8,999 ರೂಪಾಯಿಗಳ 5000mAh ಬ್ಯಾಟರಿಯೊಂದಿಗಿನ ಹೊಸ Redmi 9 ಸೆಲ್

HIGHLIGHTS

Xiaomi's Redmi 9 ಸ್ಮಾರ್ಟ್ಫೋನ್ ಅನ್ನು ಮತ್ತೊಮ್ಮೆ ಮಾರಾಟಕ್ಕೆ ಲಭ್ಯಗೊಳಿಸಿದೆ.

Redmi 9 ಸ್ಮಾರ್ಟ್‌ಫೋನ್ 6.53 ಇಂಚಿನ HD+ ಡಿಸ್ಪ್ಲೇ ಹೊಂದಿದ್ದು ಇದು 720x1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.

Redmi 9 ಫೋನ್ 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಪಡೆಯಲಿದೆ.

8,999 ರೂಪಾಯಿಗಳ 5000mAh ಬ್ಯಾಟರಿಯೊಂದಿಗಿನ ಹೊಸ Redmi 9 ಸೆಲ್

ಸ್ಮಾರ್ಟ್ಫೋನ್ ತಯಾರಕ Xiaomi's Redmi 9 ಸ್ಮಾರ್ಟ್ಫೋನ್ ಅನ್ನು ಮತ್ತೊಮ್ಮೆ ಮಾರಾಟಕ್ಕೆ ಲಭ್ಯಗೊಳಿಸಿದೆ. ಇದನ್ನು ಇಂದು ಮಧ್ಯಾಹ್ನ 12 ರಿಂದ ಅಮೆಜಾನ್ ಇಂಡಿಯಾ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮಿ.ಕಾಂನಿಂದ ಖರೀದಿಸಬಹುದು. ಫೋನ್ 4GB RAM ಮತ್ತು 64GB ಸ್ಟೋರೇಜ್ ಮತ್ತು 4GB RAM ಮತ್ತು 128GB ಸ್ಟೋರೇಜ್ ಎಂಬ ಎರಡು ರೂಪಾಂತರಗಳಲ್ಲಿ ಬರಲಿದೆ.

Digit.in Survey
✅ Thank you for completing the survey!

Redmi 9 ಬೆಲೆ ಮತ್ತು ಕೊಡುಗೆ

Redmi 9 ಫೋನ್‌ನ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 8,999 ರೂಗಳು ಮತ್ತು 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 9,999 ರೂಗಳಾಗಿವೆ. ಈ ಸ್ಮಾರ್ಟ್‌ಫೋನ್ ಸ್ಪೋರ್ಟಿ ಕಿತ್ತಳೆ, ಸ್ಕೈ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. Redmi 9 ಸ್ಮಾರ್ಟ್‌ಫೋನ್ ಅನ್ನು 3000 ರೂಗಳ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು. ಅಲ್ಲದೆ ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಇಎಂಐ ವಹಿವಾಟುಗಳಿಗೆ 5% ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ ಅಮೆಜಾನ್ ಪೇ ಯುಪಿಐಗೆ ಶೇಕಡಾ 10% ರಷ್ಟು ರಿಯಾಯಿತಿ ಸಿಗಲಿದೆ.

Redmi 9 ವಿವರಣೆಗಳು

Redmi 9 ಸ್ಮಾರ್ಟ್‌ಫೋನ್ 6.53 ಇಂಚಿನ HD+ ಡಿಸ್ಪ್ಲೇ ಹೊಂದಿದ್ದು ಇದು 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ MediaTek Helio G35 ಪ್ರೊಸೆಸರ್ ಇದೆ. SD ಕಾರ್ಡ್ ಸಹಾಯದಿಂದ ಇದರ ಇಂಟರ್ನಲ್ ಸ್ಟೋರೇಜ್ 512GB ಹೆಚ್ಚಿಸಬಹುದು. ಅದೇ ಸಮಯದಲ್ಲಿ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 10 ಆಧಾರಿತ MIUI 12 ನಲ್ಲಿ ಕಾರ್ಯನಿರ್ವಹಿಸುತ್ತದೆ.

Redmi 9 ಕ್ಯಾಮೆರಾ ಮತ್ತು ಬ್ಯಾಟರಿ

Redmi 9 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಪಡೆಯಲಿದ್ದು ಮೊದಲನೆಯದು 13MP ಪ್ರಾಥಮಿಕ ಸಂವೇದಕ ಮತ್ತು ಎರಡನೆಯದು 2MP ಸಂವೇದಕವಾಗಿದೆ. ಅಲ್ಲದೆ ಈ ಫೋನ್‌ನ ಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಫೋನ್ 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಪಡೆಯಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನಲ್ಲಿ ಕನೆಕ್ಟಿವಿಟಿ ವೈಶಿಷ್ಟ್ಯಗಳಾದ 4G ವೋಲ್ಟಿಇ, ವೈ-ಫೈ, ಜಿಪಿಎಸ್, ಬ್ಲೂಟೂತ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಒದಗಿಸಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo