Samsung Galaxy S25 Series ಅಡಿಯಲ್ಲಿ 3 ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ! ಆಫರ್ ಬೆಲೆ ಮತ್ತು ವೈಶಿಷ್ಟ್ಯಗಳೇನು?
Samsungal Galaxy S25, Samsung Galaxy S25+ ಮತ್ತು Samsung Galaxy S25 Ultra ಬಿಡುಗಡೆಯಾಗಿವೆ.
Snapdragon 8 Elite ಪ್ರೊಸೇಸರ್, 200MP ಕ್ಯಾಮೆರಾದೊಂದಿಗೆ AI ಆಧಾರಿತ ಅನೇಕ ಜಬರದಸ್ತ್ ಫೀಚರ್ಗಳನ್ನು ಹೊಂದಿದೆ.
Samsung Galaxy S25 Series ಸ್ಮಾರ್ಟ್ಫೋನ್ಗಳ ಆಫರ್ ಬೆಲೆ ಮತ್ತು ವೈಶಿಷ್ಟ್ಯಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
Samsung Galaxy S25 Series Launched: ಸ್ಯಾಮ್ಸಂಗ್ ತನ್ನ ಲೇಟೆಸ್ಟ್ Samsung Galaxy Unpacked Event ಅನ್ನು ಅನಾವರಣಗೊಳಿಸಿದೆ. ಇದರಲ್ಲಿ ಕಂಪನಿ ಹೊಸ ಅಪ್ಡೇಟ್ ಫೀಚರ್ಗಳೊಂದಿಗೆ ಅಂದರೆ Snapdragon 8 Elite ಪ್ರೊಸೇಸರ್, 200MP ಕ್ಯಾಮೆರಾ ಮತ್ತು ವಿಶೇಷವಾಗಿ AI ಆಧಾರಿತ ಅನೇಕ ಜಬರದಸ್ತ್ ಫೀಚರ್ಗಳೊಂದಿಗೆ Samsungal Galaxy S25, Samsung Galaxy S25+ ಮತ್ತು Samsung Galaxy S25 Ultra ಬಿಡುಗಡೆಗೊಳಿಸಿದೆ.
Surveyಈ ಸ್ಮಾರ್ಟ್ ಫೋನ್ಗಳು ಸುಧಾರಿತ One UI 7 ವೈಶಿಷ್ಟ್ಯಗಳೊಂದಿಗೆ ರಿಫ್ರೆಶ್ ವಿನ್ಯಾಸವನ್ನು ಸಹ ನಿರೀಕ್ಷಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಸ್ಯಾಮ್ಸಂಗ್ ವರ್ಧಿತ Bixby AI ಸಹಾಯಕದೊಂದಿಗೆ ಅನಾವರಣಗೊಂಡಿವೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ಗಳ ಆಫರ್ ಬೆಲೆ ಎಷ್ಟು ಮತ್ತು ವೈಶಿಷ್ಟ್ಯಗಳೇನು? ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
Samsung Galaxy S25 ಮತ್ತು Galaxy S25+ ಫೀಚರ್ ವೈಶಿಷ್ಟ್ಯಗಳೇನು?
ಈ ಫೋನ್ 6.2 ಇಂಚಿನ FHD+ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದ್ದರೆ 6.7 ಇಂಚಿನ QHD+ ಪರದೆಯೊಂದಿಗೆ ಬರುತ್ತದೆ. ಎರಡೂ ಮಾದರಿಗಳು ಸೂಪರ್-ಸ್ಮೂತ್ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತವೆ ಅದು 1Hz ಮತ್ತು 120Hz ನಡುವೆ ಕ್ರಿಯಾತ್ಮಕವಾಗಿ ಹೊಂದಿಕೊಳ್ಳುತ್ತದೆ. ವಿಷನ್ ಬೂಸ್ಟರ್ ಮತ್ತು ಅಡಾಪ್ಟಿವ್ ಕಲರ್ ಟೋನ್ ವೈಶಿಷ್ಟ್ಯಗಳೊಂದಿಗೆ ಬಳಕೆದಾರರು ರೋಮಾಂಚಕ ದೃಶ್ಯಗಳು ಮತ್ತು ಆರಾಮದಾಯಕ ವೀಕ್ಷಣೆಯ ಅನುಭವವನ್ನು ನಿರೀಕ್ಷಿಸಬಹುದು.

ಈ ಎರಡು ಫೋನ್ ಒಂದೇ ಮಾದರಿಯ ಕ್ಯಾಮೆರಾ ಹೊಂದಿದ್ದು 12MP ಅಲ್ಟ್ರಾ-ವೈಡ್ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ 50MP ವೈಡ್ ಕ್ಯಾಮೆರಾ ಹೊಂದಿದ್ದು 10MP ಟೆಲಿಫೋಟೋ ಕ್ಯಾಮರಾ 3x ಆಪ್ಟಿಕಲ್ ಜೂಮ್ ಮತ್ತು ಕೊನೆಯದಾಗಿ ಸೆಲ್ಫಿಗಳಿಗಾಗಿ ಎರಡೂ ಫೋನ್ಗಳು 12MP ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ.
Also Read:50 ಇಂಚಿನ ಹೊಸ Google Smart TV ಅಮೆಜಾನ್‌ನಲ್ಲಿ ಅದ್ದೂರಿಯ ಮಾರಾಟ! ಕೈ ಜಾರುವ ಮುಂಚೆ ಖರೀದಿಸಿಕೊಳ್ಳಿ!
ಎರಡೂ ಮಾದರಿಗಳು ಸ್ಯಾಮ್‌ಸಂಗ್‌ನ One UI 7 ಜೊತೆಗೆ Android 15 ನಿಂದ ಚಾಲಿತವಾಗಿದ್ದು, ಸುಗಮ ಮತ್ತು ಅರ್ಥಗರ್ಭಿತ ಬಳಕೆದಾರ ಅನುಭವವನ್ನು ಖಾತ್ರಿಪಡಿಸುತ್ತದೆ. ಸ್ಟೋರೇಜ್ ಕಾನ್ಫಿಗರೇಶನ್‌ಗಳು 128GB, 256GB, ಮತ್ತು 512GB ಆಯ್ಕೆಗಳನ್ನು 12GB RAM ನೊಂದಿಗೆ ಜೋಡಿಸಲಾಗಿದೆ, ವಿವಿಧ ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತದೆ.
Samsung Galaxy S25 ಫೋನ್ 4000mAh ಬ್ಯಾಟರಿಯನ್ನು ಹೊಂದಿದ್ದರೆ ಮತ್ತೊಂದು Galaxy S25+ ದೊಡ್ಡ 4900mAh ಬ್ಯಾಟರಿಯೊಂದಿಗೆ ಬರುತ್ತದೆ. ಎರಡೂ ಫೋನ್ಗಳು ಫಾಸ್ಟ್ ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಸ್ಮಾರ್ಟ್‌ಫೋನ್‌ಗಳು 5G, LTE, Wi-Fi 7 ಮತ್ತು ಬ್ಲೂಟೂತ್ 5.4 ಅನ್ನು ಬೆಂಬಲಿಸುತ್ತವೆ. ತಡೆರಹಿತ ಸಂಪರ್ಕವನ್ನು ಖಾತ್ರಿಪಡಿಸುತ್ತದೆ. ಅವು ನೀರು ಮತ್ತು ಧೂಳಿನ ನಿರೋಧಕತೆಗಾಗಿ IP68-ರೇಟೆಡ್ ಆಗಿದ್ದು ಅವುಗಳನ್ನು ದೈನಂದಿನ ಬಳಕೆಗೆ ಬಾಳಿಕೆ ಬರುವಂತೆ ಮಾಡುತ್ತದೆ.

Samsung Galaxy S25 Ultra ಫೀಚರ್ ವೈಶಿಷ್ಟ್ಯಗಳೇನು?
Samsung Galaxy S25 Ultra ಪ್ರಬಲ Snapdragon 8 Elite ಚಿಪ್‌ಸೆಟ್‌ನೊಂದಿಗೆ ಬರುತ್ತದೆ. A ndroid 15 ಆಧಾರಿತ One UI 7 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 120Hz ರಿಫ್ರೆಶ್ ದರದೊಂದಿಗೆ 6.9 ಇಂಚಿನ QHD+ ಡೈನಾಮಿಕ್ AMOLED 2X ಪರದೆಯನ್ನು ಹೊಂದಿದೆ. ಇದರೊಂದಿಗೆ ಕಂಪನಿಯು ವಿಷನ್ ಬೂಸ್ಟರ್ ಮತ್ತು ಅಡಾಪ್ಟಿವ್ ಕ 000 ಲರ್ ಟೋನ್ ಅನ್ನು ಸಹ ಬೆಂಬಲಿಸಿದೆ.
Samsung Galaxy S25 Ultra ಅತ್ಯಂತ ಶಕ್ತಿಶಾಲಿ ಕ್ಯಾಮರಾ ಬೆಂಬಲದೊಂದಿಗೆ ಬರುತ್ತದೆ. Samsung Galaxy S25 Ultra ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾ 200MP ಆಗಿದೆ. ಇದು 50MP ಅಲ್ಟ್ರಾ-ವೈಡ್ ಕ್ಯಾಮೆರಾ 5x ಆಪ್ಟಿಕಲ್ ಜೂಮ್ ಬೆಂಬಲದೊಂದಿಗೆ 50MP ಟೆಲಿಫೋಟೋ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್ ಬೆಂಬಲದೊಂದಿಗೆ ಮತ್ತೊಂದು 10MP ಟೆಲಿಫೋಟೋ ಲೆನ್ಸ್ ಅನ್ನು ಒದಗಿಸಲಾಗಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 12MP ಕ್ಯಾಮೆರಾ ಸಂವೇದಕವನ್ನು ಒದಗಿಸಲಾಗಿದೆ.
Samsung Galaxy S25 Series ಬೆಲೆಗಳು
Samsung Galaxy S25 ಬೆಲೆಯನ್ನು ನೋಡುವುದಾರೆ ಆರಂಭಿಕ ಫೋನ್ 12GB + 256GB ಸ್ಟೋರೇಜ್ ರೂಪಾಂತರಕ್ಕಾಗಿ ನೀವು 80,999 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದರ 12GB+512GB ಸ್ಟೋರೇಜ್ ರೂಪಾಂತರದ ಬೆಲೆ 92,999 ರೂಗಳಾಗಿದೆ. ಫೋನ್ ನೀವು ಐಸ್ ಬ್ಲೂ, ಸಿಲ್ವರ್ ಶ್ಯಾಡೋ, ನೇವಿ ಮತ್ತು ಮಿಂಟ್ ಬಣ್ಣದ ಆಯ್ಕೆಗಳಲ್ಲಿ ಈ ಫೋನ್‌ಗಳನ್ನು ಖರೀದಿಸಬಹುದು.

Samsung Galaxy S25+ ಫೋನ್ 12GB + 256GB ಸ್ಟೋರೇಜ್ ರೂಪಾಂತರದ ಬೆಲೆಯನ್ನು 99,999 ರೂಗಳಲ್ಲಿ ಇರಿಸಲಾಗಿದೆ. ಅದರ 12GB + 512GB ಸ್ಟೋರೇಜ್ ರೂಪಾಂತರದ ಬೆಲೆಯನ್ನು 1,29,999 ರೂಗಳಲ್ಲಿ ಇರಿಸಲಾಗಿದೆ. ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಅನ್ನು ನೇವಿ ಮತ್ತು ಸಿಲ್ವರ್ ಶ್ಯಾಡೋ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
ಈ ಫೋನ್‌ಗಳು ಫೆಬ್ರವರಿ 7 ರಿಂದ ಮಾರಾಟಕ್ಕೆ ಲಭ್ಯವಾಗಲಿವೆ. ಸ್ಯಾಮ್‌ಸಂಗ್‌ನ ಆನ್‌ಲೈನ್ ಸ್ಟೋರ್, ಚಿಲ್ಲರೆ ಅಂಗಡಿಗಳು, ಪಾಲುದಾರ ಅಂಗಡಿಗಳು ಮತ್ತು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಂದ ನೀವು ಈ ಫೋನ್‌ಗಳನ್ನು ಖರೀದಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile