ಭಾರತದಲ್ಲಿ 6000mAh ಬ್ಯಾಟರಿಯ Realme C73 5G ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

HIGHLIGHTS

ರಿಯಲ್‌ಮಿ (Realme) ಭಾರತದಲ್ಲಿ ತನ್ನ ಲೇಟೆಸ್ಟ್ Realme C73 5G ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.

Realme C73 5G ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಮತ್ತು 120Hz ರಿಫ್ರೆಶ್ ರೇಟ್ನೊಂದಿಗೆ ಪರಿಚಯಿಸಿದೆ.

Realme C73 5G ಸ್ಮಾರ್ಟ್‌ಫೋನ್ ಆರಂಭಿಕ 4GB RAM ಕೇವಲ 12,000 ರೂಗಳೊಳಗೆ ಬಿಡುಗಡೆಗೊಳಿಸಿದೆ.

ಭಾರತದಲ್ಲಿ 6000mAh ಬ್ಯಾಟರಿಯ Realme C73 5G ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ (Realme) ಭಾರತದಲ್ಲಿ ತನ್ನ ಲೇಟೆಸ್ಟ್ Realme C73 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 6,000mAh ಬ್ಯಾಟರಿಯನ್ನು ನೀಡುತ್ತದೆ. ಇದರಲ್ಲಿ ಕಣ್ಣುಗಳಿಗೆ ಕಂಫರ್ಟ್ ನೀಡುವ ಡಿಸ್ಪ್ಲೇ ಮತ್ತು ಮೀಡಿಯಾಟೆಕ್‌ನ ಡೈಮೆನ್ಸಿಟಿ ಪ್ರೊಸೆಸರ್ ನೀಡಲಾಗಿದೆ. ಫೋನ್ ಆರಂಭಿಕ 4GB RAM ಜೊತೆಗೆ ಕೇವಲ 10,499 ರೂಗಳಿಂದ ಶುರುವಾಗುವ ಈ ಸ್ಮಾರ್ಟ್ ಫೋನ್‌ನ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿದೆ. ಈ ಹೊಸ ರಿಯಲ್‌ಮಿ 5G ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಫೋನ್ ಮಿಲಿಟರಿ ದರ್ಜೆಯ ರಕ್ಷಣೆಯೊಂದಿಗೆ ಬರುತ್ತದೆ ಅನ್ನೋದು ವಿಶೇಷವಾಗಿದೆ.

Digit.in Survey
✅ Thank you for completing the survey!

Realme C73 5G ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ

Realme C73 5G ಸ್ಮಾರ್ಟ್ಫೋನ್‌ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ರೂಪಾಂತರವನ್ನು ₹10,499 ರೂಗಳಿಗೆ ಮತ್ತು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹11,499 ರೂಗಳಿಗೆ ಬಿಡುಗಡೆ ಮಾಡಲಾಗಿದೆ. ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ. ಆಸಕ್ತ ಗ್ರಾಹಕರು ಫ್ಲಿಪ್ಕಾರ್ಟ್ ಭೇಟಿ ನೀಡಿ ಖರೀದಿಸಬಹುದು.

Realme C73 5G L:aunched in India

Realme C73 5G ಸ್ಮಾರ್ಟ್‌ಫೋನ್ ಫೀಚರ್ಗಳೇನು?

ಮೊದಲಿಗೆ ಈ ಸ್ಮಾರ್ಟ್ಫೋನ್ 6.67 ಇಂಚಿನ HD+ (720×1,604 ಪಿಕ್ಸೆಲ್‌ಗಳು) ಕಣ್ಣುಗಳಿಗೆ ಕಂಫರ್ಟ್ ನೀಡುವ ಡಿಸ್ಪ್ಲೇಯನ್ನು 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಪ್ರೈಮರಿ 32MP ಕ್ಯಾಮೆರಾ ಮತ್ತೊಂದು ಆಟೋ ಫೋಕಸ್ ಸೆನ್ಸರ್ ಜೊತೆಗೆ ಬರುತ್ತದೆ. Realme C73 5G ಸ್ಮಾರ್ಟ್‌ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಇದನ್ನೂ ಓದಿ: ಕೇವಲ ಕರ್ನಾಟಕದವರಿಗೆ ಮಾತ್ರ! BSNL ಪ್ರತಿದಿನ 3GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು 30 ದಿನಗಳಿಗೆ ಅತಿ ಕಡಿಮೆ ಬೆಲೆಗೆ ಲಭ್ಯ!

Realme C73 5G L:aunched in India
Realme C73 5G

ಅಲ್ಲದೆ ಫೋನ್ 6nm ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ನಿಂದ ಚಾಲಿತವಾಗಿದೆ. ಇದು ಆಂಡ್ರಾಯ್ಡ್ 15-ಆಧಾರಿತ Realme UI 6 ನೊಂದಿಗೆ ಬರುತ್ತದೆ. Realme C73 5G ಸ್ಮಾರ್ಟ್‌ಫೋನ್ 6,000mAh ಬ್ಯಾಟರಿಯನ್ನು ಹೊಂದಿದ್ದು, 15W ವೈರ್ಡ್ ಚಾರ್ಜಿಂಗ್ ಜೊತೆಗೆ 5W ರಿವರ್ಸ್ ಚಾರ್ಜಿಂಗ್ ಅನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಮತ್ತು MIL-STD 810H ಮಿಲಿಟರಿ-ಗ್ರೇಡ್ ಆಘಾತ ನಿರೋಧಕ ಪ್ರಮಾಣೀಕರಣವನ್ನು ಹೊಂದಿದೆ. ಇದು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo