Nokia 106 (2018) ಭಾರತದಲ್ಲಿ ಕೇವಲ 1299 ರೂಗಳಲ್ಲಿ ಬಿಡುಗಡೆ, ಇದರ ಲಭ್ಯತೆ & ಆಫರ್ ಮಾಹಿತಿ ತಿಳಿಯಿರಿ.

Nokia 106 (2018) ಭಾರತದಲ್ಲಿ ಕೇವಲ 1299 ರೂಗಳಲ್ಲಿ ಬಿಡುಗಡೆ, ಇದರ ಲಭ್ಯತೆ & ಆಫರ್ ಮಾಹಿತಿ ತಿಳಿಯಿರಿ.
HIGHLIGHTS

ಇದರ ಬೆಲೆ ಆಧರಿಸಿ ಈಗಾಗಲೇ ಹೆಚ್ಚು ಘರ್ಷಣೆಗೆ ಒಳಗಾದ ಜಿಯೋಫೋನ್ಗೆ ಸರಿಸಾಟಿಯಾಗಿದೆ.

ಭಾರತದಲ್ಲಿ HMD ಗ್ಲೋಬಲ್ ಕಂಪನಿ ತನ್ನ ನೋಕಿಯಾ ಬ್ರಾಂಡ್ನ ಫೋನ್ ಬಿಡುಗಡೆಗೊಳಿಸಿದೆ. ಕಳೆದ ವರ್ಷ ಹಲವು ಆಂಡ್ರಾಯ್ಡ್ಗಳ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದ್ದು ಈಗ ಕಂಪನಿಯು 2019 ರ ಆರಂಭದಲ್ಲಿಯೇ ಹೊಸ ಫೀಚರ್ ಫೋನ್ ಅನ್ನು ಪ್ರಾರಂಭಿಸಿದೆ. ಈ ಫೋನಿನ ಹೆಸರನ್ನು Nokia 106 (2018) ಎಂದು ಗುರುತಿಸಲಾಗಿದೆ. 

ಈ ಫೋನ್ ನಿಮಗೆ ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿದೆ. ಮತ್ತು ಕಂಪನಿಯ ಅಧಿಕೃತ ವೆಬ್ಸೈಟ್ nokia.com ನಲ್ಲಿಯೂ ಸಹ  ಇದು ಪಟ್ಟಿ ಮಾಡಲ್ಪಟ್ಟಿದೆ. ಈ ಫೋನ್ನ ಬೆಲೆ ಕೇವಲ 1299 ರೂಗಳಾಗಿದ್ದು ಇದರ ಬೆಲೆ ಆಧರಿಸಿ ಈಗಾಗಲೇ ಹೆಚ್ಚು ಘರ್ಷಣೆಗೆ ಒಳಗಾದ  ಜಿಯೋಫೋನ್ಗೆ ಸರಿಸಾಟಿಯಾಗಿದೆ. ಇದು 4MB ಯ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಫೋನ್ನಲ್ಲಿ 2000 ಸಂಪರ್ಕ ಮತ್ತು 500 SMS ಅನ್ನು ಸಂಗ್ರಹಿಸಬಹುದು. 

https://www.jagranimages.com/images/nokia-106-amazon.jpg

https://www.jagranimages.com/images/nokia-106.jpg

ಈ ಫೋನ್ನಲ್ಲಿ ನಿಟ್ರೊ ರೇಸಿಂಗ್, ಡೇಂಜರ್ ಡ್ಯಾಶ್ ಮತ್ತು ಟೆಟ್ರಿಸ್ ಮೊದಲಾದ ಆಟಗಳನ್ನು ನೀಡಿದ್ದು ಕ್ಲಾಸಿಕ್ ಸ್ನೇಕ್ ಝೆನ್ಜಿಯಾ ಆಟ ಕೂಡ ಫೋನ್ನಲ್ಲಿ ಲಭ್ಯವಿದೆ. ಇದು 1.8 ಇಂಚಿನ QQVGA ಟಿಎಫ್ಟಿ ಡಿಸ್ಪ್ಲೇಯನ್ನು ಹೊಂದಿದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 160×120 ಆಗಿದೆ. ಈ ಫೋನ್ಗೆ ಮೀಡಿಯಾಟೆಕ್ MT6261D ಪ್ರೊಸೆಸರ್ ಮತ್ತು 4MB ರಾಮ್ ಅಳವಡಿಸಲಾಗಿದೆ. 

ಈ ಫೋನ್ ಡ್ಯುಯಲ್-ಸಿಮ್ ಅನ್ನು ಬೆಂಬಲಿಸುತ್ತದೆ. ಫೋನ್ ಅನ್ನು ಶಕ್ತಗೊಳಿಸಲು ಇದು 800mAh ಬ್ಯಾಟರಿಯನ್ನು ಹೊಂದಿದೆ. ಚಾರ್ಜಿಂಗ್ಗಾಗಿ ಫೋನ್ ಮೈಕ್ರೋ ಯುಎಸ್ಬಿ ಪೋರ್ಟ್ ಅನ್ನು ಹೊಂದಿದೆ. ಇದು 3.5mm ಹೆಡ್ಫೋನ್ ಜ್ಯಾಕ್ ಹೊಂದಿದೆ. ಇದಲ್ಲದೆ FM ರೇಡಿಯೋ ಮತ್ತು LED ಬ್ಯಾಟರಿ ದೀಪಗಳನ್ನು ಕೂಡಾ ನೀಡಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo