Tecno Pop 7 Pro ಭಾರತದಲ್ಲಿ ಫೆಬ್ರವರಿ 16 ರಂದು ತನ್ನ ಟಾಪ್ 7 ಫೀಚರ್‌ಗಳನ್ನು ಘೋಷಿಸಲು ಸಜ್ಜಾಗಿದೆ!

HIGHLIGHTS

ಭಾರತದಲ್ಲಿ ಫೆಬ್ರವರಿ 16 ರಂದು Tecno Pop 7 Pro ಬಿಡುಗಡೆಯಾಗಲಿದೆ.

ಆಫ್ರಿಕಾದಲ್ಲಿ ಈಗಾಗಲೇ Tecno ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ.

ಆಫ್ರಿಕಾದಲ್ಲಿ ಬಿಡುಗಡೆಯಾದ Pop 7 Pro ಫೀಚರ್‌ಗಳು ಇಲ್ಲಿವೆ.

Tecno Pop 7 Pro ಭಾರತದಲ್ಲಿ ಫೆಬ್ರವರಿ 16 ರಂದು ತನ್ನ ಟಾಪ್ 7 ಫೀಚರ್‌ಗಳನ್ನು ಘೋಷಿಸಲು ಸಜ್ಜಾಗಿದೆ!

ಭಾರತದಲ್ಲಿ Tecno Pop 7 Pro 16ನೇ ಫೆಬ್ರವರಿ 2023 ರಂದು ಬಿಡುಗಡೆಯಾಗುತ್ತಿದೆ. ತನ್ನ ಟ್ವಿಟರ್ ಖಾತೆಯಲ್ಲಿ ಟೆಕ್ನೋ ಇಂಡಿಯಾ ಫೋನ್ ಬಿಡುಗಡೆಯನ್ನು ಅಣುಕಿಸಲು ಪ್ರಾರಂಭಿಸಿದೆ. ಆದರೆ ಇನ್ನು ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಏಕೈಕ ಸುಳಿವು ಎಂದರೆ ಈ ತಿಂಗಳ ಆರಂಭದಲ್ಲಿ ಇದೇ ಹೆಸರಿನ ಸ್ಮಾರ್ಟ್ಫೋನ್ ಅನ್ನು ಆಫ್ರಿಕಾದಲ್ಲಿ ಪ್ರಾರಂಭಿಸಲಾಗಿದೆ. Tecno Spark Go 2023 ಎಂಬ ಇದೇ ರೀತಿಯ ನಿರ್ದಿಷ್ಟತೆಯೊಂದಿಗೆ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದ್ದರಿಂದ ಭಾರತವು ಅದೇ ಮಾದರಿಯ ಸ್ಮಾರ್ಟ್ಫೋನ್ ಪಡೆಯುತ್ತದೆಯೇ ಎಂದು ನಮಗೆ ಖಚಿತವಿಲ್ಲ. ಬ್ರ್ಯಾಂಡ್ ಸ್ವತಃ ನಮಗೆ ಎಲ್ಲಾ ಮಾಹಿತಿಯನ್ನು ಹೇಳಲಿದೆ. ಫೆಬ್ರವರಿ 16 ರಂದು Tecno Pop 7 Pro ಸ್ಮಾರ್ಟ್ಫೋನ್ ಬಿಡುಗಡೆಗಾಗಿ ಟ್ಯೂನ್ ಮಾಡಿ. ಹೊರಗಿರುವ Tecno Pop 7 Pro ಕುರಿತು ನಮಗೆ ತಿಳಿದಿರುವ ಮಾಹಿತಿ ಇಲ್ಲಿದೆ ನೋಡಿ.

Digit.in Survey
✅ Thank you for completing the survey!

Tecno Pop 7 Pro ಫೋನ್ 7 ನಿರೀಕ್ಷಿತ ಫೀಚರ್‌ಗಳು 

1. Tecno Pop 7 Pro ಫೋನ್ 6.56 ಇಂಚಿನ HD+ IPS LCD ಡಿಸ್ಪ್ಲೇಯನ್ನು ಹೊಂದಿದೆ. 

2. ಸ್ಮಾರ್ಟ್ಫೋನ್ನ ಹಿಂದೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಿದ್ದು ಅದನ್ನು ಅನ್‌ಲಾಕ್ ಮಾಡಲು ಬಳಸಬಹುದು.

3. ಆಂಡ್ರಾಯ್ಡ್ 12 ಆಧಾರಿತ HiOS ಸಾಫ್ಟ್‌ವೇರ್ ಅನ್ನು ಒಳಗೆ ಸ್ಥಾಪಿಸಲಾಗಿದೆ.

4. 12nm MediaTek Helio A22 ಪ್ರೊಸೆಸರ್ ಮೇಲೆ ಇದನ್ನು ಹಾಕಲಾಗಿದೆ.

5. ಆಫ್ರಿಕಾದಲ್ಲಿ ಫೋನ್‌ಗೆ ಕೇವಲ ಒಂದು 3GB RAM+ 64GB ಸ್ಟೋರೇಜ್ ಆಯ್ಕೆ ಇದೆ. ಹೆಚ್ಚುವರಿಯಾಗಿ ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಸಹ ಇದು ಹೊಂದಿದೆ.

6. ಈ ಸ್ಮಾರ್ಟ್ಫೋನ್ 5MP ಫ್ರಂಟ್ ಕ್ಯಾಮರಾ ಮತ್ತು 13MP ಬ್ಯಾಂಕ್ ಕ್ಯಾಮರಾವನ್ನು ಒಳಗೊಂಡಿದೆ.

7. 10W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ, ವೈಫೈ, ಬ್ಲೂಟೂತ್ 5.0, GPS, ಡ್ಯುಯಲ್ 4G ಸಿಮ್ ಮತ್ತು USB-C 2.0 ಕನೆಕ್ಟರ್ ಇದರ ಮತ್ತಷ್ಟು ಫೀಚರ್‌ಗಳಾಗಿವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo