Samsung Galaxy S10 ಮತ್ತು Galaxy S10+ಏರ್ಟೆಲ್ ಆನ್ಲೈನ್ ಸ್ಟೋರಲ್ಲಿ ಕೇವಲ 9099 ರೂಗಳ ಡೌನ್ಪೇಮೆಂಟಲ್ಲಿ ಲಭ್ಯ.

HIGHLIGHTS

ಏರ್ಟೆಲ್ ಇದರೊಂದಿಗೆ ಅನಿಯಮಿತ ಡೇಟಾ ಮತ್ತು ವಾಯ್ಸ್ ಕರೆ ಸೌಲಭ್ಯಗಳನ್ನು ಸಹ ನೀಡುತ್ತಿದೆ.

Samsung Galaxy S10 ಮತ್ತು Galaxy S10+ಏರ್ಟೆಲ್ ಆನ್ಲೈನ್ ಸ್ಟೋರಲ್ಲಿ ಕೇವಲ 9099 ರೂಗಳ ಡೌನ್ಪೇಮೆಂಟಲ್ಲಿ ಲಭ್ಯ.

ಸ್ಯಾಮ್ಸಂಗ್ ಫೆಬ್ರವರಿ 20 ರಂದು ಸ್ಯಾಮ್ಸಂಗ್ ತನ್ನ Samsung Galaxy S ಸರಣಿಯನ್ನು ಅನ್ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿತು. Samsung Galaxy S10 ಮತ್ತು Galaxy S10+ ಮತ್ತು S10e ಜೊತೆಗೆ ಕಂಪನಿಯು ತನ್ನ ಫೋಲ್ಡಬಲ್ ಸ್ಮಾರ್ಟ್ಫೋನ್ ಅನ್ನು ತೋರಿಸಿದೆ. ಸಾಧನಗಳ ಭಾರತೀಯ ಬೆಲೆಗಳು ಔಟ್ ಆಗಿದೆ. ಅಲ್ಲದೆ ಕಂಪನಿಯ ಆನ್ಲೈನ್ ವೆಬ್ಸೈಟ್ ಮೂಲಕ ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಇತರ ಆಯ್ದ ಚಿಲ್ಲರೆ ಮಾರಾಟ ಕೇಂದ್ರಗಳ ಮೂಲಕ ಘಟಕಗಳು ಪೂರ್ವ-ಬುಕಿಂಗ್ಗೆ ಈಗಾಗಲೇ ಮುಂದಾಗಿವೆ. 

Digit.in Survey
✅ Thank you for completing the survey!

ಇದರ ಬೆಸ್ಟ್ ಗುಣಮಟ್ಟದ Galaxy S10 ಕಡಿಮೆ ಬೆಲೆಯಲ್ಲಿದ್ದು ಟಾಪ್ ಗಚ್ Galaxy S10+ ಗಳನ್ನು ಮಾರ್ಚ್ 8 ರಿಂದ ಭಾರತದಲ್ಲಿ ಮಾರಾಟ ಮಾಡಲು ಸಿದ್ಧಪಡಿಸಲಾಗಿದೆ. ಈಗ ಏರ್ಟೆಲ್ ಕಂಪನಿಯು Galaxy S10 ಮತ್ತು Galaxy S10+ ಅನ್ನು ಏರ್ಟೆಲ್ ಆನ್ಲೈನ್ ಸ್ಟೋರ್ನಲ್ಲಿ ಕ್ರಮವಾಗಿ 9099 ಮತ್ತು 15,799 ರೂಗಳ ಡೌನ್ಪೇಮೆಂಟ್ ಮೂಲಕ ನೀಡುತ್ತಿದೆ. ಟೆಲಿಕಾಂ ಕಂಪೆನಿಯು ತನ್ನ ಚಂದಾದಾರರಿಗೆ ಸುಲಭ EMIಗಳ ಮೇಲೆ ಪೋಸ್ಟ್ಪೇಯ್ಡ್ ಯೋಜನೆಯನ್ನು ಅಂತರ್ನಿರ್ಮಿತವಾಗಿ ಘೋಷಿಸಿದೆ. 

ಅಂದ್ರೆ ಏರ್ಟೆಲ್ ಮೂಲಕ ಇತ್ತೀಚಿನ ಸ್ಯಾಮ್ಸಂಗ್ ಐಶರಾಮಿ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದು ಮತ್ತು ಏರ್ಟೆಲ್ ಇದರೊಂದಿಗೆ  ಅನಿಯಮಿತ ಡೇಟಾ ಮತ್ತು ವಾಯ್ಸ್ ಕರೆ ಸೌಲಭ್ಯಗಳನ್ನು ಸಹ ನೀಡುತ್ತಿದೆ. ಏರ್ಟೆಲ್ ಬಳಕೆದಾರರಿಗೆ 24 ತಿಂಗಳ ಕಾಲ ತಿಂಗಳಿಗೆ 2,999 ರೂ. ಖರ್ಚು ಮಾಡಬೇಕಾಗುತ್ತದೆ. ಏರ್ಟೆಲ್ ಚಂದಾದಾರರಿಗೆ 100GB  ಅನಿಯಮಿತ ಡೇಟಾ, ಅನಿಯಮಿತ ಧ್ವನಿ ಕರೆ ಮಾಡುವಿಕೆ (ಲೋಕಲ್ + ಎಸ್ಟಿಡಿ) ಅಲ್ಲದೆ 1 ವರ್ಷಕ್ಕೆ ಅಮೆಜಾನ್ ಪ್ರೈಮ್ ಉಚಿತ ಚಂದಾದಾರಿಕೆ ಮತ್ತು ನೆಟ್ಫ್ಲಿಕ್ಸ್ಗೆ 3 ತಿಂಗಳವರೆಗೆ 1500 ಮೌಲ್ಯದ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo