ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಮತ್ತು ಟ್ರಿಪಲ್ ಬ್ಯಾಕ್ ಕ್ಯಾಮೆರಾದೊಂದಿಗೆ Tecno Phantom 9 ಬಿಡುಗಡೆ

ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಮತ್ತು ಟ್ರಿಪಲ್ ಬ್ಯಾಕ್ ಕ್ಯಾಮೆರಾದೊಂದಿಗೆ Tecno Phantom 9 ಬಿಡುಗಡೆ
HIGHLIGHTS

ಟ್ರಾನ್ಸ್‌ಷನ್ ಹೋಲ್ಡಿಂಗ್ ಸಬ್ ಬ್ರಾಂಡ್ ಟೆಕ್ನೋ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಫೋನ್‌ನ ಹೆಸರು ಟೆಕ್ನೋ ಫ್ಯಾಂಟಮ್ 9 (Tecno Phantom 9). ಈ ಫೋನ್‌ಗೆ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು ಗೂಗಲ್ ಲೆನ್ಸ್ ಸಪೋರ್ಟ್ ಮತ್ತು ಕ್ವಾಡ್ ರಿಯರ್ ಫ್ಲ್ಯಾಷ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ನೊಂದಿಗೆ ಕೇವಲ 15,000 ರೂಗಿಂತ ಕಡಿಮೆ ಬೆಲೆಗೆ ಬರುವ ಕಂಪನಿಯ ಮೊದಲ ಸ್ಮಾರ್ಟ್ಫೋನ್ ಇದಾಗಿದೆ.

Tecno 9

ಈ ಫೋನ್ ಅನ್ನು ಕೇವಲ 6GB RAM ಮತ್ತು 128GB ಸಂಗ್ರಹದೊಂದಿಗೆ ಮಾತ್ರ ಪರಿಚಯಿಸಲಾಗಿದೆ. ಹೌದು ನಾವು ನಿಮಗೆ ಹೇಳಿದಂತೆ ಈ ಫೋನ್ ಅನ್ನು ಕೇವಲ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 6GB ರ್ಯಾಮ್ ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 14,999 ರೂಗಳಾಗಿವೆ. ಇದು ಲ್ಯಾಪ್‌ಲ್ಯಾಂಡ್ ಅರೋರಾ ಕಲರ್ ರೂಪಾಂತರದಲ್ಲಿ ಲಭ್ಯವಾಗಲಿದೆ. ಇದರ ಮೊದಲ ಸೆಲ್ ಜುಲೈ 17 ರಂದು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಲಿದೆ.

http://www.sagmart.com/uploads/2019/07/11/news_image1/Tecno-Phantom-9.jpg

ಇದು 6.4 ಇಂಚಿನ ಫುಲ್ ಎಚ್ಡಿ ಪ್ಲಸ್ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 1080 x 2340 ಆಗಿದೆ. ಅಲ್ಲದೆ 19: 9 ಅಸ್ಪೆಟ್ ರೇಷು ಮತ್ತು ಸ್ಕ್ರೀನ್ ಟು ಬಾಡಿ 91.47% ಆಗಿದೆ. ಇದರಲ್ಲಿ ವಾಟರ್‌ಡ್ರಾಪ್ ನೀಡಲಾಗಿದೆ. ಈ ಫೋನ್ 2.3 GHz ಆಕ್ಟಾ-ಕೋರ್ ಮೀಡಿಯಾಟೆಕ್ ಹೆಲಿಯೊ P35 ಪ್ರೊಸೆಸರ್ ಮತ್ತು 6GB ಯ RAM ಅನ್ನು ಹೊಂದಿದೆ. ಇದು 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದನ್ನು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದು. ಇದು ಆಂಡ್ರಾಯ್ಡ್ 9 ಪೈ ಆಧಾರಿತ HIOS 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo