Redmi Note 12 5G vs Moto G73 5G: ಟಾಪ್ 5 ಫೀಚರ್ ಹೋಲಿಕೆ! ಈ ಬೆಲೆಗೆ ಯಾವ ಫೋನ್ ಬೆಸ್ಟ್?

Redmi Note 12 5G vs Moto G73 5G: ಟಾಪ್ 5 ಫೀಚರ್ ಹೋಲಿಕೆ! ಈ ಬೆಲೆಗೆ ಯಾವ ಫೋನ್ ಬೆಸ್ಟ್?
HIGHLIGHTS

Redmi Note 12 5G ಹಾಗೂ Moto G73 5G ಸ್ಮಾರ್ಟ್ಫೋನ್ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಧೂಳೆಬ್ಬಿಸಿವೆ.

ಪ್ರತಿಯೊಂದು ಫೋನ್ಗಳು ಬೆಲೆ, ಫೀಚರ್ಸ್ ಹಾಗೂ ಇನ್ನಿತರೆ ವಿಷಯಗಳಲ್ಲಿ ಭಿನ್ನವಾಗಿರುತ್ತವೆ.

ಈ ಎರಡು ಫೋನ್ ಗಳ ಫೀಚರ್‌ಗಳೇನು ಇವುಗಳಲ್ಲಿ ಯಾವುದು ಬೆಸ್ಟ್ ನೋಡೋಣ.

Redmi Note 12 5G vs Moto G73 5G: ಪ್ರತಿ ತಿಂಗಳು ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಲೆ ಇರುತ್ತವೆ. ಪ್ರತಿಯೊಂದು ಫೋನ್‌ಗಳು ಬೆಲೆ, ಫೀಚರ್ಸ್‌ ಹಾಗೂ ಇನ್ನಿತರೆ ವಿಷಯಗಳಲ್ಲಿ ಭಿನ್ನವಾಗಿರುತ್ತವೆ, ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳಾದ ರೆಡ್ಮಿ ಹಾಗೂ ಮೊಟೊರೊಲಾ ಪ್ರಮುಖವಾದ ಕಂಪೆನಿಗಳಾಗಿದ್ದು ಈ ಕಂಪೆನಿಗಳು ಗ್ರಾಹಕರು ಮೆಚ್ಚಿರುವ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿವೆ. ಇದರ ಭಾಗವಾಗಿ ಇತ್ತೀಚಿಗೆ Redmi Note 12 5G ಮತ್ತು Moto G73 5G ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಲಾಗಿದ್ದು ಇವು ಮೊಬೈಲ್‌ ಮಾರುಕಟ್ಟೆಯಲ್ಲಿ ಭಾರೀ ಸಡ್ಡು ಮಾಡುತ್ತಿವೆ. ಹೀಗಾಗಿ ಈ ಎರಡೂ ಸ್ಮಾರ್ಟ್‌ಫೋನ್ಗಳ ಬಗ್ಗೆ ಹೇಳುವುದಾದರೆ ಇವುಗಳು ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿವೆ. ಇಂದು ನಾವು ಇವುಗಳನ್ನು ಹೋಲಿಸುತ್ತಿದ್ದೇವೆ. 

Redmi Note 12 5G vs Moto G73 5G ಡಿಸ್ಪ್ಲೇ

Redmi Note 12 5G ಸ್ಮಾರ್ಟ್ಫೋನ್ 6.67 AMOLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಇದು 395 PPI ಡೆನ್ಸಿಟಿ ಅನ್ನು ಹೊಂದಿದ್ದು ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ 3 ಅನ್ನು ಒಳಗೊಂಡಿದೆ. Moto G73 5G  G73 5G ಸ್ಮಾರ್ಟ್ಫೋನ್ 6.5 ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಫೋನ್ 405 PPI ಡೆನ್ಸಿಟಿ ಅನ್ನು ಹೊಂದಿದೆ.

Redmi Note 12 5G vs Moto G73 5G ಕ್ಯಾಮೆರಾ

Redmi Note 12 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದು 48MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಅನ್ನು ಹೊಂದಿದೆ. ಅಲ್ಲದೆ ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 13MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. Moto G73 5G ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್, ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಮ್ಯಾಕ್ರೋ ಡೆಪ್ತ್ ಶೂಟರ್ ಅನ್ನು ಹೊಂದಿದೆ. ಇದಲ್ಲದೆ 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Redmi Note 12 5G vs Moto G73 5G ಪ್ರೊಸೆಸರ್

Redmi Note 12 5G ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 4 ಜನ್ 1 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್ 4GB/6GB RAM ಮತ್ತು 128GB ವೇರಿಯಂಟ್‌ನಲ್ಲಿ ಲಭ್ಯವಿದೆ. ಹೆಚ್ಚುವರಿ ಇಂಟರ್ನಲ್ ಸ್ಟೋರೇಜ್‌ಗಾಗಿ ಇದು ಮೈಕ್ರೋ SD ಕಾರ್ಡ್‌ ಸೌಲಭ್ಯವನ್ನು ಪಡೆದುಕೊಂಡಿದೆ. Moto G73 5G ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 930 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸ್ಟೋರೇಜ್ ಕೆಪ್ಯಾಸಿಟಿಯನ್ನು ವಿಸ್ತರಿಸಬಹುದಾಗಿದೆ.

Redmi Note 12 5G vs Moto G73 5G ಬ್ಯಾಟರಿ

Redmi Note 12 5G 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W  ಫಾಸ್ಟ್ ಚಾರ್ಜಿಂಗ್‌‌ ಅನ್ನು ಬೆಂಬಲಿಸುತ್ತದೆ. Idu ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಇಡೀ ದಿನ ಬಳಕೆ ಮಾಡಬಹುದು. Moto G73 5G 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 30W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

Redmi Note 12 5G vs Moto G73 5G ಬೆಲೆ

Redmi Note 12 5G ಮ್ಯಾಟ್ ಬ್ಲಾಕ್, ಫ್ರಾಸ್ಟೆಡ್ ಗ್ರೀನ್, ಮಿಸ್ಟಿಕ್ ಬ್ಲೂ,  ಕಲರ್ಗಳ ಆಯ್ಕೆಯಲ್ಲಿ ರೂ 17,980 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. Moto G73 5G ಲ್ಯೂಸೆಂಟ್ ವೈಟ್ ಮತ್ತು ಮಿಡ್ನೈಟ್ ಬ್ಲೂ  ಕಲರ್ಗಳ ಆಯ್ಕೆಯಲ್ಲಿ ರೂ 18,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo