ಭಾರತದಲ್ಲಿ Realme GT 7 Dream Edition ಶೀಘ್ರದಲ್ಲೇ ಅಮೆಜಾನ್‌ನಲ್ಲಿ ಬಿಡುಗಡೆಯಾಗಲಿದೆ!

HIGHLIGHTS

ಮುಂಬರಲಿರುವ Realme GT 7 Dream Edition ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದೆ.

Realme GT 7 Dream Edition ಸ್ಮಾರ್ಟ್ಫೋನ್ 20ನೇ ಮೇ 2025 ರಂದು ಮಧ್ಯಾಹ್ನ 1:30 ಗಂಟೆಗೆ ಬಿಡುಗಡೆಯಾಗಲಿದೆ.

ಹೊಚ್ಚ ಹೊಸ MediaTek Dimensity 9400 ಪ್ರೊಸೆಸರ್ ಮತ್ತು ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ನಿರೀಕ್ಷಿಸಲಾಗಿದೆ.

ಭಾರತದಲ್ಲಿ Realme GT 7 Dream Edition ಶೀಘ್ರದಲ್ಲೇ ಅಮೆಜಾನ್‌ನಲ್ಲಿ ಬಿಡುಗಡೆಯಾಗಲಿದೆ!

ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ (realme) ತನ್ನ ಮುಂಬರಲಿರುವ Realme GT 7 Dream Edition ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದೆ. ಭಾರತದಲ್ಲಿ ಪ್ರತ್ಯೇಕವಾಗಿ ಅಮೆಜಾನ್ ಇಂಡಿಯಾದ ಮೂಲಕ Realme GT 7 Dream Edition ಸ್ಮಾರ್ಟ್ಫೋನ್ 20ನೇ ಮೇ 2025 ರಂದು ಮಧ್ಯಾಹ್ನ 1:30 ಗಂಟೆಗೆ ಬಿಡುಗಡೆಯಾಗಿ ಮಾರಾಟವಾಗುವುದಾಗಿ ಈಗಾಗಲೇ ಅಧಿಕೃತ ಟ್ವಿಟ್ಟರ್ ಪೋಸ್ಟ್ ಮೂಲಕ ಕಂಪನಿ ಕಂಫಾರ್ಮ್ ಮಾಡಿದೆ.

Realme GT 7 Dream Edition ಸ್ಮಾರ್ಟ್ಫೋನ್ ಬಿಡುಗಡೆ:

ಈ ವಿಶೇಷ ಆವೃತ್ತಿಯು ಒಂದಿಷ್ಟು ವಿಶಿಷ್ಟ ವಿನ್ಯಾಸದೊಂದಿಗೆ ಬರುವ ಸಾಧ್ಯತೆಗಳಿದ್ದು ಹೊಚ್ಚ ಹೊಸ MediaTek Dimensity 9400 ಪ್ರೊಸೆಸರ್ ಮತ್ತು ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಈಗಾಗಲೇ ಕಂಪನಿ ತನ್ನ ಲೇಟೆಸ್ಟ್ Realme GT 7 ಸೀರೀಸ್ ಅನ್ನು ಇದೆ 27ನೇ ಮೇ 2025 ರಂದು ಬಿಡುಗಡೆಗೊಳಿಸಲಿರುವ ಬಗ್ಗೆ ಮಾಹಿತಿ ಪೋಸ್ಟ್ ಮಾಡಿದ್ದೂ ಈಗ ಈ ಸರಣಿಯಲ್ಲಿ ಹೊಸದಾಗಿ ಈ Realme GT 7 Dream Edition ಅನ್ನು ಸಹ ಸೇರಿಸಲಾಗಿದೆ.

ಇದರ ಬಿಡುಗಡೆ ಕಾರ್ಯಕ್ರಮವನ್ನು ಮಧ್ಯಾಹ್ನ 1:30ಕ್ಕೆ ಪ್ರಾರಂಭವಾಗುತ್ತದೆ. ಇದು ಅಮೆಜಾನ್ ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಸ್ಮಾರ್ಟ್ಫೋನ್ ಟೀಸರ್ ಈ ಹ್ಯಾಂಡ್‌ಸೆಟ್‌ನ ವಿನ್ಯಾಸವನ್ನು ಬಹಿರಂಗಪಡಿಸಿಲ್ಲ. ಆದರೆ ಇದು ಕವರ್ ಅಡಿಯಲ್ಲಿ ಹೊದಿಸಲಾದ F1 ರೇಸಿಂಗ್ ಕಾರನ್ನು ಸೂಚಿಸುತ್ತದೆ. ಈ Realme GT 7 Dream Edition ಕಸ್ಟಮೈಸ್ ಮಾಡಿದ ಐಕಾನ್‌ಗಳು ಮತ್ತು ಥೀಮ್‌ಗಳು, ವಿಶಿಷ್ಟ ವಿನ್ಯಾಸ ಅಂಶಗಳು ಮತ್ತು ವಿಶೇಷ ಪ್ಯಾಕೇಜಿಂಗ್ ಜೊತೆಗೆ ಬರುವ ನಿರೀಕ್ಷೆಗಳಿವೆ.

ಇದನ್ನೂ ಓದಿ: ನಿಮಗೊಂದು ಲೇಟೆಸ್ಟ್ 5G Smartphones ಸುಮಾರು 10,000 ರೂಗಳೊಳಗೆ ಬೇಕಿದ್ದರೆ ಈ ಲೇಟೆಸ್ಟ್ ಲಿಸ್ಟ್ ಒಮ್ಮೆ ಪರಿಶೀಲಿಸಿ!

Realme GT 7 ಸ್ಮಾರ್ಟ್ಫೋನ್ ನಿರೀಕ್ಷಿತ ಫೀಚರ್ಗಳೇನು?

ಕಂಪನಿಯು ಈಗಾಗಲೇ ಮುಂಬರುವ Realme GT 7 ಅನ್ನು IceSense Blue ಮತ್ತು IceSense Black ಬಣ್ಣಗಳಲ್ಲಿ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ . ಇದು 120W ವೈರ್ಡ್ ಚಾರ್ಜಿಂಗ್‌ನೊಂದಿಗೆ 7,000mAh ಬ್ಯಾಟರಿಯನ್ನು ಹೊಂದಿರುತ್ತದೆ. ಇದು ಹುಡ್ ಅಡಿಯಲ್ಲಿ MediaTek Dimensity 9400e ಪ್ರೊಸೆಸರ್ ಅನ್ನು ಹೊಂದಿರುತ್ತದೆ.

Realme GT 7 ಸ್ಮಾರ್ಟ್‌ಫೋನ್ 6.78 ಇಂಚಿನ 1.5K LTPS AMOLED ಡಿಸ್‌ಪ್ಲೇಯನ್ನು 120Hz ರಿಫ್ರೆಶ್ ದರ ಮತ್ತು 6,000 nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಹೊಂದಿದೆ ಎಂದು ವದಂತಿಗಳಿವೆ . ಇದು 50-ಮೆಗಾಪಿಕ್ಸೆಲ್ಪ್ರಾ ಪ್ರೈಮರಿ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿರಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo