೆಚ್ಚುತ್ತಿರುವ ಬೇಡಿಕೆ ಮತ್ತು 5ಜಿ ಮೊಬೈಲ್‌ಗಳ ಬಳಕೆ ಹೆಚ್ಚಳಕ್ಕೆ ಅನುಗುಣವಾಗಿ ನಮ್ಮ 5ಜಿ ಹೆಜ್ಜೆ ಗುರುತುಗಳನ್ನು ವಿಸ್ತರಿಸಲು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo