200MP ಕ್ಯಾಮೆರಾ ಇರುವ Vivo X200 Pro ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಸಖತ್ ಇಳಿಕೆ!
ವಿವೋ X200 ಪ್ರೊ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 200MP ಸೆನ್ಸಾರ್‌ನಲ್ಲಿದೆ
ವಿವೋ X200 ಪ್ರೊ ಫೋನ್ MediaTek Dimensity 9400 ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ
ವಿವೋ X200 ಪ್ರೊ ಟೈಟಾನ್ ಗ್ರೇ, ಕಾಸ್ಮೋಸ್ ಬ್ಲ್ಯಾಕ್ ಹಾಗೂ ನ್ಯಾಚುರಲ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಲಭ್ಯ
ಮೊಬೈಲ್ ಪ್ರಿಯರೇ ಸದ್ಯ ವಿವೋ ಕಂಪನಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಖರೀದಿಸಲು ಪ್ಲಾನ್ ಮಾಡಿದ್ದರೆ ಇದುವೇ ನಿಮಗೆ ಬೆಸ್ಟ್ ಟೈಮ್. ಹೌದು, ಜನಪ್ರಿಯ ಇ ಕಾಮರ್ಸ್ ಅಮೆಜಾನ್ ತಾಣದಲ್ಲಿ Vivo X200 Pro ಮೊಬೈಲ್‌ಗೆ ಸಖತ್ ಡಿಸ್ಕೌಂಟ್ ಪಡೆದುಕೊಂಡಿದೆ. ಇದಲ್ಲದೇ ಬ್ಯಾಂಕ್ ಆಫರ್ ಪಡೆದುಕೊಂಡು ಖರೀದಿಸಿದರೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದಹಾಗೆ ವಿವೋ X200 ಪ್ರೊ ಮೊಬೈಲ್ MediaTek Dimensity 9400 ಚಿಪ್‌ಸೆಟ್ ಪ್ರೊಸೆಸರ್ ಬೆಂಬಲದಲ್ಲಿ ಕೆಲಸ ಮಾಡಲಿದೆ ಹಾಗೂ 90W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ 200MP ಕ್ಯಾಮೆರಾ ಸಪೋರ್ಟ್ ಸಹ ಪಡೆದುಕೊಂಡಿದೆ. ಹಾಗಾದರೆ ಅಮೆಜಾನ್ ವೆಬ್‌ಸೈಟ್‌ನಲ್ಲಿ ವಿವೋ X200 ಪ್ರೊ ಫೋನಿಗೆ ಲಭ್ಯ ಇರುವ ಆಫರ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : ನಾಳೆ iQOO 15R ಸ್ಮಾರ್ಟ್‌ಫೋನ್ ಸೇಲ್ ಪ್ರಾರಂಭ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
Vivo X200 Pro ಮೊಬೈಲ್‌ಗೆ ಬಿಗ್ ರಿಯಾಯಿತಿ
ಜನಪ್ರಿಯ ವಿವೋ ಸಂಸ್ಥೆಯ ವಿವೋ X200 ಪ್ರೊ ಸ್ಮಾರ್ಟ್‌ಫೋನ್ ಪ್ರಸ್ತುತ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದಿದೆ. ಈ ಸ್ಮಾರ್ಟ್‌ಫೋನ್ 16GB RAM + 512GB ವೇರಿಯಂಟ್ ಬೆಲೆ 1,01,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 79,999 ರೂಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಫೋನ್ ಟೈಟಾನ್ ಗ್ರೇ, ಕಾಸ್ಮೋಸ್ ಬ್ಲ್ಯಾಕ್ ಹಾಗೂ ನ್ಯಾಚುರಲ್ ಗ್ರೀನ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

ವಿವೋ X200 ಪ್ರೊ ಫೋನ್ ಫೀಚರ್ಸ್ ಹೀಗಿವೆ
ವಿವೋ X200 ಪ್ರೊ ಮೊಬೈಲ್ 6.78 ಇಂಚಿನ LTPO AMOLED ಪ್ಯಾನೆಲ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಮೊಬೈಲ್ MediaTek Dimensity 9400 ಚಿಪ್‌ಸೆಟ್ ಪ್ರೊಸೆಸರ್ ಬೆಂಬಲದಲ್ಲಿ ಕೆಲಸ ಮಾಡಲಿದೆ ಹಾಗೂ ಆಂಡ್ರಾಯ್ಡ್ 16 ಓಎಸ್ ಸಪೋರ್ಟ್ ಒಳಗೊಂಡಿದೆ. ಇದಕ್ಕೆ ಅನುಗುಣವಾಗಿ 16GB RAM + 256GB ಸ್ಟೋರೇಜ್ ಆಯ್ಕೆ ಹೊಂದಿದೆ. ಇನ್ನು ಈ ಮೊಬೈಲ್ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ.
ಹಾಗೆಯೇ ವಿವೋ X200 ಪ್ರೊ ಮೊಬೈಲ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 200MP ಟೆಲಿಫೋಟೋ ಲೆನ್ಸ್ ಸೆನ್ಸಾರ್‌ನಲ್ಲಿ ಇದೆ. ಉಳಿದೆರಡು ಕ್ಯಾಮೆರಾಗಳು ಕ್ರಮವಾಗಿ 50MP ಅಲ್ಟ್ರಾವೈಡ್ ಲೆನ್ಸ್ ಮತ್ತು 50MP ಲೆನ್ಸ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇವೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಸ್ಮಾರ್ಟ್‌ಫೋನ್ 32MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಇದು 3D ಅಲ್ಟ್ರಾಸಾನಿಕ್ ಸಿಂಗಲ್-ಪಾಯಿಂಟ್ ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ IP68 ಮತ್ತು IP69 ರೇಟಿಂಗ್ ಬೆಂಬಲ ಸಹ ಒಳಗೊಂಡಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile



