Vivo T3 Pro 5G ಫೋನ್ 50MP ಕ್ಯಾಮೆರಾದೊಂದಿಗೆ ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು ತಿಳಿಯಿರಿ
ಭಾರತದಲ್ಲಿ ವಿವೋ ಕಂಪನಿ ಹೊಸ T ಸರಣಿಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ.
Vivo T3 Pro 5G ಫೋನ್ 50MP ಕ್ಯಾಮೆರಾದೊಂದಿಗೆ 5500mAh ಬ್ಯಾಟರೀಯನ್ನು ಹೊಂದಿದೆ.
Vivo T3 Pro 5G ಫೋನ್ ಇದರ 8GB RAM ಮತ್ತು 128GB ಸ್ಟೋರೇಜ್ 24,999 ರೂಗಳಿಂದ ಆರಂಭ.
ಭಾರತದಲ್ಲಿ ವಿವೋ ಕಂಪನಿ ಹೊಸ T ಸರಣಿಯಲ್ಲಿ ತನ್ನ ಹೊಸ Vivo T3 Pro 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ 50MP ಕ್ಯಾಮೆರಾದೊಂದಿಗೆ 5500mAh ಬ್ಯಾಟರಿ ಇದರ ಹೈಲೈಟ್ ಅಂದರೆ ತಪ್ಪಿಲ್ಲ. ಅಲ್ಲದೆ Vivo T3 Pro 5G ಸ್ಮಾರ್ಟ್ಫೋನ್ ಇದರ 8GB RAM ಮತ್ತು 128GB ಸ್ಟೋರೇಜ್ 24,999 ರೂಗಳಿಂದ ಆರಂಭವಾಗುತ್ತದೆ. ಒಂದು ವೇಳೆ ನೀವು ಈ Vivo T3 Pro 5G ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆಗೆ ಇದರ ಆಫರ್ ಬೆಲೆಯೊಂದಿಗೆ ಫೀಚರ್ ಮತ್ತು ವಿಶೇಷಣಗಳೇನು ಎಲ್ಲವನ್ನು ತಿಳಿಯಿರಿ.
Surveyಇದನ್ನೂ ಓದಿ: 70 ದಿನಗಳ ವ್ಯಾಲಿಡಿಟಿ ಜೊತೆಗೆ ಅನಿಯಮಿತ ಕರೆ ಮತ್ತು ಡೇಟಾ ನೀಡುವ BSNL ಕೇವಲ 200 ರೂಗಳಿಗೆ ಲಭ್ಯ!
Vivo T3 Pro 5G ಸ್ಮಾರ್ಟ್ಫೋನ್ ಫೀಚರ್ಗಳೇನು?
ಭಾರತದಲ್ಲಿ ಬಿಡುಗಡೆಯಾಗಿರುವ ಈ ಹ್ಯಾಂಡ್‌ಸೆಟ್ 6.77 ಇಂಚಿನ ಬಾಗಿದ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಡಿಸ್ಪ್ಲೇ 120Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಹೊಳಪು ಮತ್ತು HDR 10+ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ನಿಮಗೆ T3 Pro 5G ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಕ್ಯಾಮೆರಾ ಸೆಟಪ್ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ 16MP ಸೆಲ್ಫಿ ಶೂಟರ್ ಇದೆ. ನೀವು AI ಫೋಟೋ ವರ್ಧನೆ ಮತ್ತು AI ಅಳಿಸುವಿಕೆಯಂತಹ AI ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ.
Make the night blurry, not your videos! Capture smooth, steady videos with the new #vivoT3Pro 5G’s Sony IMX882 OIS camera with anti-shake technology. Are you ready to #GetSetTurbo because sale starts Sept 3, 12 PM!
— vivo India (@Vivo_India) August 27, 2024
Click the link below to know more.https://t.co/gDCtPpOs5E pic.twitter.com/pJ16cOCvvz
ಈ Vivo T3 Pro 5G ಸ್ಮಾರ್ಟ್‌ಫೋನ್ Qualcomm Snapdragon 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದಲ್ಲದೆ Vivo T3 Pro 5G ಸ್ಮಾರ್ಟ್ಫೋನ್ 80W ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇತ್ತೀಚಿನ Vivo ಸ್ಮಾರ್ಟ್‌ಫೋನ್‌ನ ಇತರ ಗಮನಾರ್ಹ ವೈಶಿಷ್ಟ್ಯಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್, ಆಂಡ್ರಾಯ್ಡ್ 14 ಆಧಾರಿತ FunTouch OS 14, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಅಲ್ಟ್ರಾ ಗೇಮ್ ಮೋಡ್, ವೆಟ್ ಟಚ್ ಟೆಕ್ನಾಲಜಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ.
ಭಾರತದಲ್ಲಿ Vivo T3 Pro 5G ಬೆಲೆ ಮತ್ತು ಲಭ್ಯತೆಯ ಮಾಹಿತಿ
Vivo T3 Pro 5G ಒಟ್ಟಾರೆಯಾಗಿ ಎರಡು ಸ್ಯಾಂಡ್‌ಸ್ಟೋನ್ ಆರೆಂಜ್ ಮತ್ತು ಎಮರಾಲ್ಡ್ ಗ್ರೀನ್ ಎಂಬ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇದರಲ್ಲಿನ ಸ್ಯಾಂಡ್‌ಸ್ಟೋನ್ ಆರೆಂಜ್ ಆಯ್ಕೆಯು ವೆಜಿಟೇರಿನ್ ಸ್ಕಿನ್ ಫಿನಿಷ್ ಹೊಂದಿದ್ದರೆ ಎಮರಾಲ್ಡ್ ಗ್ರೀನ್ ಆಯ್ಕೆಯು ಮ್ಯಾಟ್ ಫಿನಿಶ್‌ನೊಂದಿಗೆ ಬರುತ್ತದೆ.

ಈ Vivo T3 Pro 5G ಪ್ರಸ್ತುತ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಅವೆಂದರೆ 8GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು 24,999 ರೂಗಳಿಗೆ ಬಿಡುಗಡೆಯಾಗಿದ್ದು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು 26,999 ರೂಗಳಿಗೆ ಬಿಡುಗಡೆಯಾಗಿದೆ. ಈ Vivo T3 Pro ಸ್ಮಾರ್ಟ್ಫೋನ್ ಮಾರಾಟವು ಸೆಪ್ಟೆಂಬರ್ 3 ರಿಂದ ಫ್ಲಿಪ್ಕಾರ್ಟ್ ಮೂಲಕ ಪ್ರಾರಂಭವಾಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile