Oppo Find X9 Series ಸ್ಮಾರ್ಟ್ಫೋನ್ಗಳು Dimensity 9500 ಪ್ರೊಸೆಸರ್ನೊಂದಿಗೆ ಬಿಡುಗಡೆಯಾಗಲು ಸಜ್ಜು!

Oppo Find X9 Series ಸ್ಮಾರ್ಟ್ಫೋನ್ಗಳು Dimensity 9500 ಪ್ರೊಸೆಸರ್ನೊಂದಿಗೆ ಬಿಡುಗಡೆಯಾಗಲು ಸಜ್ಜು!

ಒಪ್ಪೋ ಕಂಪನಿಯ ಬಹು ನಿರೀಕ್ಷಿತ ಫ್ಲಾಗ್‌ಶಿಪ್ ಅತ್ಯುತ್ತಮ ಫೋನ್ Oppo Find X9 Series ಭಾರತದಲ್ಲಿ ಮುಂದಿನ ತಿಂಗಳು ಅಂದ್ರೆ ನವೆಂಬರ್ 2025 ರಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಕಂಪನಿ ಇದನ್ನು ಈಗಾಗಲೇ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025 ರಲ್ಲಿ ಈ ವಿಷಯವನ್ನು ಘೋಷಿಸಲಾಗಿದೆ. ಈ ಹೊಸ ಫೋನ್‌ಗಳು ಮೀಡಿಯಾಟೆಕ್ ಡೈಮೆನ್ಸಿಟಿ 9500 (MediaTek Dimensity 9500) ಚಿಪ್‌ಸೆಟ್‌ನೊಂದಿಗೆ ಬರಲಿವೆ. ಇದು ಹಿಂದಿನ ಮಾದರಿಗಿಂತ ಬಹಳಷ್ಟು ಉತ್ತಮ ಕಾರ್ಯಕ್ಷಮತೆ ಮತ್ತು ವೇಗವನ್ನು ನೀಡುತ್ತದೆ. ಈ ಸರಣಿಯಲ್ಲಿ Oppo Find X9 ಮತ್ತು Find X9 Pro ಮಾದರಿಗಳು ಮಾರುಕಟ್ಟೆಗೆ ಬರಲಿವೆ.

Digit.in Survey
✅ Thank you for completing the survey!

MediaTek Dimensity 9500 ಪ್ರೊಸೆಸರ್ನೊಂದಿಗೆ ಬರಲಿವೆ

ಒಪ್ಪೋ ಫೈಂಡ್ ಎಕ್ಸ್9 ಸರಣಿಯ ಪ್ರಮುಖ ಶಕ್ತಿಯ ಮೂಲ ಡೈಮೆನ್ಸಿಟಿ 9500 ಚಿಪ್‌ಸೆಟ್ ಆಗಿದೆ. ಈ ಚಿಪ್ ಅತ್ಯಾಧುನಿಕ 3nm ತಂತ್ರಜ್ಞಾನದಲ್ಲಿ (Technology) ತಯಾರಾಗಿದೆ. ಇದು ಸಿಪಿಯು (CPU) ನಲ್ಲಿ 4.21GHz ವೇಗದ ಅಲ್ಟ್ರಾ-ಕೋರ್ (Ultra-Core) ಅನ್ನು ಹೊಂದಿದೆ. ಈ ವಿನ್ಯಾಸದಿಂದಾಗಿ ಹಿಂದಿನ ಚಿಪ್‌ಗಿಂತ ಶೇ. 32 ರಷ್ಟು ಉತ್ತಮ ಸಿಂಗಲ್-ಕೋರ್ (Single-core) ಮತ್ತು ಶೇ. 17 ರಷ್ಟು ಉತ್ತಮ ಮಲ್ಟಿ-ಕೋರ್ (Multi-core) ಕಾರ್ಯಕ್ಷಮತೆ ಸಿಗಲಿದೆ ಎಂದು ಕಂಪನಿ ಹೇಳಿದೆ.

Oppo Find X9 Series

ಇದಲ್ಲದೆ ಹೊಸ ಆರ್ಮ್ ಜಿ1-ಅಲ್ಟ್ರಾ ಜಿಪಿಯು (Arm G1-Ultra GPU) ಗ್ರಾಫಿಕ್ಸ್ (Graphics) ವೇಗವನ್ನು ಶೇ. 33 ರಷ್ಟು ಹೆಚ್ಚಿಸುತ್ತದೆ ಮತ್ತು ಶಕ್ತಿಯ ಬಳಕೆಯನ್ನು ಶೇ. 42 ರಷ್ಟು ಕಡಿಮೆ ಮಾಡುತ್ತದೆ. ಇದರಿಂದ ಮೊಬೈಲ್ ಗೇಮಿಂಗ್ (Gaming) ಮಾಡುವಾಗ ಅತ್ಯುತ್ತಮ ಅನುಭವ ಸಿಗುತ್ತದೆ. ಹೆಚ್ಚಿನ ತಾಪಮಾನ ಏರದಂತೆ (Heat) ಒಪ್ಪೋ ವಿಶೇಷ ಕೂಲಿಂಗ್ ಸಿಸ್ಟಮ್ (Cooling System) ಅನ್ನು ಕೂಡ ಅಳವಡಿಸಿದೆ.

Also Read: Flipkart Diwali Sale: ಫ್ಲಿಪ್ಕಾರ್ಟ್ ಸೇಲ್‌ನಲ್ಲಿ 35,000 ರೂಗಳೊಳಗೆ ಲಭ್ಯವಿರುವ ಬೆಸ್ಟ್ ಲ್ಯಾಪ್‌ಟಾಪ್‌ಗಳು!

Oppo Find X9 Series ಕ್ಯಾಮೆರಾ, ಬ್ಯಾಟರಿ ಮತ್ತು ಸಾಫ್ಟ್‌ವೇರ್

ಫೈಂಡ್ ಎಕ್ಸ್9 ಸರಣಿಯಲ್ಲಿ ಡೈಮೆನ್ಸಿಟಿ 9500 ಚಿಪ್‌ನ ಜೊತೆಗೆ ಇತರೆ ಪ್ರೀಮಿಯಂ (Premium) ವೈಶಿಷ್ಟ್ಯಗಳೂ ಇವೆ. ಈ ಫೋನ್‌ಗಳು ಆಂಡ್ರಾಯ್ಡ್ 16 (Android 16) ಆಧಾರಿತ ಹೊಸ ಕಲರ್‌ಓಎಸ್ 16 (ColorOS 16) ಸಾಫ್ಟ್‌ವೇರ್‌ನೊಂದಿಗೆ ಬರಲಿವೆ. ಒಪ್ಪೋದ ಟ್ರಿನಿಟಿ ಎಂಜಿನ್ (Trinity Engine) ಈ ಚಿಪ್‌ಸೆಟ್‌ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ.

ಕ್ಯಾಮೆರಾ ವಿಷಯಕ್ಕೆ ಬಂದರೆ ಈ ಫೋನ್‌ಗಳು ಹಾಸಲ್‌ಬ್ಲಾಡ್ (Hasselblad) ಜೊತೆ ಸೇರಿ ತಯಾರಿಸಿದ ಕ್ಯಾಮೆರಾ ಸೆಟಪ್ (Camera Setup) ಅನ್ನು ಹೊಂದಿರುತ್ತವೆ. ಫೈಂಡ್ ಎಕ್ಸ್9 ಪ್ರೋ ಮಾದರಿಯಲ್ಲಿ ಶಕ್ತಿಯುತವಾದ 200-ಮೆಗಾಪಿಕ್ಸೆಲ್ (Megapixel) ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (Periscope Telephoto Lens) ಇರಲಿದೆ. ಬ್ಯಾಟರಿ ಬಗ್ಗೆ ಹೇಳುವುದಾದರೆ ಸಾಮಾನ್ಯ ಫೈಂಡ್ ಎಕ್ಸ್9 ಫೋನ್‌ನಲ್ಲಿ ದೊಡ್ಡದಾದ 7,000mAh ಬ್ಯಾಟರಿ ಮತ್ತು ಫೈಂಡ್ ಎಕ್ಸ್9 ಪ್ರೋನಲ್ಲಿ ಇನ್ನೂ ದೊಡ್ಡದಾದ 7,500mAh ಬ್ಯಾಟರಿ ಇರಬಹುದು. ಇವೆರಡೂ ವೇಗದ ಚಾರ್ಜಿಂಗ್ (Fast Charging) ಅನ್ನು ಸಹ ಬೆಂಬಲಿಸುತ್ತವೆ. ಈ ಫೋನ್‌ಗಳು 16GB RAM ಮತ್ತು 1TB ಸ್ಟೋರೇಜ್ (Storage) ನಷ್ಟು ಆಯ್ಕೆಗಳಲ್ಲಿ ಲಭ್ಯವಾಗಲಿವೆ.

Oppo Find X9 Series

ಭಾರತದಲ್ಲಿ ಬಿಡುಗಡೆ ಮತ್ತು ಮಾರುಕಟ್ಟೆ ಪರಿಣಾಮ

ನವೆಂಬರ್‌ನಲ್ಲಿ ಭಾರತದಲ್ಲಿ ಫೈಂಡ್ ಎಕ್ಸ್9 ಸರಣಿಯ ಬಿಡುಗಡೆಯು ಈ ಹೊಸ ಡೈಮೆನ್ಸಿಟಿ 9500 ಚಿಪ್ ಅನ್ನು ಪಡೆಯುವ ಮೊದಲ ದೇಶಗಳಲ್ಲಿ ಭಾರತವೂ ಒಂದು ಎಂಬುವುದನ್ನು ತೋರಿಸುತ್ತದೆ. ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಒಪ್ಪೋ ಹೆಚ್ಚು ಗಮನ ಕೊಡುತ್ತಿದೆ ಎಂದು ಇದು ಸೂಚಿಸುತ್ತದೆ. ಈ ಸರಣಿಯು ತನ್ನ ಶಕ್ತಿ, ಅತ್ಯುತ್ತಮ ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿ ಸಾಮರ್ಥ್ಯದೊಂದಿಗೆ ಇತರ ಫ್ಲಾಗ್‌ಶಿಪ್ ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ. ಚೀನಾದಲ್ಲಿ ಅಕ್ಟೋಬರ್ 16 ರಂದು ಫೋನ್‌ಗಳು ಬಿಡುಗಡೆಯಾದ ನಂತರ ಇದರ ಬೆಲೆ ಮತ್ತು ಇನ್ನಷ್ಟು ನಿಖರವಾದ ವಿವರಗಳು ತಿಳಿದುಬರಲಿವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo