Realme GT Neo 5: ರಿಯಲ್‌ಮಿಯ ಸ್ಮಾರ್ಟ್ಫೋನ್ 240W ಫಾಸ್ಟ್ ಚಾರ್ಜಿಂಗ್​ನೊಂದಿಗೆ ಸಜ್ಜು! ಬೆಲೆ ಮತ್ತು ಫೀಚರ್ಗಳೇನು?

Realme GT Neo 5: ರಿಯಲ್‌ಮಿಯ ಸ್ಮಾರ್ಟ್ಫೋನ್ 240W ಫಾಸ್ಟ್ ಚಾರ್ಜಿಂಗ್​ನೊಂದಿಗೆ ಸಜ್ಜು! ಬೆಲೆ ಮತ್ತು ಫೀಚರ್ಗಳೇನು?
HIGHLIGHTS

Realme ತನ್ನ Realme GT Neo 5 ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಿದೆ.

Realme ತನ್ನ Realme GT Neo 5 ಫೋನ್ ಫೆಬ್ರವರಿ 9 ರಂದು ಕಂಪನಿಯು ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಬಿಡುಗಡೆಗೆ ಸಜ್ಜು.

Realme GT Neo 5 ಗಾಗಿ 240W ಚಾರ್ಜಿಂಗ್ ಟೆಕ್ನಾಲಜಿ ಬರುತ್ತಿದೆ ಎಂದು ಅಧಿಕೃತ ಟೀಸರ್ ಮೂಲಕ ದೃಢೀಕರಿಸಲ್ಪಟ್ಟಿದೆ.

Realme GT Neo 5 ಫೆಬ್ರವರಿ 9 ರಂದು ಬಿಡುಗಡೆಯಾಗಲಿದ್ದು ಕಂಪನಿಯು 240W ಫಾಸ್ಟ್‌ ಚಾರ್ಜಿಂಗ್ ಹೊಂದಿದೆ. Realme ತನ್ನ 240W ಚಾರ್ಜಿಂಗ್ ಟೆಕ್ನಾಲಜಿಯನ್ನು ಈ ತಿಂಗಳ ಆರಂಭದಲ್ಲಿ ಘೋಷಿಸಿತು ಮತ್ತು ಕಂಪನಿಯ ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ನಲ್ಲಿ ಇದನ್ನು ಸೇರಿಸಲಾಗುವುದು. ವದಂತಿಗಳ ಪ್ರಕಾರ ಕಂಪನಿಯು ಮುಂದಿನ Realme GT Neo 5 ನೊಂದಿಗೆ ಇದನ್ನು ಬಂಡಲ್ ಮಾಡುತ್ತದೆ ಎಂದು ವರದಿಯಾಗಿದೆ. ಫೆಬ್ರವರಿ 9 ರಂದು ಕಂಪನಿಯು ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ  ಈ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸುತ್ತದೆ. 

Realme ಈಗ GT Neo 5 ಗಾಗಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮತ್ತು ಸ್ಮಾರ್ಟ್‌ಫೋನ್ ವಾಸ್ತವವಾಗಿ 240W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಖಚಿತಪಡಿಸುತ್ತದೆ. ಇತ್ತೀಚಿನ ಪ್ರೈಸ್‌ಬಾಬಾ ವರದಿ ಪ್ರಕಾರ ಕಂಪನಿಯು MWC 2023 ರ ಸಮಯದಲ್ಲಿ ಡಿವೈಸ್‌ ಅನ್ನು ಪರಿಚಯಿಸಲು ಯೋಜಿಸಿದೆ. ಇದು  ಬಾರ್ಸಿಲೋನಾದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ನಡೆಯುತ್ತದೆ. Realme GT Neo 5 ಸ್ಮಾರ್ಟ್ಫೋನ್ ಬಿಡುಗಡೆಯೊಂದಿಗೆ ಏನನ್ನು ನಿರೀಕ್ಷಿಸಬಹುದು.

Realme GT Neo 5 ಬಿಡುಗಡೆಯ ದಿನಾಂಕವನ್ನು ದೃಢೀಕರಿಸಲಾಗಿದೆ

ಚೈನೀಸ್ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ವೈಬೊದಲ್ಲಿ Realme ಪೋಸ್ಟ್ ಮಾಡಿದ ಅಧಿಕೃತ ಟೀಸರ್ ಪ್ರಕಾರ Realme GT Neo 5  ಚೀನಾದಲ್ಲಿ ಫೆಬ್ರವರಿ 9 ರಂದು ಸ್ಥಳೀಯ ಸಮಯ ಮಧ್ಯಾಹ್ನ 2:00 ಗಂಟೆಗೆ ಬಿಡುಗಡೆಯಾಗಲಿದೆ. ಇದು ತನ್ನ ಹೊಚ್ಚಹೊಸ 240W ಚಾರ್ಜಿಂಗ್ ಪರಿಹಾರದೊಂದಿಗೆ ಬರುತ್ತಿದೆ ಎಂದು ಟೀಸರ್ ಬಹಿರಂಗಪಡಿಸಿದೆ. ಟೀಸರ್ ಚಿಕ್ಕದಾಗಿ ಕೊನೆಗೊಂಡಿದ್ದು ಮತ್ತು ಡಿವೈಸ್‌ನ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸಿಲ್ಲ. Realme GT Neo 5 ಸ್ಮಾರ್ಟ್ಫೋನ್ TENAA ಪಟ್ಟಿಯು  240W ಮತ್ತು 150W ಮಾದರಿಗಳ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ ಎಂದು ಮೊದಲು ಬಹಿರಂಗಪಡಿಸಿತು.

Realme GT Neo 5 ಬೆಲೆ ಮತ್ತು ಫೀಚರ್ಸ 

TENAA ಜೊತೆಗೆ ಸ್ಮಾರ್ಟ್‌ಫೋನ್ ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್ ಗೀಕ್‌ಬೆಂಚ್‌ನಿಂದ ಕೂಡಿದೆ. ಕೆಲವು ಹಾರ್ಡ್‌ವೇರ್ ವಿವರಗಳನ್ನು ಮತ್ತು ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಪರೀಕ್ಷೆಗಳ ಫಲಿತಾಂಶಗಳನ್ನು ಹೊರಹಾಕಿತು. Snapdragon 8+ Gen1 ಮತ್ತು 16GB RAM ನಲ್ಲಿ ರನ್ ಆಗುತ್ತಿರುವಾಗ Realme GT Neo 5 ಸಿಂಗಲ್-ಕೋರ್ ಪರೀಕ್ಷೆಯಲ್ಲಿ 1279 ಅಂಕಗಳನ್ನು ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 3902 ಅಂಕಗಳನ್ನು ಗಳಿಸಿದೆ. ಪರೀಕ್ಷೆಯ ಸಮಯದಲ್ಲಿ ಡಿವೈಸ್‌ Android-13 ಆಧಾರಿತ Realme UI 4.0 ಕಸ್ಟಮ್ ಸ್ಕಿನ್ ಮೂಲಕ ಕಾರ್ಯನಿರ್ವಹಿಸುತ್ತಿದೆ. Qualcomm Snapdragon 8 Plus Gen 1 6 ಜಿಬಿ ಪ್ರೊಸೆಸರ್ ಹೊಂದಿದೆ. 6.7 ಇಂಚಿನ ಡಿಸ್ಪ್ಲೇ ಹಾಗೂ 50 MP + 8 MP + 2 MP ಬ್ಯಾಂಕ್ ಕ್ಯಾಮೆರಾ ಮತ್ತು 16 MP ಸೆಲ್ಫಿ ಕ್ಯಾಮೆರವನ್ನು ಹೊಂದಿದ್ದು 5000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ ರೂ. 38,990 ರಿಂದ ಪ್ರಾರಂಭವಾಗುವ ನಿರೀಕ್ಷೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo