ಭಾರತದಲ್ಲಿ ರಿಯಲ್‌ಮಿ ತನ್ನ ಇತ್ತೀಚಿನ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ Realme C51 ಅನ್ನು ಬಿಡುಗಡೆ ಮಾಡಿದೆ. ಹೊಸ Realme C51 ಎರಡು ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಮಿಂಟ್ ಗ್ರೀನ್ ಮತ್ತು ಕಾರ್ಬನ್ ಬ್ಲ್ಯಾಕ್ ಮತ್ತು Realme UI T ಆವೃತ್ತಿಯ ಮೇಲೆ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ರಿಯಲ್‌ಮಿ ಇದನ್ನು 4G ರೂಪಾಂತರವಾಗಿದ್ದು ಇದನ್ನು ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. ಆಸಕ್ತರು ICICI ಮತ್ತು HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಭರ್ಜರಿ ಡಿಸ್ಕೌಂಟ್ಗಳನ್ನು ಪಡೆಯಬಹುದು.
Survey
✅ Thank you for completing the survey!
Realme C51 ಡಿಸ್ಪ್ಲೇ ಮತ್ತು ಸ್ಟೋರೇಜ್
Realme C51 ಮಾಲಿ-G57 GPU ಜೊತೆಗೆ ಆಕ್ಟಾ-ಕೋರ್ Unisoc T612 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಫೋನ್ 6.74 ಇಂಚಿನ HD+ ಜೊತೆಗೆ 90Hz ರಿಫ್ರೆಶ್ ರೇಟ್ LCD ಡಿಸ್ಪ್ಲೇಯನ್ನು ಹೊಂದಿದೆ. ಇದು 560 nits ವರೆಗೆ ಗರಿಷ್ಠ ಹೊಳಪನ್ನು ನೀಡುತ್ತದೆ. Ralme C51 ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಜೊತೆಗೆ ಬರುತ್ತದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದಾಗಿದೆ.
ಕ್ಯಾಮೆರಾಗಳ ವಿಷಯದಲ್ಲಿ Realme C51 ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಕ್ಯಾಮೆರಾಗಳ ವಿಷಯದಲ್ಲಿ Realme C51 ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ರಾತ್ರಿ ಮೋಡ್, ಪನೋರಮಿಕ್ ವ್ಯೂ ಮೋಡ್ ಮತ್ತು ಹೆಚ್ಚಿನ ಫೋಟೋಗ್ರಾಫಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗವು f/2.0 ಅಪರ್ಚರ್ ಜೊತೆಗೆ 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Realme C51 ಬ್ಯಾಟರಿ
Realme ನ ಇತ್ತೀಚಿನ ಕೊಡುಗೆಯು 5000mAh ಬ್ಯಾಟರಿಯೊಂದಿಗೆ ಪ್ಯಾಕ್ ಮಾಡಲಾಗಿದ್ದು ಕಂಪನಿಯ 33W SUPERVOOC ಚಾರ್ಜಿಂಗ್ ಅನ್ನು ಬಳಸಿಕೊಂಡು ಕೇವಲ 28 ನಿಮಿಷಗಳಲ್ಲಿ 0 ರಿಂದ 50 ವರೆಗೆ ಚಾರ್ಜ್ ಮಾಡಬಹುದು.
Realme C51 ಬೆಲೆ ಲಭ್ಯತೆ ಮತ್ತು ಬಿಡುಗಡೆ ಕೊಡುಗೆಗಳು:
Realme C51 ಇಂದು ಸಂಜೆ 6 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ ₹8,999 ಬೆಲೆಯಲ್ಲಿ ಲಭ್ಯವಾಗಲಿದೆ. ಸೆಪ್ಟೆಂಬರ್ 6 ರಿಂದ Realme.com ಮತ್ತು ಅಧಿಕೃತ Realme ಸ್ಟೋರ್‌ಗಳಿಂದ ಫೋನ್ ಅನ್ನು ಖರೀದಿಸಬಹುದು. ನಿಮಗೆ ICICI ಮತ್ತು HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವುದರ ಮೇಲೆ ಲಾಂಚ್ ಕೊಡುಗೆಯ ಭಾಗವಾಗಿ Realme ಸುಮಾರು ₹500 ರಿಯಾಯಿತಿಯನ್ನು ನೀಡುತ್ತಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile