Vivo V15 Pro ಸ್ಮಾರ್ಟ್ಫೋನಿನ ನೀವು ತಿಳಿದುಕೊಳ್ಳಲೇಬೇಕಾದ ಟಾಪ್ 5 ಫೀಚರ್ಗಳು – 2019

Vivo V15 Pro ಸ್ಮಾರ್ಟ್ಫೋನಿನ ನೀವು ತಿಳಿದುಕೊಳ್ಳಲೇಬೇಕಾದ ಟಾಪ್ 5 ಫೀಚರ್ಗಳು – 2019
HIGHLIGHTS

ಸ್ನ್ಯಾಪ್ಡ್ರಾಗನ್ 675 ಚಿಪ್ಸೆಟ್ ಜೋತೆಗೆ ಬರುವ ಭಾರತದ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಇದಾಗಿದೆ.

Vivo V15 Pro ಸ್ಮಾರ್ಟ್ಫೋನ್ ಇಂದಿನ ಎಲ್ಲಾ ಫೋನ್ಗಳಿಗೆ ಹೋಲಿಸಿ ನೋಡಿದರೆ ಇದರ ಪ್ರತಿಯೊಂದು ಫೀಚರ್ಗಳು ಹೊಸದಾಗಿವೆ. ಇದರ ಡಿಸ್ಪ್ಲೇ, ಇದರ ಪ್ರೊಸೆಸರ್, ಇದರ ಡಿಸೈನ್ ಮತ್ತು ಇದರ ಕ್ಯಾಮೆರಾ ನಿರ್ಮಾಣ ಹಾಗು ಇದರ ಪರ್ಫಾಮೆನ್ಸ್ ಈ ರೀತಿಯ ಹಲವಾರು ಫೀಚರ್ಗಳನ್ನು Vivo V15 Pro ಫೋನಲ್ಲಿ ನೋಡಲು ಲಭ್ಯವಾಗುತ್ತದೆ. ವಿವೋ ತನ್ನ ಮುಂಬರಲಿರುವ ಎಲ್ಲ ಹೊಸ ಫೋನ್ಗಳಲ್ಲಿ ಹೊಸ ಮತ್ತು ಅದ್ದೂರಿಯ ಫೀಚರ್ಗಳನ್ನು ನೀಡಲು ಪ್ರಯತ್ನಿಸುತ್ತಿದೆ. 

ಮೊದಲಿಗೆ ಇದರ 32MP ಪಾಪ್ ಅಪ್ ಸೆಲ್ಫಿ ಕ್ಯಾಮೆರಾ. ಕಳೆದ ವರ್ಷದ ನೀವು ಈ ರೀತಿಯ ಕ್ಯಾಮೆರಾವನ್ನು Vivo NEX ದಲ್ಲಿ ನೋಡಿರಬವುದು. ಈ ರೀತಿಯ ಪಾಪ್ ಅಪ್ ಕ್ಯಾಮೆರಾವನ್ನು ನಾಚ್ ಡಿಸ್ಪ್ಲೇಯ ಟ್ರೆಂಡ್ ತೆಗೆದು ಫುಲ್ ವ್ಯೂ ಡಿಸ್ಪ್ಲೇಯ ಅನುಭವ ಕಡಿಮೆ ಬೇಝಲ್  ನೀಡುವುದಕ್ಕಾಗಿ ಈ ವಲಯದಲ್ಲಿ ಕಾಲಿಟ್ಟಿದೆ. ಇದರ 32MP ಸ್ಯಾಮ್ಸಂಗ್ ಸೆನ್ಸರ್ ಪಾಪ್ ಅಪ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಆದರೆ ಇಷ್ಟು ಬೇಗ ಬಜೆಟ್ ರೇಂಜಲ್ಲಿ ಈ ರೀತಿಯ ಫೋನ್ಗಳು ಬರೋಲ್ಲ. 

ಎರಡನೇಯದಾಗಿ ಇದರ ಡಿಸ್ಪ್ಲೇ. ಇದು ನಿಮಗೆ ಬೇಝಲ್ ಲೆಸ್ ಡಿಸೈನ್ ಹೊಂದಿದ್ದು ಇದರಲ್ಲಿ ನಿಮಗೆ ಯಾವುದೇ ರೀತಿಯ ಡಿಸ್ಪ್ಲೇ ನಾಚ್ ಲಭ್ಯವಿಲ್ಲ. Vivo V15 Pro ಸಾಧ್ಯವಾದ ಮಟ್ಟಿಗೆ ಫೋನಿನ ಅಂಚುಗಳನ್ನು ವಿಸ್ತರಿಸಿ 6.39 ಇಂಚಿನ ಸೂಪರ್ ಅಮೊಲೈಡ್ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ಅತಿ ಕಡಿಮೆ ಮಟ್ಟದ ಬೇಝಲ್ಗಳನ್ನು ನೋಡಬವುದು. ಏಕೆಂದರೆ ಇದು ನಿಮಗೆ 91.64% ಸ್ಕ್ರೀನ್ ಟು ಬಾಡಿ ರೇಷುವನ್ನು ನೀಡುತ್ತದೆ. 

ಇದರ ಮೂರನೇ ಮತ್ತು ಹೆಚ್ಚು ಕುತೂಹಲಕಾರಿ ಫೀಚರ್ ಅಂದ್ರೆ ಇದರ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್. ವಿವೋ 2019 ರಲ್ಲಿ ಟ್ರೆಂಡ್ ಆಗಿರುವ ಈ ಫೀಚರ್ಗಳಲ್ಲಿ ಒಂದನ್ನು ಇದರಲ್ಲಿ ಅಳವಡಿಸಿದೆ. ಇದನ್ನು ವಿವೊ ಅವರೇ ಮೊದಲ ಬಾರಿಗೆ ಹೊರ ತಂದಿದ್ದರು ಮತ್ತು ಇದು ವಿವೋನ 5ನೇ ಜನರೇಷನ್ ಟೆಕ್ನಾಲಜಿಯಾಗಿದ್ದು 0.3 ಸೆಕೆಂಡ್ಗಳಲ್ಲಿ ಅನ್ಲಾಕ್ ಮಾಡಬುವುದು. ಇದನ್ನು ಸ್ಯಾಮ್ಸಂಗ್ ಸೂಪರ್ ಅಮೊಲೈಡ್ ಡಿಸ್ಪ್ಲೇಯಲ್ಲಿ ನೀಡಲಾಗಿದೆ.
 
ನಾಲ್ಕನೇಯದಾಗಿ ಈವರೆಗೆ ನಾವು ನೋಡಿದ ಎಲ್ಲ ಫೀಚರ್ಗಳು ಹೊಸದಾಗಿವೆ. ಅಲ್ಲದೆ ಈ ಫೋನಲ್ಲಿನ ಪ್ರೊಸೆಸರ್. Vivo V15 Pro ಫೋನಲ್ಲಿ ಸ್ನ್ಯಾಪ್ಡ್ರಾಗನ್ 675 ಚಿಪ್ಸೆಟ್ ಅನ್ನು ಹೊಂದಿದೆ. ಈ ಚಿಪ್ಸೆಟ್ ಜೋತೆಗೆ ಬರುವ ಭಾರತದ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಇದಾಗಿದ್ದು ಉತ್ತಮವಾದ ಬೂಸ್ಟ್ ಅನ್ನು ಸಹ ಈ ಪ್ರೊಸೆಸರ್ ಹೊಂದಿದೆ. ಸದ್ಯಕ್ಕೆ ನಾವು ಈಗಾಗಲೇ ಇದರ ಪರ್ಫಾಮೇನ್ಸ್ ಬಗ್ಗೆ ಟೆಸ್ಟ್ ಮಾಡ್ತಾ ಇದ್ದಿವಿ. ಇದರ 675 ಚಿಪ್ಸೆಟ್ ಪ್ರೊಸೆಸರ್ ಈಗಾಗಲೇ ಲಭ್ಯವಿರುವ ಕಂಪ್ಯೂಟೆಟರ್ಗಳ ಮುಂದೆ ಹೇಗೆ ನಿಲ್ಲುತ್ತದೆಂದು ನೋಡಬೇಕಿದೆ.    

ಕೊನೆಯದಾಗಿ ಇದರ ಕ್ಯಾಮೆರಾ ಇದರ ಬಗ್ಗೆ ನೀವೀಗಾಗಲೇ ನೋಡಿರುವಂತೆ ನಿಮಗೆ ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಹೊಂದಿದೆ. ಇದರಲ್ಲಿ ಒಂದು ನಿಮಗೆ 48MP ಕ್ಯಾಮೆರಾ ಇದು ಹೆಚ್ಚು ಪರಿಣಾಮಕಾರಿಯಾಗಿ 12MP ಶಾಟ್ಗಳನ್ನು ಸೆರೆ ಹಿಡಿಯುತ್ತದೆ. ಮತ್ತೇರಡಲ್ಲಿ 8MP ನಿಮಗೆ ವೈಡ್ ಆಂಗಲ್ ನೀಡಿದರೆ 5MP ನಿಮಗೆ ಡೆಪ್ತ್ ಸೆನ್ಸರ್ ಸಪೋರ್ಟ್ ಮಾಡುತ್ತದೆ. ಅಲ್ಲದೆ ಈ ಕ್ಯಾಮರಾದ ಸಾಲಿನಲ್ಲಿ ನಿಮಗೆ LED ಫ್ಲಾಶ್ ಸಹ ನೀಡಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo