Samsung Galaxy S26 Ultra ಫೋನಿನ ಬೆಲೆ ಲೀಕ್! ಭಾರತದಲ್ಲಿ ಈ ಮೊಬೈಲ್‌ನ ನಿರೀಕ್ಷಿತ ದರ ಎಷ್ಟು?
Samsung Galaxy S26 Ultra ಫೋನಿನ ನಿರೀಕ್ಷಿತ ಬೆಲೆ 1,29,999 ರೂಗಳು ಎನ್ನಲಾಗಿದೆ
Samsung Galaxy S26 Ultra ಫೆಬ್ರವರಿ 25, 2026 ರಂದು ಲಾಂಚ್ ಮಾಡುವ ಸಾಧ್ಯತೆ
Samsung Galaxy S26 Ultra ಮೊಬೈಲ್ 200MP ಕ್ಯಾಮೆರಾ ರಚನೆ ಹೊಂದಿರುವ ನಿರೀಕ್ಷೆ ಇದೆ
ದಕ್ಷಿಣ ಕೊರಿಯಾದ ಟೆಕ್ ದೈತ್ಯ Samsung ಸದ್ಯ ತನ್ನ Samsung Galaxy S26 ಸರಣಿ ಲಾಂಚ್ ಮಾಡುವ ತಯಾರಿಯಲ್ಲಿ ಇದೆ. ಸಂಸ್ಥೆಯ ಈ ಹೊಸ ಸರಣಿಯು Samsung Galaxy S26, Samsung Galaxy S26 Plus ಮತ್ತು Samsung Galaxy S26 Ultra ಮಾಡೆಲ್‌ಗಳನ್ನು ಒಳಗೊಂಡು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಮುಖ್ಯವಾಗಿ ಈ ಸರಣಿಯ ಮೊಬೈಲ್‌ಗಳು ಕ್ಯಾಮೆರಾ, ಪ್ರೊಸೆಸರ್ ಹಾಗೂ ಪವರ್‌ಪುಲ್ ಬ್ಯಾಟರಿ ಬ್ಯಾಕ್‌ಅಪ್‌ನಂತಹ ಫೀಚರ್ಸ್‌ಗಳು ದೊಡ್ಡ ಅಪ್‌ಗ್ರೇಡ್ ಪಡೆಯುವ ಸಾಧ್ಯತೆಗಳು ಇವೆ. ಇನ್ನು ಈ ಫೋನ್‌ಗಳ ಬೆಲೆಯ ಬಗ್ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಕುತೂಹಲ ಇದೆ. Samsung Galaxy S26 Ultra ಬೆಲೆ ಕುರಿತ ಇತ್ತೀಚಿಗಿನ ಲೀಕ್ ಮಾಹಿತಿಗಳು ಗ್ರಾಹಕರ ಕುತೂಹಲ ಹೆಚ್ಚಿಸುವಂತೆ ಮಾಡಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Airtel ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ! ಉಚಿತವಾಗಿ ಸಿಗಲಿದೆ 4,000 ರೂಗಳ Adobe Express ಚಂದಾದಾರಿಕೆ!
Samsung Galaxy S26 Ultra ಫೋನಿನ ಬೆಲೆ ಲೀಕ್
ಸ್ಯಾಮ್‌ಸಂಗ್ ಕಂಪನಿಯ ಮುಂಬರುವ Samsung Galaxy S26 ಸರಣಿಯ ಬೆಲೆ ನಿಗದಿಯಲ್ಲಿ ಈ ವರ್ಷ ಬೆಲೆ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಲೀಕ್ ಮಾಹಿತಿಗಳು ಸೂಚಿಸಿವೆ. ಹಾಗೆಯೇ ಕೆಲವು ಲೀಕ್ ಮಾಹಿತಿಗಳು ಸೂಚಿಸುವಂತೆ Samsung Galaxy S26 Ultra ಮೊಬೈಲ್ ಬೆಲೆ ಭಾರತದಲ್ಲಿ 1,29,999 ರೂಗಳು ಆಗಿರಬಹುದು ಎಂದು ಹೇಳಲಾಗುತ್ತಿದೆ. ಇವು ಕೇವಲ ಆರಂಭಿಕ ಲೀಕ್ ಮಾಹಿತಿಗಳಾಗಿದ್ದು, ಕಂಪನಿಯು ಇನ್ನೂ ಅಧಿಕೃತವಾಗಿ ಯಾವುದೇ ಬೆಲೆ ವಿವರಗಳನ್ನು ದೃಢೀಕರಿಸಿಲ್ಲ ಎಂಬುದನ್ನು ಗಮನಿಸಬೇಕು.

Samsung Galaxy S26 Ultra ಮೊಬೈಲ್ ಲಾಂಚ್ ಡೇಟ್
ಕೆಲವು ಲೀಕ್ ಮಾಹಿತಿ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಸರಣಿಯನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಫೆಬ್ರವರಿ 25, 2026 ರಂದು ಲಾಂಚ್ ಮಾಡುವ ಸಾಧ್ಯತೆಗಳು ಇವೆ. ಇನ್ನು ಸ್ಯಾಮ್‌ಸಂಗ್ ಕಂಪನಿಯ ಗ್ಯಾಲಕ್ಸಿ S26 ಸರಣಿಯ ಫೋನ್‌ಗಳು ಮಾರ್ಚ್ 2026 ವೇಳೆ ಖರೀದಿಗೆ ಲಭ್ಯ ಆಗಲಿವೆ ಎಂದು ಲೀಕ್ ವರದಿಗಳಿಂದ ತಿಳಿದು ಬಂದಿದೆ.
Samsung Galaxy S26 Ultra ನಿರೀಕ್ಷಿತ ಫೀಚರ್ಸ್
Samsung Galaxy S26 Ultra ಮೊಬೈಲ್ 120Hz ರಿಫ್ರೆಶ್ ರೇಟ್ ಸಪೋರ್ಟ್ ಜೊತೆಗೆ 6.9 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಗ್ಯಾಲಕ್ಸಿ S26 ಪ್ಲಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ಪಡೆದಿರಲಿದೆ ಹಾಗೂ ಗ್ಯಾಲಕ್ಸಿ S26 ಮೊಬೈಲ್ 6.3 ಇಂಚಿನ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ. ಅದೇ ರೀತಿ ಗ್ಯಾಲಕ್ಸಿ S26 ಅಲ್ಟ್ರಾ ಮೊಬೈಲ್ 5,400mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ ಫಾಸ್ಟ್ ವೈರ್ಡ್ ಚಾರ್ಜಿಂಗ್ ಸಪೋರ್ಟ್ ಪಡೆದಿರಲಿದೆ. ಅದೇ ರೀತಿ ಗ್ಯಾಲಕ್ಸಿ S26 ಪ್ಲಸ್ ಮೊಬೈಲ್ 4,900mAh ಬ್ಯಾಟರಿ ಪವರ್ ಹಾಗೂ ಗ್ಯಾಲಕ್ಸಿ S26 ಮಾಡೆಲ್ ಮೊಬೈಲ್ 4,300mAh ಬ್ಯಾಟರಿ ಸಾಮರ್ಥ್ಯದಲ್ಲಿ ಲಗ್ಗೆ ಇಡುವ ಸಾಧ್ಯತೆಗಳು ಇವೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile