POCO X5 vs Realme 10 Pro vs Redmi Note 12: ಟಾಪ್ 5 ಫೀಚರ್‌ಗಳ ಹೋಲಿಕೆಯಲ್ಲಿ ಯಾವ ಫೋನ್ ಬೆಸ್ಟ್?

POCO X5 vs Realme 10 Pro vs Redmi Note 12: ಟಾಪ್ 5 ಫೀಚರ್‌ಗಳ ಹೋಲಿಕೆಯಲ್ಲಿ ಯಾವ ಫೋನ್ ಬೆಸ್ಟ್?
HIGHLIGHTS

POCO X5 vs Realme 10 Pro vs Redmi Note 12 ಟಾಪ್ 5 ಫೀಚರ್‌ಗಳ ಹೋಲಿಕೆಯಲ್ಲಿ ಯಾವ ಫೋನ್ ಬೆಸ್ಟ್

ಪ್ರಸ್ತುತ 5G ಸ್ಮಾರ್ಟ್ಫೋನ್ ವೈರ್‌ಲೆಸ್ ಟೆಕ್ನಾಲಜಿಯೊಂದಿಗೆ 5G ನೆಟ್‌ವರ್ಕ್ ಪ್ರವೇಶಸಲು ಉತ್ತಮ ಫೋನ್ಗಳು

POCO X5 vs Realme 10 Pro vs Redmi Note 12 ಈ ಮೂರು ಸ್ಮಾರ್ಟ್‌ಫೋನ್‌ಗಳು 5000mAh ಬ್ಯಾಟರಿ ಹೊಂದಿವೆ.

POCO X5 vs Realme 10 Pro vs Redmi Note 12: ಪ್ರತಿ ತಿಂಗಳು ಅನೇಕ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತವೆ. ಪ್ರತಿಯೊಂದು ಫೋನ್‌ಗಳಲ್ಲೂ ಬೆಲೆ, ಫೀಚರ್ಸ್‌ ಹಾಗೂ ಇನ್ನಿತರೆ ವಿಷಯಗಳು ಭಿನ್ನವಾಗಿರುತ್ತವೆ. ಪ್ರಸ್ತುತ  5G ಸ್ಮಾರ್ಟ್ಫೋನ್ ವೈರ್‌ಲೆಸ್ ತಂತ್ರಜ್ಞಾನವಿದ್ದು ಇಂದು ಪ್ರತಿ ಒಬ್ಬುರೂ 5G ನೆಟ್‌ವರ್ಕ್ ಅನ್ನು ಪ್ರವೇಶಿಸಲು 5G ಸಂಪರ್ಕವನ್ನು ಹೊಂದಿರುವ ಸ್ಮಾರ್ಟ್ಫೋನ್ ಖರೀದಿಸಲು ಬಯಸುವರು. ಅದಕ್ಕಾಗಿ ನಾವು ಭಾರತದಲ್ಲಿ ಖರೀದಿಸಲು ಪ್ರಸ್ತುತ ಲೇಟೆಸ್ಟ್ ಆಗಿ ಲಭ್ಯವಿರುವ 5G ಕನೆಕ್ಷನ್ ಸ್ಮಾರ್ಟ್‌ಫೋನ್‌ಗಳಾದ POCO X5, Realme 10 Pro, Redmi Note 12 ಈ ಮೂರು ಫೋನ್‌ಗಳ ಬೆಲೆ ಮತ್ತು ಫೀಚರ್‌ಗಳ ಮೂಲಕ ಒಂದಕ್ಕೊಂದು ಹೋಲಿಸಲಿದ್ದು ಇವುಗಳಲ್ಲಿ ಯಾವುದು ಬೆಸ್ಟ್ ನೋಡೋಣ.

POCO X5 vs Realme 10 Pro vs Redmi Note 12 ಡಿಸ್ಪ್ಲೇ

Poco X5 5G ಸ್ಮಾರ್ಟ್ಫೋನ್ 6.67 ಇಂಚಿನ FHD+ ಸೂಪರ್ AMOLED ಡಿಸ್ಪ್ಲೇಯೊಂದಿಗೆ 1080×2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹಾಗೂ 120Hz ರಿಫ್ರೆಶ್ ದರವನ್ನು ಹೊಂದಿದೆ. ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಅನ್ನು ಒಳಗೊಂಡಿದೆ. Realme 10 Pro ಸ್ಮಾರ್ಟ್ಫೋನ್ ಪೂರ್ಣ HD ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ LCD ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಡಿಸ್ಪ್ಲೇ 680 ನಿಟ್‌ಗಳ ಹೊಳಪನ್ನು ನೀಡುತ್ತದೆ. ಅಲ್ಲದೆ ಇದು ಪ್ಯಾನೆಲ್ TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣವನ್ನು ಸಹ ತೋರಿಸುತ್ತದೆ. Redmi Note 12 5G ಸ್ಮಾರ್ಟ್ಫೋನ್ 20Hz AMOLED ಡಿಸ್‌ಪ್ಲೇ ಮತ್ತು ಸ್ನಾಪ್ಡ್ರಾಗನ್ 4 ಜೆನ್ 1 ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಒಳಗೊಂಡಿದೆ.

POCO X5 vs Realme 10 Pro vs Redmi Note 12 ಕ್ಯಾಮೆರಾ

Poco X5 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 48MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಈ ಫೋನ್‌ ಒಳಗೊಂಡಿದ್ದು ಸೆಲ್ಫಿಗಾಗಿ 13MP ಕ್ಯಾಮೆರಾವನ್ನು ಹೊಂದಿದೆ. Realme 10 Pro  ಸ್ಮಾರ್ಟ್‌ಫೋನ್ ನ ಹಿಂದಿನ ಕ್ಯಾಮೆರಾ ಸೆಟಪ್ 108 ಮೆಗಾಪಿಕ್ಸೆಲ್ ಆಗಿದ್ದು ಪ್ರೈಮರಿ ಕ್ಯಾಮೆರಾ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್  ಇದು ಒಳಗೊಂಡಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. Redmi Note 12 5G ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದು 48MP ಮುಖ್ಯ ಕ್ಯಾಮೆರಾ 8MP ಅಲ್ಟ್ರಾವೈಡ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಹೊಂದಿದೆ. ಇನ್ನು ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 13MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವಿದೆ.

POCO X5 vs Realme 10 Pro vs Redmi Note 12 ಪ್ರೊಸೆಸರ್

Poco X5 5G ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ನಿಂದ ಚಾಲಿತವಾಗಿರುವ  ಈ ಫೋನ್‌ 8GB LPDDR4X RAM ಮತ್ತು 256GB ವರೆಗಿನ UFS 2.2 ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಇದನ್ನು ಮೈಕ್ರೊ SD ಕಾರ್ಡ್‌ನೊಂದಿಗೆ 1TB ವರೆಗೆ ವಿಸ್ತರಿಸಬಹುದು. ಇದು Android 13 ಮೇಲೆ MIUI ಅನ್ನು ರನ್ ಮಾಡುತ್ತದೆ. Realme 10 Pro ಹುಡ್ ಅಡಿಯಲ್ಲಿ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಇದು 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಈ ಫೋನ್‌ ಮೈಕ್ರೋ SD ಕಾರ್ಡ್ ಸ್ಲಾಟ್ ಅನ್ನು ಹೊಂದಿಲ್ಲ. ಇದು Android 13 ಆಧಾರಿತ Realme UI 4.0 ಅನ್ನು ರನ್ ಮಾಡುತ್ತದೆ. Redmi Note 12 5G ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 4 ಜನ್‌ 1 ಪ್ರೊಸೆಸರ್‌ ನಿಂದ ಚಾಲಿತವಾಗಿದೆ. ಈ ಫೋನ್ 4GB/6GB RAM ಮತ್ತು 128GB ವೇರಿಯಂಟ್‌ನಲ್ಲಿ ಲಭ್ಯವಿದೆ. ಹೆಚ್ಚುವರಿ ಇಂಟರ್ನಲ್ ಸ್ಟೋರೇಜ್‌ಗಾಗಿ ಇದು ಮೈಕ್ರೋ SD ಕಾರ್ಡ್‌ ಸೌಲಭ್ಯವನ್ನು ಪಡೆದುಕೊಂಡಿದೆ.

POCO X5 vs Realme 10 Pro vs Redmi Note 12 ಬ್ಯಾಟರಿ

ಬ್ಯಾಟರಿ ವಿಷಯದಲ್ಲಿ ಈ ಮೂರು ಸ್ಮಾರ್ಟ್‌ಫೋನ್ಗಳು ಒಂದೆ ರೀತಿಯಿದ್ದು ಇವೆಲ್ಲವೂ 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯಿಂದ ಚಾಲಿತವಾಗಿವೆ. ನೀವು ದೀರ್ಘ ಬ್ಯಾಟರಿ ಬಾಳಿಕೆಯನ್ನು ಪರಿಗಣಿಸುತ್ತಿದ್ದರೆ ಈ ಮೂರರಲ್ಲಿ ಯಾವುದಾದರೂ ನಿಮಗೆ ಉತ್ತಮ ಸೇವೆಯನ್ನು ನೀಡುತ್ತದೆ. ಈ ಫೋನ್‌ಗಳನ್ನು ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಇಡೀ ದಿನ ಬಳಕೆ ಮಾಡಬಹುದು. ಹಾಗೆಯೇ ಇವು ಪೂರ್ಣವಾಗಿ ಚಾರ್ಜ್‌ ಆಗಲು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ.

POCO X5 vs Realme 10 Pro vs Redmi Note 12 ಬೆಲೆ

Poco X5 5G ಸೂಪರ್ನೋವಾ ಗ್ರೀನ್, ವೈಲ್ಡ್‌ಕ್ಯಾಟ್ ಬ್ಲೂ ಮತ್ತು ಜಾಗ್ವಾರ್ ಬ್ಲ್ಯಾಕ್ ಕಲರ್‌ಗಳ ಆಯ್ಕೆಯಲ್ಲಿ ರೂ 18,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. Realme 10 Pro ಡಾರ್ಕ್ ಮ್ಯಾಟರ್, ಹೈಪರ್ ಸ್ಪೇಸ್, ನೆಬುಲಾ ಬ್ಲೂ ಕಲರ್‌ಗಳ ಆಯ್ಕೆಯಲ್ಲಿ ರೂ 18,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. Redmi Note 12 5G ಮ್ಯಾಟ್ ಬ್ಲಾಕ್, ಫ್ರಾಸ್ಟೆಡ್ ಗ್ರೀನ್, ಮಿಸ್ಟಿಕ್ ಬ್ಲೂ,  ಕಲರ್‌ಗಳ ಆಯ್ಕೆಯಲ್ಲಿ ರೂ 17,298 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo