Jio vs Airtel vs Vi: ಪ್ರತಿದಿನ 1.5GB ಡೇಟಾ, 84 ದಿನಗಳ ವ್ಯಾಲಿಡಿಟಿಗೆ ಯಾವ ಪ್ಲಾನ್‌ ಬೆಸ್ಟ್‌?

HIGHLIGHTS

Jio, Airtel ಮತ್ತು Vi: ಈ ಮೂರು ಕಂಪನಿಗಳು 1.5GB ದೈನಂದಿನ ಡೇಟಾ ಪ್ಲಾನ್‌ ಹೊಂದಿವೆ

ಈ ಕಂಪನಿಗಳು 1.5GB ದೈನಂದಿನ ಡೇಟಾ ಜೊತೆಗೆ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತಿವೆ

ಮೂರು ಸಂಸ್ಥೆಗಳ ಪ್ಲಾನ್‌ಗಳು ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋಜನಗಳು ಸಾಮ್ಯತೆ ಪಡೆದಿವೆ

Jio vs Airtel vs Vi: ಪ್ರತಿದಿನ 1.5GB ಡೇಟಾ, 84 ದಿನಗಳ ವ್ಯಾಲಿಡಿಟಿಗೆ ಯಾವ ಪ್ಲಾನ್‌ ಬೆಸ್ಟ್‌?

ದೇಶದ ಟೆಲಿಕಾಂ ವಲಯದಲ್ಲಿ Jio, Airtel ಮತ್ತು Vi ಸಂಸ್ಥೆಗಳು ಖಾಸಗಿ ಟೆಲಿಕಾಂ ಕಂಪನಿಗಳಾಗಿ ಗುರುತಿಸಿಕೊಂಡಿವೆ. ಇವು ಭಿನ್ನ ರೀಚಾರ್ಜ್‌ ಯೋಜನೆಗಳ ಮೂಲಕ ತಮ್ಮದೇ ಆದ ಗ್ರಾಹಕ ಬಳಗವನ್ನು ಹೊಂದಿವೆ. ಈ ಮೂರು ಕಂಪನಿಗಳ ಕೆಲವು ಪ್ಲಾನ್‌ಗಳು ಬಹುತೇಕ ಸಾಮ್ಯತೆ ಹೊಂದಿವೆ. ಅದಾಗ್ಯೂ ಡೇಟಾ ಪ್ರಯೋಜನದಲ್ಲಿ ಭಿನ್ನತೆಗಳನ್ನು ಗಮನಿಸಬಹುದು. ಜಿಯೋ, ಏರ್‌ಟೆಲ್‌ ಹಾಗೂ ವಿ ಸಂಸ್ಥೆಗಳು ಪ್ರತಿದಿನ 1.5GB ದೈನಂದಿನ ಡೇಟಾ ಸೌಲಭ್ಯ ಒಳಗೊಂಡ ಯೋಜನೆಗಳ ಆಯ್ಕೆಯನ್ನು ಒಳಗೊಂಡಿವೆ. ಈ ಮೂರು ಕಂಪನಿಗಳ 1.5GB ದೈನಂದಿನ ಡೇಟಾ ಯೋಜನೆಗಳಲ್ಲಿ ಗ್ರಾಹಕರಿಗೆ ಯಾವುದು ಉತ್ತಮ, ಈ ಪ್ಲಾನ್‌ಗಳಲ್ಲಿ ಯಾವೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಹಾಗೂ ರೀಚಾರ್ಜ್‌ಗೆ ಯಾವ ಪ್ಲಾನ್‌ ಬೆಸ್ಟ್‌ ಎನ್ನುವ ಕುರಿತು ಈ ಲೇಖನದಲ್ಲಿ ತಿಳಿಯೋಣ.

Digit.in Survey
✅ Thank you for completing the survey!

Also Read : iPhone 17 ಬೆಲೆ ಇಳಿಕೆ! ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ನಿಮ್ಮ ಪ್ರೀತಿಪಾತ್ರರಿಗೆ ಈ ಐಫೋನ್‌ ಗಿಫ್ಟ್‌ ಕೊಡಬಹುದು

Jio 799ರೂಗಳ ರೀಚಾರ್ಜ್‌ ಯೋಜನೆ

ರಿಲಯನ್ಸ್ ಜಿಯೋ ಕಂಪನಿಯ 799 ರೂಗಳ ರೀಚಾರ್ಜ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನು ಈ ಯೋಜನೆಯಲ್ಲಿ ಬಳಕೆದಾರರಿಗೆ 1.5GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಇದರೊಂದಿಗೆ ಪ್ರತಿದಿನ 100 SMS ಸೌಲಭ್ಯ ಹಾಗೂ ಅನಿಯಮಿತ ವಾಯ್ಸ್‌ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ನಿಗದಿತ ಡೇಟಾ ಬಳಕೆಯ (FUP) ನಂತರ ಇಂಟರ್ನೆಟ್‌ ವೇಗವು 64 Kbps ಗೆ ಇಳಿಯುತ್ತದೆ. ಹಾಗೆಯೇ ಈ ಯೋಜನೆಯಲ್ಲಿ JioTV ಮತ್ತು JioAICloud ಸೇರಿದಂತೆ ಹೆಚ್ಚುವರಿ ಚಂದಾದಾರಿಕೆಗಳನ್ನು ಒಳಗೊಂಡಿದೆ.

Jio

Airtel 859ರೂಗಳ ರೀಚಾರ್ಜ್‌ ಪ್ಲಾನ್

ಭಾರ್ತಿ ಏರ್‌ಟೆಲ್‌ ಕಂಪನಿಯ 859 ರೂಗಳ ರೀಚಾರ್ಜ್‌ ಪ್ಲಾನ್‌ ಸಹ 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಇನ್ನು ಈ ಯೋಜನೆಯಲ್ಲಿ ಬಳಕೆದಾರರಿಗೆ 1.5GB ದೈನಂದಿನ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಪ್ರತಿದಿನ 100 SMS ಸೌಲಭ್ಯ ಹಾಗೂ ಅನಿಯಮಿತ ವಾಯ್ಸ್‌ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ನಿಗದಿತ ಡೇಟಾ ಬಳಕೆಯ (FUP) ನಂತರ ಇಂಟರ್ನೆಟ್‌ ವೇಗವು 64 Kbps ಗೆ ಇಳಿಯುತ್ತದೆ. ಜಿಯೋಗೆ ಹೋಲಿಸಿದರೆ ಏರ್‌ಟೆಲ್‌ನ ಈ ಪ್ಲಾನ್ ಸ್ವಲ್ಪ ದುಬಾರಿ ಅನಿಸುತ್ತದೆ. ಆದರೆ ಇದರೊಂದಿಗೆ ಒಂದು ವರ್ಷದ ಅವಧಿಗೆ 4,000 ರೂ ಮೌಲ್ಯದ Adobe Express Premium ಚಂದಾದಾರಿಕೆ ಸಹ ಪಡೆದುಕೊಂಡಿದೆ.

Vi 859ರೂಗಳ ರೀಚಾರ್ಜ್‌ ಯೋಜನೆ

ವೊಡಾಫೋನ್ ಐಡಿಯಾ ಕಂಪನಿಯ 859 ರೂಗಳ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ 1.5GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಪ್ರತಿದಿನ 100 SMS ಸೌಲಭ್ಯ ಹಾಗೂ ಅನಿಯಮಿತ ವಾಯ್ಸ್‌ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಬಳಕೆದಾರರು ಬಿಂಜ್ ಆಲ್ ನೈಟ್, ವೀಕೆಂಡ್ ಡೇಟಾ ರೋಲ್‌ಓವರ್ ಮತ್ತು ಡೇಟಾ ಡಿಲೈಟ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ.

ಯಾವ ರೀಚಾರ್ಜ್‌ ಪ್ಲಾನ್‌ ಬೆಸ್ಟ್‌?

Jio, Airtel ಮತ್ತು Vi ಸಂಸ್ಥೆಗಳು ಭಿನ್ನ ಪ್ರಯೋಜನಗಳನ್ನು ಹೊಂದಿವೆ. ಆ ಪೈಕಿ ವಿ ಟೆಲಿಕಾಂ ಹೆಚ್ಚುವರಿ ಡೇಟಾ ಕೊಡುಗೆ ಹೊಂದಿದೆ. ಇನ್ನು ಏರ್‌ಟೆಲ್ ಕಂಪನಿಯು ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ಚಂದಾದಾರಿಕೆಯನ್ನು ಹೊಂದಿದೆ. ಅದೇ ರೀತಿ ಜಿಯೋ ಟೆಲಿಕಾಂ ಕವರೇಜ್‌ನಲ್ಲಿ ಅತ್ಯುತ್ತಮವಾಗಿದೆ ಹಾಗೂ ಏರ್‌ಟೆಲ್‌ ಹಾಗೂ ವಿ ಪ್ಲಾನ್‌ಗಳಿಗೆ ಹೋಲಿಸಿದರೆ ಅಗ್ಗವಾಗಿದೆ. ಹೀಗಾಗಿ ಬೆಲೆಯ ದೃಷ್ಠಿಯಿಂದ ಜಿಯೋ ಉತ್ತಮವಾಗಿ ಕಾಣಿಸುತ್ತದೆ. ಉಳಿದಂತೆ ವಿ ಹಾಗೂ ಏರ್‌ಟೆಲ್‌ ಪ್ಲಾನ್‌ ಸಹ ಆಕರ್ಷಕ ಎನಿಸುತ್ತವೆ. ಗ್ರಾಹಕರ ಆಯ್ಕೆಯು ಅನುಕೂಲ ಹಾಗೂ ಪ್ರಯೋಜನಗಳ ಮೇಲೆ ಅವಲಂಬಿತವಾಗಿರುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo