6500mAh ಬ್ಯಾಟರಿಯ Vivo T4x 5G ಇಂದು ಮೊದಲ ಮಾರಾಟ! ಆಫರ್ ಬೆಲೆ ಮತ್ತು ಫೀಚರ್ಗಳಿಗೆ ಜನ ಫಿದಾ!
Vivo T4x 5G ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12:00 ಗಂಟೆಗೆ ಮೊದಲ ಬಾರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ
Vivo T4x 5G ಸ್ಮಾರ್ಟ್‌ಫೋನ್ 6500mAh ಬ್ಯಾಟರಿಯೊಂದಿಗೆ 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
Vivo T4x 5G ಸ್ಮಾರ್ಟ್‌ಫೋನ್ ಬ್ಯಾಂಕ್ ರಿಯಾಯಿತಿಯೊಂದಿಗೆ ಆರಂಭಿಕ ಕೇವಲ 12,999 ರೂಗಳಿಗೆ ಖರೀದಿಸಬಹುದು
Vivo T4x 5G Goes Live Today: ಭಾರತದಲ್ಲಿ ಕಳೆದ ವಾರ ಬಿಡುಗಡೆಯಾದ Vivo T4x 5G ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12:00 ಗಂಟೆಗೆ ಮೊದಲ ಬಾರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಈ Vivo T4x 5G ಸ್ಮಾರ್ಟ್‌ಫೋನ್ ಕೈಗೆಟುಕುವ ಬೆಲೆಯಲ್ಲಿ ಪ್ರಬಲ ವಿಶೇಷಣಗಳೊಂದಿಗೆ ಬಿಡುಗಡೆ ಮಾಡಲಾಗಿದೆ. Vivo T4x 5G ಸ್ಮಾರ್ಟ್‌ಫೋನ್‌ನ ಮೊದಲ ಮಾರಾಟದ ಸಮಯದಲ್ಲಿ ಹಲವು ಜಬರ್ದಸ್ತ್ ಕೊಡುಗೆಗಳನ್ನು ಸಹ ಕಂಪನಿ ನೀಡುತ್ತಿದೆ. ಈ Vivo T4x 5G ಫೋನ್‌ನಲ್ಲಿ ಲಭ್ಯವಿರುವ ಆಫರ್ ಬೆಲೆಯೊಂದಿಗೆ ಇದರ ಒಂದಿಷ್ಟು ಇಂಟ್ರೆಸ್ಟಿಂಗ್ ಫೀಚರ್ಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
SurveyVivo T4x 5G ಸ್ಮಾರ್ಟ್‌ಫೋನ್ ಆಫರ್ ಬೆಲೆ ಮತ್ತು ಲಭ್ಯತೆ
ಈ Vivo T4x 5G ಸ್ಮಾರ್ಟ್‌ಫೋನ್ ಮಾರಾಟ ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದ್ದು ಮಾರಾಟದಲ್ಲಿ ಕಂಪನಿಯು 1000 ರೂ.ಗಳ ತಕ್ಷಣದ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ಅಲ್ಲದೆ ಈ ವಿವೋ ಫೋನ್‌ಗೆ HDFC ಬ್ಯಾಂಕ್, SBI ಮತ್ತು Axis ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸಿದರೆ 1000 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ಈ ರಿಯಾಯಿತಿಯೊಂದಿಗೆ ಈ ಮೂಲಕ ಆರಂಭಿಕ ಕೇವಲ 12,999 ರೂಗಳಿಗೆ ಖರೀದಿಸಬಹುದು. ಈ ವಿವೋ ಫೋನ್‌ನಲ್ಲಿ ವಿನಿಮಯ ಬೋನಸ್ ಪ್ರಯೋಜನವೂ ಲಭ್ಯವಿದೆ. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Vivo T4x 5G ಸ್ಮಾರ್ಟ್‌ಫೋನ್ ಫೀಚರ್ಗಳೇನು?
Vivo T4x 5G ಸ್ಮಾರ್ಟ್‌ಫೋನ್ 6.72-ಇಂಚಿನ ಪೂರ್ಣ HD+ LCD ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ, 1050 nits ಗರಿಷ್ಠ ಹೊಳಪು ಹೊಂದಿದೆ ಮತ್ತು ಈ ಡಿಸ್ಪ್ಲೇ TÜV ರೈನ್‌ಲ್ಯಾಂಡ್ ಪ್ರಮಾಣೀಕರಿಸಲ್ಪಟ್ಟಿದೆ. ಈ ವಿವೋ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ FuntouchOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಕ್ಯಾಮೆರಾ ಜೊತೆಗೆ 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು LED ಫ್ಲ್ಯಾಷ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
Vivo T4x 5G ಸ್ಮಾರ್ಟ್‌ಫೋನ್ 6500mAh ಬ್ಯಾಟರಿಯೊಂದಿಗೆ 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ವಿವೋ ಫೋನ್‌ನ ಬಾಳಿಕೆಯ ಬಗ್ಗೆ ಹೇಳುವುದಾದರೆ ಇದು MIL-STD-810H ಮಿಲಿಟರಿ ದರ್ಜೆಯ ಬಾಳಿಕೆ ಪ್ರಮಾಣೀಕರಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನ್ IP64 ರೇಟಿಂಗ್‌ನೊಂದಿಗೆ ಬರುತ್ತದೆ ಮತ್ತು ಸಂಪರ್ಕಕ್ಕಾಗಿ 5G, 4G VoLTE, Wi-Fi 6, ಬ್ಲೂಟೂತ್ 5.4, GPS, GLONASS, Beidou ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile