ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಬರಲಿದೆ Nothing phone 4a Pro ಫೋನ್‌! ಕುತೂಹಲ ಮೂಡಿಸಿದ ಫೀಚರ್ಸ್‌

HIGHLIGHTS

Nothing Phone 4a Pro ಮೊಬೈಲ್‌ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಲಿದೆ

Nothing Phone 4a Pro ಫೋನ್ Snapdragon 8s Gen 3 ಚಿಪ್‌ಸೆಟ್‌ ಪಡೆದಿರುವ ನಿರೀಕ್ಷೆಗಳಿವೆ

Nothing Phone 4a Pro ಮೊಬೈಲ್‌ 5,080mAh ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಹೊಂದಿರಲಿದೆ

ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಬರಲಿದೆ Nothing phone 4a Pro ಫೋನ್‌! ಕುತೂಹಲ ಮೂಡಿಸಿದ ಫೀಚರ್ಸ್‌

ಟೆಕ್ ಬ್ರ್ಯಾಂಡ್ Nothing ಸಂಸ್ಥೆಯು Nothing Phone 3a ಮತ್ತು Nothing Phone 3a Pro ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯ ಗಮನ ಸೆಳೆದಿದೆ. ಈ ಮೊಬೈಲ್‌ ಸಂಸ್ಥೆಯು ಇದೀಗ Nothing Phone 3a ಫೋನ್‌ ಸರಣಿಯ ಮುಂದಿನ ಭಾಗವಾಗಿ Nothing Phone 4a ಮತ್ತು Nothing Phone 4a Pro ಮಾಡೆಲ್‌ಗಳನ್ನು ಮಾರುಕಟ್ಟೆಗೆ ತರುವ ಸಿದ್ಧತೆಯಲ್ಲಿ ಇದೆ. ಈ ಮುಂಬರುವ ಫೋನ್‌ಗಳ ಲಾಂಚ್ ದಿನಾಂಕವನ್ನು ಕಂಪನಿಯು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ಆದರೆ ಬರಲಿರುವ ಸರಣಿಯ Nothing Phone 4a Pro ಮಾಡೆಲ್‌ ಇದೀಗ ಭಾರತೀಯ ಪ್ರಮಾಣೀಕರಣ ವೆಬ್‌ಸೈಟ್ BIS ನಲ್ಲಿ ಕಾಣಿಸಿಕೊಂಡಿದೆ.

Digit.in Survey
✅ Thank you for completing the survey!

Also Read : Vivo V50 5G ಬೆಲೆಯಲ್ಲಿ 7,500ರೂಗಳ ಇಳಿಕೆ! ಈ ಫೋನಿನಲ್ಲಿ Snapdragon ಪ್ರೊಸೆಸರ್, 50MP ಕ್ಯಾಮೆರಾ ಇದೆ

Nothing Phone 4a Pro ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

Nothing ಮೊಬೈಲ್‌ ಸಂಸ್ಥೆಯ Nothing Phone 4a Pro ಫೋನ್‌ ಇದೇ ಮಾರ್ಚ್ 2 ರಂದು ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ಕಾರ್ಯಕ್ರಮದಲ್ಲಿ ಈ Nothing Phone 4a Pro ಮೊಬೈಲ್‌ ಘೋಷಿಸಬಹುದು ಎಂದು ಲೀಕ್‌ ವರದಿಗಳು ಸೂಚಿಸುತ್ತವೆ. ಆದರೆ ಕಂಪನಿಯು ನಥಿಂಗ್ ಫೋನ್ 4a ಪ್ರೊ ಬಿಡುಗಡೆ ದಿನಾಂಕವನ್ನು ಅಧಿಕೃತ ಇನ್ನೂ ದೃಢೀಕರಿಸಲಾಗಿಲ್ಲ ಎಂಬುದನ್ನು ಗಮನಿಸಬೇಕು. ಅದಾಗ್ಯೂ, Nothing phone 4a Pro ಮೊಬೈಲ್‌ ಭಾರತ ಮಾರುಕಟ್ಟೆಗೆ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Nothing ಮೊಬೈಲ್‌ ಕಂಪನಿಯ ಮುಂಬರುವ ಹೊಸ Nothing phone 4a Pro ಫೋನ್‌ ಅನ್ನು Bureau of Indian Standards (BIS) ನಲ್ಲಿ A069 ಎಂಬ ಮಾದರಿ ಸಂಖ್ಯೆಯೊಂದಿಗೆ ಪ್ರಮಾಣೀಕರಿಸಲಾಗಿದೆ ಎಂದು ವರದಿಯಾಗಿದೆ. ಇನ್ನು BIS ಲಿಸ್ಟ್‌ನಲ್ಲಿ ಮೊಬೈಲ್‌ನ ಫೀಚರ್ಸ್‌ಗಳು ಅಥವಾ ವಿಶೇಷ ಆಯ್ಕೆಗಳ ಕುರಿತು ಯಾವುದೇ ವಿವರಗಳು ಇಲ್ಲ. ಹಾಗೆಯೇ ಈ ಮೊಬೈಲ್‌ ಯುರೋಪಿಯನ್ ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ EPREL ಎನರ್ಜಿ ಲೇಬಲ್ ಲಿಸ್ಟ್‌ನಲ್ಲಿಯೂ ಕಾಣಿಸಿಕೊಂಡಿದೆ.

Nothing phone 4a Pro ಫೋನಿನ ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಮುಂಬರುವ Nothing phone 4a Pro ಫೋನ್‌ 6.82 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದ್ದು ಇದು 120Hz ಅಥವಾ 144Hz ರಿಫ್ರೆಶ್ ರೇಟ್ ನಲ್ಲಿಕೆಲಸ ಮಾಡುಲಿದೆ ಎನ್ನಲಾಗಿದೆ. ಹಾಗೆಯೇ ಇದು 3000 nits ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆಯಬಹುದು. ಅಲ್ಲದೇ ಈ ಮೊಬೈಲ್ Snapdragon 8s Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶ ಮಾಡುವ ನಿರೀಕ್ಷೆಗಳು ಇವೆ ಹಾಗೂ ಇದು 12GB RAM + 256GB ವರೆಗೂ ಸ್ಟೋರೇಜ್‌ ಆಯ್ಕೆಗಳನ್ನು ಪಡೆದಿರುವ ಸಾಧ್ಯತೆಗಳು ಇವೆ.

ಹಾಗೆಯೇ ಈ ಮೊಬೈಲ್ 5,080 mAh ಬ್ಯಾಟರಿ ಬ್ಯಾಕ್‌ಅಪ್‌ ಬಲವನ್ನು ಬೆಂಬಲಿಸಬಹುದು ಹಾಗೂ ಅದಕ್ಕೆ ಪೂರಕವಾಗಿ 50W ಫಾಸ್ಟ್ ಚಾರ್ಜಿಂಗ್ ಆಯ್ಕೆ ಅನ್ನು ಒಳಗೊಂಡಿರುವ ನಿರೀಕ್ಷೆಗಳು ಅಧಿಕ ಆಗಿವೆ. ಇದಲ್ಲದೇ ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಸೌಲಭ್ಯ ಅನ್ನು ಪಡೆಯಬಹುದು ಎನ್ನಲಾಗಿದೆ. ನಥಿಂಗ್ ಮೊಬೈಲ್‌ ಕಂಪನಿಯ ಬರಲಿರುವ ಈ ಹೊಸ ಫೋನ್‌ ಆಂಡ್ರಾಯ್ಡ್ 16 ಅನ್ನು ಆಧರಿಸಿದ ನಥಿಂಗ್ OS 4 ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo